Ad Widget .

ರೀಲ್ಸ್ ನೋಡುತ್ತಾ ಕಾರು ಚಾಲನೆ| ಕೆರೆಗೆ‌ ಬಿದ್ದು ಇಬ್ಬರು ದುರ್ಮರಣ

ಸಮಗ್ರ ನ್ಯೂಸ್: ಕಾರು ಚಾಲನೆ ಮಾಡುವಾಗ ರೀಲ್ಸ್ ನೋಡುತ್ತಾ ಕಾರು ಚಲಾಯಿಸಿದ ಪರಿಣಾಮ, ರಸ್ತೆ ಪಕ್ಕದಲ್ಲಿದ್ದ ನದಿಗೆ ಕಾರು ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.

Ad Widget . Ad Widget .

ಕಾರು ಚಾಲನೆ ಮಾಡುವ ಕಾರು ಚಾಲಕ ಮೊಬೈಲ್ ನಲ್ಲಿ ರೂಲ್ಸ್ ನೋಡುತ್ತಾ ಕಾರು ಓಡಿಸುತ್ತಿದ್ದ. ಈ ವೇಳೆ ಕಾರು ಕೆರೆಗೆ ಬಿದ್ದು ಇಬ್ಬರು ಸಾವಿಗೀಡಾಗಿದ್ದು, ಮತ್ತೊಬ್ಬ ವ್ಯಕ್ತಿ ಬಹಳ ಕಷ್ಟಪಟ್ಟು ಜೀವವನ್ನು ಉಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮೃತರನ್ನು ಪಲಾಶ್ ಗಾಯಕ್ವಾಡ್ ಮತ್ತು ಕಾರು ಚಾಲಕ ವಿನೀತ್ ದಕ್ಷಾ ಎಂದು ಗುರುತಿಸಲಾಗಿದೆ.

Ad Widget . Ad Widget .

ಇನ್ನುಳಿದಂತೆ ಪಿಯೂಷ್ ಎಂಬುವವರು ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ವಿನೀತ್ ಹೆಚ್ಚಿನ ವೇಗದಲ್ಲಿ ಇದ್ದಿದ್ದಷ್ಟೇ ಅಲ್ಲದೆ ಸ್ನ್ಯಾಪ್‌ಚಾಟ್ ಬಳಸುತ್ತಿದ್ದ, ಸೇತುವೆಯ ಮೇಲೆ ತಿರುವು ಪಡೆಯಲು ಪ್ರಯತ್ನಿಸುವಾಗ ಅವರು ವಾಹನದ ನಿಯಂತ್ರಣ ಕಳೆದುಕೊಂಡಿದ್ದ. ಇದರಿಂದಾಗಿ ಕಾರು ತಡೆಗೋಡೆಯಿಂದ ಡಿಕ್ಕಿ ಹೊಡೆದು ಕೆಳಗಿನ ನದಿಗೆ ಬಿದ್ದಿತ್ತು.

ಕೂಡಲೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನ ಗಾಜುಗಳನ್ನು ಒಡೆದು ವಿನೀತ್ ಮತ್ತು ಪಲಾಶ್ ಅವರ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಿಸಿದರು. ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದು, ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪಿಯೂಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *