Ad Widget .

ಹಿರಿಯ ನಟ ಅನಂತ್ ನಾಗ್ ಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರದಿಂದ 2025ನೇ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. 2025ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಕನ್ನಡದ ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರಿಗೆ ಸಂದಿದೆ.

Ad Widget . Ad Widget .

ಇಂದು ಪ್ರಕಟಿಸಿದ 2025ನೇ ಸಾಲಿನ ಅತ್ಯನ್ನತ ನಾಗರಿಕ ಸೇವಾ ಪ್ರಶಸ್ತಿ ಪದ್ಮಭೂಷಣಕ್ಕೆ ಸ್ಯಾಂಡಲ್‌ವುಡ್‌ ಹಿರಿಯ ನಟ ಅನಂತ್‌ನಾಗ್‌ ಭಾಜನರಾಗಿದ್ದಾರೆ.

Ad Widget . Ad Widget .

ಒಟ್ಟೂ 19 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು 113 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ. ಕಲಾ ವಿಭಾಗದಲ್ಲಿ ಹಿರಿಯ ನಟ ಅನಂತ್‌ನಾಗ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

1973ರಲ್ಲಿ ಸಂಕಲ್ಪ ಸಿನಿಮಾದಿಂದ ಶುರುವಾದ ಅನಂತ್‌ನಾಗ್‌ ಅವರ ಜರ್ನಿ, ಅಲ್ಲಿಂದ ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ನಾರದ ವಿಜಯ, ಅನುಪಮಾ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಒಲವು ಮೂಡಿದಾಗ, ಅರುಣ ರಾಗ, ಹೆಂಡ್ತಿಗೆ ಹೇಳ್ಬೇಡಿ, ಗಗನ, ಗೌರಿ ಗಣೇಶ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅನಂತ್‌ನಾಗ್‌ ನಾಯಕನ ಪಾತ್ರದಲ್ಲಿ ನಟಿಸಿದರೆ, ಮುಂಗಾರು ಮಳೆ, ಈ ಬಂಧನ, ಅರಮನೆ, ಗಣೇಶ ಮತ್ತೆ ಬಂದ, ಮೈನಾ, ಗೂಗ್ಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಜಿಎಫ್‌, ಗಾಳಿಪಟ 2 ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಒದಗಿಸಿದ್ದಾರೆ.

Leave a Comment

Your email address will not be published. Required fields are marked *