Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ದಿನನಿತ್ಯದ ಜೀವನದಲ್ಲಿ ರಾಶಿಗಳ ಪ್ರಭಾವ ಮಹತ್ತರವಾದದ್ದು. ಪ್ರತಿಯೊಂದು ಜೀವಿಗಳ ಮೇಲೂ ರಾಶಿಗಳ ಚಲನೆ ಪ್ರಭಾವ ಬೀರುತ್ತವೆ. ಈ ವಾರ ಯಾವ ರಾಶಿಗೆ ಲಾಭ? ಯಾರಿಗೆ ಶುಭ ನೋಡೋಣ ಬನ್ನಿ…

Ad Widget . Ad Widget .

ಮೇಷ:
ಮನುಷ್ಯನಿಗೆ ಧರ್ಮ-ಕರ್ಮದ ಪಾಠವನ್ನು ಕಲಿಸುವವರು ನವಗ್ರಹಗಳಲ್ಲಿ ಅತಿಮುಖ್ಯ ಗ್ರಹಗಳಾದ ಗುರು-ಶನಿಯೇ. ಶನಿಯು ತನ್ನ ಸ್ವಂತಮನೆ ಬಿಟ್ಟು ಗುರುವಿನ ಮನೆಗೆ ಬಂದು ಧರ್ಮನಿಷ್ಠರನ್ನು ಪುಣ್ಯ ಪುರುಷರನ್ನು ನ್ಯಾಯ ಮಾರ್ಗದಲ್ಲಿ ನಡೆಯುವವರನ್ನು ಕಾಪಾಡುತ್ತಾನೆ. ಉಪಕಾರ ಮಾಡುವವರಿಗೆ ಒಳ್ಳೆಯ ಫಲವನ್ನೇ ಕೊಡುತ್ತಾನೆ. ಬರಬೇಕಾದ ನಿರೀಕ್ಷೆ ಇರುವ ಹಣವು ಬಂದು ನಿಮ್ಮನ್ನು ಸೇರುತ್ತದೆ. ಆದರೆ ಮೇಷ-ವೃಶ್ಚಿಕ ರಾಶಿಯವರು ಸುಬ್ರಹ್ಮಣ್ಯ ದೇವರನ್ನು ಹಾಗೂ ಪಾರ್ವತಿ-ಪರಮೇಶ್ವರರನ್ನು ಪೂಜಿಸಲೇಬೇಕು.

Ad Widget . Ad Widget .

ವೃಷಭ:
ಸೂರ್ಯನು ಇನ್ನೊಂದು ತಿಂಗಳಲ್ಲಿ ಶನಿಯೊಡನೆ ಸೇರಿ ಒಂದು ನಿಮ್ಮ ಕೆಲಸ ಕಾರ್ಯದಲ್ಲಿ ಅಡ್ಡಿಯನ್ನು ತರುತ್ತಾನೆ. ಶನಿಯು ಏಕಾದಶಕ್ಕೆ ಬರುವವರೆಗೂ ಮೌನವಹಿಸಿ, ಜಾಗರೂಕರಾಗಿರಿ. ಯಾರೊಂದಿಗೂ ವಿರೋಧ ಕಟ್ಟಿಕೊಳ್ಳಬೇಡಿ. ಯಾರು ಬೇಕು, ಬೇಡ ಎಂಬ ವಿವಾದ ಮಾಡಿಕೊಳ್ಳದಿದ್ದರೆ ನಿಮ್ಮ ತಂದೆ-ತಾಯಿಯ ಅನುಗ್ರಹವೇ ಬೇಕಾದ ವರವನ್ನು ತರುತ್ತದೆ. ಮನಸ್ಸು ಶಾಂತವಾಗಿರಬೇಕು. ಶಿವಾಷ್ಟೋತ್ತರ ಪಠಿಸಿ.

