ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅರೆಸ್ಟ್

ಸಮಗ್ರ ನ್ಯೂಸ್: ಕನ್ನಡ ಬಿಗ್​ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಹಾಗೂ ಯುವಕರ ಗಲಾಟೆ ಪ್ರಕರಣದಲ್ಲಿ ಜಗದೀಶ್ ಅವರು ಅರೆಸ್ಟ್ ಆಗಿದ್ದಾರೆ. ಕೋಡಿಗೆಹಳ್ಳಿ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ. ವಕೀಲ ಜಗದೀಶ್ ಹಾಗೂ ಅವರ ಗನ್ ಮ್ಯಾನ್ ಅರೆಸ್ಟ್ ಆಗಿದ್ದಾರೆ.

Ad Widget ... ..

ಅಣ್ಣಮ್ಮ ಕೂರಿಸೋ ವಿಚಾರಕ್ಕೆ ಗಲಾಟೆ ನಡೆದಿತ್ತು.ಈ ವೇಳೆ ಜಗದೀಶ್ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆ ನಂತರ ಸಾಕಷ್ಟು ಗದ್ದಲ ಉಂಟಾಗಿತ್ತು.

Ad Widget

ಸದ್ಯ ಕೊಡಿಗೇಹಳ್ಳಿ ಪೊಲೀಸರು ಜಗದೀಶ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಕೊಡಿಗೇಹಳ್ಳಿ ಪೊಲೀಸರು ಜಗದೀಶ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿಯ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಿ ರಸ್ತೆ ಬಂದ್​ ಮಾಡಿದ್ದಕ್ಕೆ ಲಾಯರ್​ ಜಗದೀಶ್​ ಜನವರಿ 23ರಂದು ಗಲಾಟೆ ಮಾಡಿದ್ದರು. ಈ ವೇಳೆ ಕೆಲ ಯುವಕರಿಂದ ಲಾಯರ್ ಜಗದೀಶ್ ಗೂಸಾ ತಿಂದಿದ್ದರು.

ಜನವರಿ 24ರಂದು ಜಗದೀಶ್​​ ಗನ್​ಮ್ಯಾನ್​ ಕೊಡಿಗೆಹಳ್ಳಿಯಲ್ಲಿ ಹುಚ್ಚಾಟ ಮೆರೆದಿದ್ದರು. ನಡು ರಸ್ತೆಯಲ್ಲೇ ನಿಂತು ಫೈರಿಂಗ್ ಮಾಡಿದ್ದರು. ಗುಂಡಿನ ಸದ್ದು ಕೇಳಿ ಬೆಚ್ಚಿದ ಜನರು ರೊಚ್ಚಿಗೆದ್ದು ಜಗದೀಶ್​ ಹಾಗೂ ಆತನ ಗನ್ ಮ್ಯಾನ್​ಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ ಎನ್ನಲಾಗ್ತಿದೆ.

ಜನವರಿ 24ರಂದು ಕೊಡಿಗೆಹಳ್ಳಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಜಗದೀಶ್ ಹಾಗೂ ಸ್ಥಳೀಯನ ನಡುವೆ ಅಣ್ಣಮ್ಮನನ್ನು ಕೂರಿಸಿದ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ಸ್ಥಳೀಯರು ಹಾಗೂ ವಕೀಲ ಜಗದೀಶ್ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿತ್ತು. ಸ್ಥಳೀಯರು ಜಗದೀಶ್​ ಸ್ಕಾರ್ಪಿಯೋ ಕಾರನ್ನು ಧ್ವಂಸಗೊಳಿಸಿದ್ರು. ಈ ವೇಳೆ ಜಗದೀಶ್​​ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿ, ಜನರನ್ನು ಬೆದರಿಸುವ ಯತ್ನ ಮಾಡಿದ್ದಾರೆ.

ಫೇಸ್​ಬುಕ್​ ಲೈವ್​ನಲ್ಲಿ ತನ್ನ ಮೇಲಾದ ಅಟ್ಯಾಕ್ ಬಗ್ಗೆ ಜಗದೀಶ್​ ಮಾತಾಡಿದ್ದಾರೆ. ಇವತ್ತು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪೊಲೀಸರು ಬಂದು ನಮ್ಮನ್ನು ರಕ್ಷಿಸಿದ್ದಾರೆ. ನನ್ನ ಫ್ಯಾಮಿಲಿ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಜಗದೀಶ್ ವಿಡಿಯೋದಲ್ಲಿ ಹೇಳಿದ್ದಾರೆ.

Leave a Comment

Your email address will not be published. Required fields are marked *