ಸಮಗ್ರ ನ್ಯೂಸ್: ಭಾರತವು ವಿಶ್ವದ ನಾಯಕತ್ವವನ್ನು ವಹಿಸುವ ಹೊಸ್ತಿಲಲ್ಲಿದ್ದು, ದೇಶದ ಪ್ರತಿ ಮಗುವೂ ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಬಲ ಶಕ್ತಿಯಾಗಿ ಮೂಡಿಬರಬೇಕಾಗಿದೆ. ಈ ಸಂಬಂಧ ಮಕ್ಕಳನ್ನು ಭಯ ಮುಕ್ತಗೊಳಿಸಬೇಕು’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಉಪ್ಪಿನಂಗಡಿಯ ವೇದ ಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಸ್ಥಾಪಿಸಲಾದ ಶ್ರೀರಾಮ ಮತ್ತು ಆಂಜನೇಯ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಕೆ.ಜಿ.ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ತಾಳ್ತಜೆ ವಸಂತ ಕುಮಾರ ರಾಮರಕ್ಷಾ ನಿಧಿಯನ್ನು ಉದ್ಘಾಟಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಸುಧಾ ರಾವ್, ಶ್ರೀರಾಮ ಶಾಲಾ ಆಡಳಿತದ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ. ರಾಧಾ, ಉದಯ ಅತ್ರಮಜಲು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಕರುಣಾಕರ ಸುವರ್ಣ, ಚಂದಪ್ಪ ಮೂಲ್ಯ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಸುನಿಲ್ ದಡ್ಡು, ಬೇಬಿ ಸೋಮನಾಥ್ ಶೆಟ್ಟಿ, ಜಯಶ್ರೀ ಜನಾರ್ದನ್, ಕೆ.ರಾಘವೇಂದ್ರ ನಾಯಕ್, ಸುಧಾಕರ ಶೆಟ್ಟಿ, ಯು. ರಾಜೇಶ್ ಪೈ, ಶಶಿಧರ್ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ರವೀಂದ್ರ ಆಚಾರ್ಯ, ಜಗದೀಶ್ ಶೆಟ್ಟಿ ಭಾಗವಹಿಸಿದ್ದರು.