Ad Widget .

ಕೊಟ್ಟಿಗೆಹಾರ:ಸುದ್ದಿ ಮಾಡಲು ಹೋಗಿ ಸುದ್ದಿಯಾದ ಯೂಟ್ಯೂಬರ್

ಸಮಗ್ರ ನ್ಯೂಸ್: ಸುದ್ದಿ ಮಾಡಲು ಹೋದ ಯೂಟ್ಯೂಬರ್ ಒಬ್ಬರು ಆನೆ ದಾಳಿಯಿಂದ ಪಾರಾದ ಘಟನೆ ಮಂಗಳವಾರ ಸಂಜೆ ಕೊಟ್ಟಿಗೆಹಾರದಲ್ಲಿ ನಡೆದಿದೆ.

Ad Widget . Ad Widget .

ಚಿಕ್ಕಮಗಳೂರು ಜಿಲ್ಲೆಯ ಕಟ್ಟ ಕಡೆಯ ಗ್ರಾಮವಾದ ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣ ಮಾಡಲು ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಮಂಗಳವಾರ ಸಂಜೆ ಗ್ರಾಮಕ್ಕೆ ಹೋಗಿದ್ದಾನೆ. ಗ್ರಾಮಕ್ಕೆ ಹೋಗಲು ರಸ್ತೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ಒಂದು ಏಕಾಏಕಿ ದಾಳಿಗೆ ಮುಂದಾಗಿದೆ. ಯೂಟ್ಯೂಬರ್ ಅಭಿಷೇಕ್ ಕೂದಲೆಳೆ ಅಂತರದಲ್ಲಿ ಕಂದಕಕ್ಕೆ ಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾನೆ. ಆನೆಯನ್ನು ಕಂಡ ಅಭಿಷೇಕ್ ಕಂದಕಕ್ಕೆ ಜಿಗಿದಿದ್ದರಿಂದ ಕಾಲು ಹಾಗೂ ಮೂಗಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.

Ad Widget . Ad Widget .

ಚನ್ನರಾಯಪಟ್ಟಣ ಮೂಲದ ಅಭಿಷೇಕ್ ಯುನೈಟೆಡ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದು. ಬಿದರತಳ ಗ್ರಾಮದ ವಿಡಿಯೋ ಚಿತ್ರೀಕರಣಕ್ಕೆ ಮಂಗಳವಾರ ತೆರಳಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಆರೀಫ್ ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಯಿತು ಈ ಸಂದರ್ಭದಲ್ಲಿ ಆರೀಫ್, ನವೀನ್, ಸಂಜಯ್ ಗೌಡ ಕೊಟ್ಟಿಗೆಹಾರ, ಗಿರೀಶ್, ಸುಂದರೇಶ್, ಭಕ್ತಿಶ ಮೊದಲಾದವರು ಇದ್ದರು.

Leave a Comment

Your email address will not be published. Required fields are marked *