ಮಿಥುನ:
ನಿಮ್ಮ ಕೆಲಸಗಳಿಗೆ ಜನ್ಮಕ್ಕೆ ಗುರು ಬರುವವರೆಗೂ ಕಾರ್ಯಗಳು ಅರ್ಧದಲ್ಲಿಯೇ ನಿಂತಿದ್ದರೂ, ಅತ್ಯಂತ ಶ್ರದ್ಧೆಯಿಂದ ಗುರುವಿನ ಸ್ಮರಣೆ ಮಾಡಿ, ಗುರುವಿನಲ್ಲಿ ಭಕ್ತಿ ಇಡಿ. ಗುರುವನ್ನು ಪೂಜಿಸಿ ಮಂತ್ರಾಲಯದಲ್ಲಿ ನೆಲೆಸಿರುವ ಶ್ರೀರಾಘವೇಂದ್ರ ಗುರುರಾಯರನ್ನು ದರ್ಶಿಸಿ ಬನ್ನಿ ಹಾಗೂ ಪೀಠಾಧಿಪತಿಗಳ ಅನುಗ್ರಹ ಪಡೆದು ಬನ್ನಿ.

ಕಟಕ:
ಶಿವನ ಶಿರದಲ್ಲಿ ಚಂದ್ರನು ನೆಲೆಸಿದ್ದಾನೆ. ಚಂದ್ರನು ಮನಸ್ಸಿಗೂ, ಬುದ್ದಿಗೂ ಅಧಿಪತಿ. ಸಕಾರಾತ್ಮಕ ಮನಸ್ಸಿದ್ದರೆ ಏನನ್ನೂ ಜಯಿಸಬಹುದು. ಕಟಕ ರಾಶಿಯವರಿಗೆ ಸದಾಕಾಲ ಶಿವಾರ್ಚನೆ ಇರಲಿ. ಕಾರ್ಯಜಯಕ್ಕೆ ‘ಹಂ ಹನುಮತೇ ನಮಃ’ ಮಂತ್ರವನ್ನು ಪಾರಾಯಣ ಮಾಡಿ.

ಸಿಂಹ:
ವೀರರು-ಶೂರರು ಯಾವುದೇ ವಿಚಾರವು ಬಂದಾಗ ಯಾರ ಸಲಹೆ ಪಡೆಯದೆ, ದೇವರನ್ನು ನಂಬಿ ತಮ್ಮ ಕೆಲಸವನ್ನು ಸಾಧಿಸುವ ಮಾನವರು. ಧೈರ್ಯವೇ ದೇವರು. ತಂದೆ-ತಾಯಿಯೇ ಪ್ರತ್ಯಕ್ಷ ಪಾರ್ವತಿ-ಪರಮೇಶ್ವರರು ಎಂದು ಈ ರಾಶಿಯವರು ನಂಬಿದ್ದಾರೆ. ಹೀಗೆಯೇ ಮುಂದುವರಿಯಲಿ ನಿಮ್ಮ ನಂಬಿಕೆ. ಆರೋಗ್ಯಕ್ಕಾಗಿ ಸೂರ್ಯ ನಾರಾಯಣನನ್ನು, ಕಾರ್ಯಸಿದ್ಧಿಗಾಗಿ ತ್ವರಿತ ಗಣಪತಿ ಮಂತ್ರವನ್ನು ಪಠಿಸಿ.

ಕನ್ಯಾ:
ಈ ರಾಶಿಯವರು ದ್ವಿಗುಣ ಸ್ವಭಾವದವರು, ಧ್ವಂದ್ವ ಮನಸ್ಸು. ಹಲವಾರು ಚಿಂತೆಯಲ್ಲಿ ತಮ್ಮ ಮೂಲಧ್ಯೇಯವನ್ನೇ ಬಿಟ್ಟು ಸಾಗುವವರು. ತಾವು ತಾವಾಗಿಯೇ ತಮ್ಮ ಕಾಲ ಮೇಲೆ ಕಲ್ಲನ್ನು ಎಳೆದುಕೊಳ್ಳುವರು. ಗುರುವು ವಕ್ರದಲ್ಲಿದ್ದಾನೆ. ಶನಿಯು ಷಷ್ಟದಲ್ಲಿದ್ದು ನಿಮ್ಮ ಕೆಲಸ ಕಾರ್ಯದಲ್ಲಿ ಸಾಧನೆಯನ್ನು ತರುತ್ತಾನೆ. ರಾಮಾಯಣ ಪಾರಾಯಣ ಮಾಡಿ. ರಾಮತಾರಕ ಮಂತ್ರ ಸದಾ ಜಪಿಸಿ.

