ಸಮಗ್ರ ನ್ಯೂಸ್ : ಕಾಲ್ ಸೆಂಟರ್ ಉದ್ಯೋಗಿಯೋರ್ವ ಮಚ್ಚಿನಿಂದ ಕೊಚ್ಚಿ ಯುವತಿಯನ್ನು ಕೊಂದ ಘಟನೆ ಪುಣೆಯಲ್ಲಿ ನಡೆದಿದೆ.ಪುಣೆಯ ಯೆರವಾಡಾ ಪ್ರದೇಶದ ಪಾರ್ಕಿಂಗ್ ಸ್ಥಳದಲ್ಲಿ ಉದ್ಯೋಗಿಯೊಬ್ಬರು ತಮ್ಮ ಮಹಿಳಾ ಸಹೋದ್ಯೋಗಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಜ. 7 ರಂದು ಸಂಜೆ 6: 15 ರ ಸುಮಾರಿಗೆ ಯೆರವಾಡಾದ ಬಿಪಿಒ ಸಂಸ್ಥೆಯಾದ ಡಬ್ಲ್ಯುಎನ್‌ಎಸ್ ಗ್ಲೋಬಲ್ ಸರ್ವೀಸಸ್ನ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ.ಬಂಧಿತನನ್ನು ಶಿವಾಜಿನಗರ ನಿವಾಸಿ ಕೃಷ್ಣ ಸತ್ಯನಾರಾಯಣ ಕನೋಜ (30) ಎಂದು ಗುರುತಿಸಲಾಗಿದೆ.ಘಟನೆಯ ಸಮಯದಲ್ಲಿ ಕನೋಜಾ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದರು. ಶುಭದಾ ಶಂಕರ್ ಕೊಡರೆ (28) ಬಸ್ಸಿನಿಂದ ಇಳಿದಾಗ ಕನೋಜಾ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಯುವತಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.