ಸಮಗ್ರ ನ್ಯೂಸ್ : ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ಡೆತ್ ನೋಟ್ ಬರೆದು ತನ್ನ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ವಿಜಯನಗರ 2ನೇ ಮುಖ್ಯ ರಸ್ತೆಯಲ್ಲಿನ ಮನೆಯಲ್ಲಿ ತ್ರಿಶಾಲ್ (13) ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣಾದ ಈ ಬಾಲಕ ಏಳನೇ ತರಗತಿ ವಿದ್ಯಾರ್ಥಿ ಆಗಿದ್ದಾನೆ. ಈ ವಯಸ್ಸಲ್ಲೇ ಈತ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದಲ್ಲದೆ ಡೆತ್ ನೋಟ್ ಸಹ ಬರೆದಿದ್ದು, ಇಡೀ ರಾಜ್ಯವೇ ಶಾಕ್ಗೆ ಒಳಗಾಗುವಂತೆ ಆಗಿದೆ.ಇದರಲ್ಲಿ ಆತ ತಾನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅನ್ನೋದನ್ನು ವಿವರಿಸಿದ್ದಾನೆ. .ತ್ರಿಶಾಲ್ ತನ್ನ ಸಾವಿಗೆ ಕಾರಣ ಏನು ಅನ್ನೋದನ್ನು ಸಹ ಬಹಿರಂಗಪಡಿಸಿದ್ದಾನೆ. ಈತ ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ಮಾಡಿಕೊಂಡಿದ್ದನಂತೆ. ಇದೇ ವಿಚಾರವನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಘಟನೆ ಸಂಬಂಧ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಶಕುಂತಲಾ ನಟರಾಜ್ ಅವರು ಬಿಜೆಪಿ ಹಾಗೂ ಹಿಂದುತ್ವದ ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುವವರು. ಕಾಂಗ್ರೆಸ್ ಅನ್ನು ಹಾಗೂ ಸಮಾಜದಲ್ಲಿನ ಎಡಪಂಥೀಯ ಸಿದ್ಧಾಂತವನ್ನು ತೀವ್ರವಾಗಿ ಟೀಕೆ ಮಾಡುತ್ತಲೇ ಬಂದಿದ್ದಾರೆ. ಗಮನಿಸಬೇಕಾದ ವಿಚಾರ ಏನೆಂದರೆ ಕೆಲವು ವಾರಗಳ ಹಿಂದೆ ಸಿಎಂ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡಿ ಬಂಧನಕ್ಕೆ ಒಳಗಾಗಿದ್ದರು.ಇಷ್ಟೇ ಅಲ್ಲದೆ ಬೆಂಗಳೂರಿನ ಲುಲು ಮಾಲ್ನಲ್ಲಿ ಪಾಕಿಸ್ತಾನದ ಬಾವುಟ ಹಾರಿಸಲಾಗಿದೆ ಎಂದು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಿದ್ದರು. ಈ ಬಗ್ಗೆ ಅವರ ಮೇಲೆ ಪ್ರಕರಣ ಸಹ ದಾಖಲಾಗಿದೆ. ಹಾಗೆಯೇ ಮಂಡ್ಯದಲ್ಲಿ ನಡೆದ ಮಸೀದಿ ಮೇಲಿನ ಕಲ್ಲೆಸೆತ ಘಟನೆ ಬಗ್ಗೆ ಮಾಡಿದ್ದ ಟ್ವಿಟ್ ಆಧಾರದ ಮೇಲೆ ಇವರ ಮೇಲೆ ರೌಡಿ ಶೀಟ್ ತೆರೆಯುವುದಾಗಿ ಪೊಲೀಸರ ನೋಟಿಸ್ ನೀಡಿದ್ದರು.