ತುಲಾ:
ಗ್ರಹಸ್ಥಿತಿಯಲ್ಲಿ ಶನಿಯು ಪಂಚಮದಲ್ಲಿ ಇರುವನಾದರೂ ಬಿಡುವ ಕಾಲದಲ್ಲಿ ಅವನ ದೃಷ್ಟಿಯು ಮುಂದಿನ 6ನೇ ಮನೆಯಲ್ಲಿ ಇರುತ್ತದೆ. ನಿಮ್ಮ ಕಾಲವು ಕೂಡಿಬಂದಿದೆ. ನಿಮ್ಮನ್ನು ಕಟ್ಟಿಹಾಕಿ, ತುಳಿಯುವ ಯಾರೂ ನಿಮ್ಮನ್ನು ಮುಟ್ಟಲಾರರು. ರಾಶ್ಯಾಧಿಪತಿ ಶುಕ್ರನಾಗಿರುವು ದರಿಂದ ಶುಕ್ರಾಚಾರ್ಯರೇ ನಿಮ್ಮ ಶತ್ರುಗಳನ್ನು ದಮನಮಾಡಿ ಸುಖದ ಅಂಚನ್ನು ಮುಟ್ಟಿಸಿ, ಶಾಂತಿ, ಧೈರ್ಯ, ಕೀರ್ತಿ, ಲಾಭ, ಸುಖವನ್ನು ಕೊಡುತ್ತಾರೆ. ವ್ಯಾಪಾರದಲ್ಲಿ ಹೊಸವಿಧವಾದ ಲಾಭ ಅನುಭವಿಸುತ್ತೀರಿ. ಕಾಲಭೈರವನನ್ನು ಪೂಜಿಸಿ. ಚಂಡಿಕಾ ಪಾರಾಯಣ ಮಾಡಿಸಿ.

ವೃಶ್ಚಿಕ:
ರಾಶಿಯವರು ಕೋಪವನ್ನು ಕಟ್ಟಿಹಾಕಬೇಕು. ಬೇರೆಯವರ ಮಾತನ್ನು ಆಲಿಸಬೇಕು. ನಂಬಿಕೆ ಕಳೆದುಕೊಳ್ಳಬಾರದು. ಜೀವನದಲ್ಲಿ ಛಲವಿದ್ದರೆ, ನಿಮ್ಮ ಗುರಿಯನ್ನು ಮುಟ್ಟುವುದರಲ್ಲಿ ಅನುಮಾನವಿಲ್ಲ. ಯಾರ ಮೇಲೂ ಅನುಮಾನ ಬೇಡ, ಅಪಮಾನ ಮಾಡಿ ಚಿಂತಿಸಬಾರದು. ವ್ಯಾಪಾರ ವ್ಯವಹಾರದಲ್ಲಿ ಕಷ್ಟ ನಷ್ಟವಾಗದು.

ಧನಸ್ಸು:
ಗುರುವಿನ ರಾಶಿಯಲ್ಲಿ ಹುಟ್ಟಿದ ನಿಮಗೆ, ಗುರುವಿನ ಕರುಣೆ ಒಂದು ಇದ್ದರೆ ಏನನ್ನು ಬೇಕಾದರೂ ಮಾಡಿಕೊಳ್ಳಬಹುದು. ಶನಿಯು ತೃತೀಯದಿಂದ ಚತುರ್ಥಕ್ಕೆ ಬಂದರೂ, ಅದು ಗುರುಮನೆಯೇ ಆಗಿರುವುದರಿಂದ, ಮನಸ್ಸು ಸದಾಕಾಲ ಒಳ್ಳೆಯ ಚಿಂತನೆ ಮಾಡಲಿ. ನಿಮ್ಮ ಕೆಲಸಗಳಿಗೆ ಸಹಾಯ ಮಾಡಿ ದೇವರೇ ಕೈ ಹಿಡಿದು ನಡೆಸುತ್ತಾನೆ. ಇಷ್ಟದೇವರನ್ನು ಪೂಜಿಸಿ. ಗುರು ದತ್ತಾತ್ರೇಯನನ್ನು ಪೂಜಿಸಿ. ಪ್ರಾರ್ಥಿಸಿ.

