ಬೆಂಗಳೂರಿಗೆ ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್

ಸಮಗ್ರ ನ್ಯೂಸ್ : ನೀವು ಹಲವಾರು ರೂಪಾಯಿ ಖರ್ಚು ಮಾಡಿ ಇದು ಒಳ್ಳೆಯ ಸಿಗರೇಟ್ ಎಂದು ತೆಗೆದುಕೊಂಡಿರುತ್ತೀರಿ.ಆದ್ರೆ ಅಲ್ಲಿಯೂ ಕೂಡ ನಕಲಿ ಗ್ಯಾಂಗ್‌ಗಳ ಕೈವಾಡವಿರುತ್ತದೆ. ಇದಕ್ಕೆ ನೇರ ಸಾಕ್ಷಿ ಬೆಂಗಳೂರಿನಲ್ಲಿ ಇಂದು ಸೀಜ್ ಆಗಿರುವ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ಸ್ ಐಟಿಸಿ ಲೈಟ್ಸ್ ಬ್ರಾಂಡ್ ನ ಮೂರು ಬಾಕ್ಸ್ ನಕಲಿ ಸಿಗರೇಟ್ ಸೀಜ್ ಮಾಡಲಾಗಿದೆ.

Ad Widget ... ..

ಪ್ರತಿಷ್ಠಿತ ಸಿಗರೇಟ್ ಬ್ರಾಂಡ್‌ನ್ನುನ ನಕಲು ಮಾಡಿ ಮಾರಾಟ ಮಾಡಲಾಗುತ್ತಿತ್ತು. ಕಾಂಬೋಡಿಯಾ, ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಂಗಳೂರಿನ ನಕಲಿ ಸಿಗರೇಟ್ ಡಿಸ್ಟ್ರಿಬ್ಯೂಟ್ ಮಾಡ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.ಕೆಎಸ್‌ ಲೇಔಟ್ ಪೊಲೀಸರಿಂದ ಈ ಒಂದು ಆಪರೇಷನ್ ನಡೆದಿದ್ದು, ನಿಶಾಂತ್ ಹಾಗೂ ಶಕೀಲ್ ಎಂಬುವವರನ್ನು ಬಂಧನ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಶಬೀರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Ad Widget

ನಕಲಿ ಸಿಗರೇಟ್ ಮಾರಾಟದ ಬಗ್ಗೆ ಕಂಪನಿಯ ಪ್ರತಿನಿಧಿಯೊಬ್ಬರು ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕೇರಳ ಮೂಲದ ಬಂಧಿತ ಆರೋಪಿ ಶಕೀಲ್ ನಗಲಿ ಸಿಗರೇಟ್ ಜಾಲದ ಕಿಂಗ್‌ಪಿನ್ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *