ಸಮಗ್ರ ನ್ಯೂಸ್ : ಡಾರ್ಕ್ ಚಾಕೋಲೇಟ್ ತಿನ್ನುವುದರಿಂದ ಆರೋಗ್ಯ, ಸೌಂದರ್ಯ ಎರಡೂ ಚೆನ್ನಾಗಿರುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಚಾಕೋಲೇಟನ್ನು ಎಲ್ಲರೂ ಇಷ್ಟಪಡುತ್ತಾರೆ. ಚಾಕೋಲೇಟ್‌ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಅದರಿಂದ ಮಿತಿಯಲ್ಲಿ ಬಳಸಬೇಕು.
ಡಾರ್ಕ್ ಚಾಕೋಲೇಟ್ ಸೇವನೆಯಿಂದ ವಯಸ್ಸು ಹೆಚ್ಚಾದಂತೆ ಕಾಣೋದಿಲ್ಲ. ಮುಖದಲ್ಲಿ ರಿಂಕಲ್ಸ್ ಇದ್ದರೆ ಅದು ಕಡಿಮೆಯಾಗುತ್ತದೆ. ಬಿಪಿ ಕಡಿಮೆಯಾಗುತ್ತದೆ. ನಿಮ್ಮ ದೇಹದಲ್ಲಿ ರಕ್ತ ಸರಬರಾಜು ಉತ್ತಮವಾಗಿರುತ್ತದೆ. ಈ ಕಾರಣಕ್ಕೆ ನಿಮ್ಮ ಹೃದಯದ ಆರೋಗ್ಯ ಸೇರಿ, ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ ಮೆದುಳಿನ ಆರೋಗ್ಯ ವೃದ್ಧಿಸುತ್ತದೆ.