Ad Widget .

ಬಿಗ್ ಬಾಸ್ ನಿಂದ ಹೊರಬಿದ್ದ ಚೈತ್ರಾ ಕುಂದಾಪುರ

ಸಮಗ್ರ ನ್ಯೂಸ್: ಬಿಗ್ ಬಾಸ್ ಸೀಸನ್ 11 ರ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ.

Ad Widget . Ad Widget .

ಬಿಗ್ ಬಾಸ್ ಮನೆಯ ಅತ್ಯಂತ ಪ್ರಬಲ ಸ್ಪರ್ಧಿ ಅಂತಾ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರೋದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಫಿನಾಲೆಗೆ ಬರ್ತಾರೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದಕ್ಕಿಂತ ಮೊದಲೇ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರೋದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

Ad Widget . Ad Widget .

ಇತ್ತೀಚೆಗೆ ಚೈತ್ರಾ ಅವರು ತನ್ನ ತಾಯಿ ಹಾಗೂ ಸಹೋದರಿ ‌ದೊಡ್ಮನೆಗೆ ಬಂದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ಅವರಿಗೆ ಮನೆಮಂದಿ ಉತ್ತಮ ಸ್ಪರ್ಧಿ ಪದಕವನ್ನು ನೀಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ಕಳಪೆ ಪಡೆದುಕೊಂಡರೂ ಅವೆಲ್ಲಕ್ಕೂ ತನ್ನ ಮಾತಿನ ಮೂಲಕ ಉತ್ತರ ಕೊಟ್ಟು‌ ಜನಮನ್ನಣೆಯನ್ನು ಗಳಿಸಿದ್ದರು. ಇದೀಗ ಉತ್ತಮ ಪದಕ ಪಡೆದ್ರೂ ಬಿಗ್ ಬಾಸ್ ಫಿನಾಲೆ ತಲುಪಲು ಸಾಧ್ಯವಾಗದೇ ಚೈತ್ರಾ ಔಟ್ ಆಗಿದ್ದಾರೆ.

Leave a Comment

Your email address will not be published. Required fields are marked *