ಸಮಗ್ರ ನ್ಯೂಸ್: ಬಿಗ್ ಬಾಸ್ ಕನ್ನಡ -11 ಸಂಕ್ರಾಂತಿ ಹಬ್ಬದ ಬಳಿಕ ವಾರದ ಮಧ್ಯದಲ್ಲಿ ಸ್ಪರ್ಧಿಯೊಬ್ಬರು ಹೊರ ಹೋಗಿದ್ದಾರೆ. ಹನುಮಂತು, ಧನರಾಜ್ ಅವರನ್ನು ಹೊರತುಪಡಿಸಿದರೆ ಉಳಿದ ಸ್ಪರ್ಧಿಗಳು ಮಿಡ್ ವೀಕ್ ಎಲಿಮಿನೇಷನ್ ಭೀತಿಯಲ್ಲಿದ್ದಾರೆ.
ಒಬ್ಬೊಬ್ಬರ ಮನಸ್ಸಿನಲ್ಲಿ ಎಲಿಮಿನೇಷನ್ ಭೀತಿ ಹುಟ್ಟಿಸಿ, ಕೊನೆಯಲ್ಲಿ ಭವ್ಯಾ, ಗೌತಮಿ ಅವರನ್ನು ನಿಲ್ಲಿಸಿ ಇವತ್ತು ಯಾರು ಹೋಗುತ್ತಿಲ್ಲ ಎಂದು ಬಿಗ್ ಬಾಸ್ ಹೇಳಿದ್ದರು. ಸಂಕ್ರಾಂತಿ ಹಬ್ಬವಾದ ಕಾರಣ ಎಲಿಮಿನೇಷನ್ ಮಾಡಿರಲಿಲ್ಲ.
ಆದರೆ ಮಿಡಿ ವೀಕ್ ಎಲಿಮಿನೇಷನ್ ಇರುತ್ತದೆ ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಬಿಗ್ ಬಾಸ್ ಮನೆಯಿಂದ ಒಬ್ಬರು ಮಧ್ಯರಾತ್ರಿಯೇ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವ್ ಆಗಿರುತ್ತೇನೆ ಎಂದು ಹೇಳುತ್ತಿದ್ದ ಗೌತಮಿ ಜಾಧವ್ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ. ಕಡಿಮೆ ವೋಟ್ ಬಂದ ಕಾರಣ ಗೌತಮಿ ಅವರು ದೊಡ್ಮನೆ ಆಟದಿಂದ ವಾರದ ಮಧ್ಯದಲ್ಲೇ ಔಟ್ ಆಗಿದ್ದಾರೆ.
ಆರಂಭದಲ್ಲಿ ಮಂಜುಣ ಮೋಕ್ಷಿತಾ ಜತೆಯೇ ಗೌತಮಿ ಕಾಣಿಸಿಕೊಂಡಿದ್ದರು. ಆ ಬಳಿಕ ದೈಹಿಕವಾದ ಟಾಸ್ಕ್ ನಲ್ಲಿ ಮಿಂಚಿದ್ದರು. ದಿನ ಕಳೆದಂತೆ ವೈಯಕ್ತಿಕವಾಗಿ ಆಟ ಮುಂದುವರೆಸಿದ್ದರು. ಇದೀಗ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.