ಸುಬ್ರಹ್ಮಣ್ಯ: ಚೈತನ್ಯ ಕೋಟೆಗೆ ಅವಳಿ ಚಿನ್ನದ ಪದಕ

ಸಮಗ್ರ ನ್ಯೂಸ್: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಭರತನಾಟ್ಯ ಸ್ನಾತಕೋತ್ತರ ಪದವಿಯ ಅಂತಿಮ ಪರೀಕ್ಷೆಯಲ್ಲಿ ವಿದುಷಿ ಚೈತನ್ಯ ಕೋಟೆ ಅವರು ವಿ.ವಿಗೆ ಪ್ರಥಮ ರ‍್ಯಾಂಕ್‌ಗಳಿಸಿ ಅವಳಿ ಚಿನ್ನದ ಪದಕ ಪಡೆದಿದ್ದಾರೆ.

Ad Widget ... ..

ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ್ ವರಖೇಡಿ, ಸಂಗೀತ ವಿವಿ ಕುಲಪತಿ ಪ್ರೊ.ನಾಗೇಶ್ .ವಿ.ಬೆಟ್ಟಕೋಟೆ ಅವರಿಂದ ಅವರು ಪದಕಗಳನ್ನು ಸ್ವೀಕರಿಸಿದರು.

Ad Widget

ಚೈತನ್ಯ ಕೋಟೆ ಅವರು ವಿದುಷಿ ಅಂಶುಮಾಲ ಉಬರಡ್ಕ ಮತ್ತು ವಿದ್ವಾನ್ ಕುಡ್ಕಾಡಿ ವಿಶ್ವನಾಥ ರೈ ಅವರ ಶಿಷ್ಯೆ. ಕುಕ್ಕೆ ಸುಬ್ರಹ್ಮಣ್ಯದ ಬೂದಿಪಳ್ಳ ಭಾಸ್ಕರ ಕೋಟೆ ಮತ್ತು ವೀಣಾ ಕೋಟೆ ದಂಪತಿ ಪುತ್ರಿ. ತಿರುಮಲ ಭಟ್ ಅವರ ಪತ್ನಿ.

Leave a Comment

Your email address will not be published. Required fields are marked *