ಮಕರ:
ಗ್ರಹಗಳ ಚಲನೆ ಎಲ್ಲಾದರೂ ಇರಲಿ ತಂದೆ-ತಾಯಿಯ ಸೇವೆಯನ್ನು ಮರೆತರೆ, ಶನೀಶ್ವರನೇ ಶಿಕ್ಷಿಸುತ್ತಾನೆ. ಒಳ್ಳೆಯ ಕಾಲಕ್ಕೆ ನಿರೀಕ್ಷೆ ಮಾಡಿ. ಎಂದೆಂದಿಗೂ ಧೃತಿಗೆಡದೆ ದೇವರನ್ನು ಧ್ಯಾನಿಸಿ. ಶಿವನನ್ನು ಪೂಜಿಸಿ, ಸದಾಕಾಲ ಶಿವಪಂಚಾಕ್ಷರಿ ಪಠಿಸಿ.

ಕುಂಭ:
ಸ್ಥಿರವಾಗಿ ನಿಲ್ಲಲು ಕುಂಭದ ಆಧಾರ ಬೇಕು. ಭಕ್ತ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಕಂಬದಿಂದ ಹೊರಬಂದು ನರಸಿಂಹನು ಹಿರಣ್ಯ ಕಶಪುವಿನ ಸಂಹಾರಮಾಡಿ ತನ್ನ ಭಕ್ತನನ್ನು ರಕ್ಷಿಸಿದ ಹಾಗೆ, ನರಸಿಂಹ ದೇವರಲ್ಲಿ ಅನನ್ಯವಾಗಿ ಪ್ರಾರ್ಥಿಸಿದರೆ, ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ. ಆರೋಗ್ಯ ಭಾಗ್ಯವನ್ನು ಕೊಡುತ್ತಾನೆ. ದ್ವಿತೀಯಕ್ಕೆ ಹೋಗುವ ಶನಿಯು ಕೆಲಸದಲ್ಲಿ ಒತ್ತಡವನ್ನು ತರುತ್ತಾನೆ. ಸದಾಕಾಲ ಧನ್ವಂತರಿ ಅಷ್ಟೋತ್ತರ ಪಠಿಸಿ.

ಮೀನ:
ಸಾಕ್ಷಾತ್ ಪರಮೇಶ್ವರ ಸ್ವರೂಪವಾದ ವಿಷ್ಣು ಸ್ವರೂಪನಾದ ಗುರುವೇ ಅಧಿಪತಿಯಾಗಿರುವಾಗ, ಏನನ್ನು ಕೇಳಬೇಕು, ಕೇಳಬಾರದೆಂಬ ತಾರತಮ್ಯವನ್ನು ತಿಳಿದೂ ದೈವಸಂಕಲ್ಪದಿಂದ ಯಾವ ಕೆಲಸ ಕೂಡ ಮಾಡಿಕೊಳ್ಳಬಹುದು. ನಿಮಗೆ ಗ್ರಹಗಳು ಮಂಗಳವನ್ನುಂಟು ಮಾಡುತ್ತವೆ. ಸದಾ ಗುರು ಪ್ರಾರ್ಥನೆ. ಇರಲಿ. ಶೃಂಗೇರಿಗೆ ತೆರಳಿ ದೇವರ ಮಹಾದೇವರಾದ ಗುರುದ್ವಯರನ್ನು ಸಂದರ್ಶಿಸಿ ಬನ್ನಿ.

Leave a Comment

Your email address will not be published. Required fields are marked *