Ad Widget .

ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತೆ : ನಕ್ಸಲ್ ವಿಕ್ರಂಗೌಡನ ಆಡಿಯೋ ವೈರಲ್!

ಸಮಗ್ರ ನ್ಯೂಸ್ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೋಸ್ಟ್ ವಾಂಟೆಡ್ 6 ಜನ ನಕ್ಸಲರು ಶರಣಾಗಿದ್ದಾರೆ. ಇದೀಗ ಎಂಟರ್ ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂಗೌಡನ ಆಡಿಯೋ ಒಂದು ವೈರಲ್ ಆಗಿದ್ದು, ಈತ ಸಂಧಾನ ಹಾಗೂ ಶರಣಾಗತಿಗೆ ಒಪ್ಪದೇ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾದ ಆಡಿಯೋ ಇದೀಗ ಲಭ್ಯವಾಗಿದೆ.

Ad Widget . Ad Widget .

6 ಜನ ನಕ್ಸಲರು ಶರಣಾದ ಬಳಿಕ, ವಿಕ್ರಂ ಗೌಡನ ಸಹೋದರಿ ನನ್ನ ಅಣ್ಣನಿಗೂ ಕೂಡ ಶರಣಾಗತಿಗೆ ಅವಕಾಶ ನೀಡಬೇಕಾಗಿತ್ತು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ವಿಕ್ರಂ ಗೌಡನ ಜೊತೆಗೆ ಕೆಲ ಸಂಘಟನೆಗಳು ಸಂಧಾನಕ್ಕೆ ಮುಂದಾಗಿದ್ದಾಗ ಆತ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಎಂಟರ್ ಆದಂತಹ ವಿಕ್ರಂ ಗೌಡ ಸಂಧಾನಕಾರರ ಜೊತೆಗೆ ವಾದ ಮಾಡಿದ್ದ ಎನ್ನಲಾಗಿದೆ.ಸಂಧಾನ ಹಾಗೂ ಶರಣಾಗತಿಗೆ ವಿಕ್ರಂ ಗೌಡ ಒಪ್ಪಿರಲಿಲ್ಲ.ವಿಕ್ರಂ ಗೌಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ.

Ad Widget . Ad Widget .

ವಿಕ್ರಂಗೌಡನ ವಿರೋಧದಿಂದಲೇ ಶರಣಾಗತಿಗೆ ಹಿನ್ನಡೆಯಾಯಿತಾ ಎನ್ನುವ ಅನುಮಾನ ಮೂಡಿದೆ. ಸಂಧಾನಕಾರರ ಜೊತೆಗೆ ಶರಣಾಗತಿಗೆ ಒಪ್ಪದೇ ವಿಕ್ರಂ ಗೌಡ ಮಾತನಾಡಿದ್ದಾನೆ. ನನ್ನ ಹೋರಾಟ ನಂಬಿದ ಜನರಿಗೆ ಮೋಸ ಮಾಡುವುದಿಲ್ಲ ಎಂದು ವಿಕ್ರಂಗೌಡ ಮಾತನಾಡಿದ್ದಾನೆ.ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ. ತಾಯಿ ಮಗುವಿಗೆ ಜನ್ಮ ಕೊಡಬೇಕಾದರೆ ನೋವು ಅನುಭವಿಸುತ್ತಾಳೆ. ಹೋರಾಟದಲ್ಲಿ ನಾವು ಹಲವರನ್ನು ಈಗಾಗಲೇ ಕಳೆದುಕೊಂಡಿದ್ದೇವೆ. ನಾವು ಯಾವುದೇ ರಾಜಿಗೆ ಹೋಗುವುದಿಲ್ಲ.

ದುಡಿಯುವ ಜನರಿಗೆ ದ್ರೋಹ ಮಾಡಿ, ದುಡ್ಡು ಮಾಡಲು ಹೋಗುತ್ತೇವೆ ಎಂದರ್ಥ ಅಲ್ಲವೇ?ಲಕ್ಷ ಕೋಟಿಗಟ್ಟಲೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವ ಜನಕ್ಕೆ ನಿಮ್ಮೊಂದಿಗೆ ಇರುತ್ತೇವೆ ಎಂದು ಆಶ್ವಾಸನೆ ಕೊಟ್ಟಿದೆವೋ, ರಾಜಿಗೆ ಹೋದರೆ ಅದೇ ಜನಕ್ಕೆ ನಾವು ಕೊಟ್ಟ ಆಶ್ವಾಸನೆಗೆ ಮೋಸ ಆಗುತ್ತದೆ. 2024 ನವೆಂಬರ್ 18ರಂದು ವಿಕ್ರಂ ಗೌಡನನ್ನು ಎನೌಂಟರ್ ನಲ್ಲಿ ಹತ್ಯೆ ಮಾಡಲಾಯಿತು. ಶರಣಾಗುವಂತೆ ವಿಕ್ರಂ ಗೌಡಗೆ ಸಂಘಟನೆಗಳ ಮೂಲಕ ಒತ್ತಾಯ ಮಾಡಲಾಗಿತ್ತು. ಮನೋವಲಿಕೆಗೆ ಯತ್ನಿಸಿ ವಿಫಲವಾಗಿದ್ದಕ್ಕೆ ಈ ಆಡಿಯೋ ಇದೀಗ ಸಾಕ್ಷಿಯಾಗಿದೆ.

Leave a Comment

Your email address will not be published. Required fields are marked *