ಸಮಗ್ರ ನ್ಯೂಸ್ : ಮೆಕ್ಸಿಕೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಣದ ಪ್ರತಿಮೆಯನ್ನು ದುಷ್ಕರ್ಮಿಯೊಬ್ಬ ನಾಶ ಪಡಿಸಿದ ಘಟನೆ ಮೆಕ್ಸಿಕೋದ ವಸ್ತು ಸಂಗ್ರಹಾಲಯದಲ್ಲಿ ನಡೆದಿದೆ.ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆಯನ್ನು ಯಾರು ಮಾಡಿದ್ದಾರೆಂದು ನಮಗೆ ತಿಳಿದಿಲ್ಲ ಎಂದು ಬಿಡಿಎಸ್ ಮೆಕ್ಸಿಕೋ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.
ವೈರಲ್ ಆದ ವಿಡಿಯೋದಲ್ಲಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಇಸ್ರೇಲ್ ಪ್ರಧಾನಿಯ ಮೇಣದ ಪ್ರತಿಮೆಯನ್ನು ಸುತ್ತಿಗೆಯಿಂದ ನಾಶಪಡಿಸಿದ್ದಾನೆ. ಇದರಿಂದಾಗಿ ಮ್ಯೂಸಿಯಂ ನೆಲದ ಮೇಲೆ ಪ್ರತಿಮೆ ಬಿದ್ದಿದ್ದು, ಕೆಂಪು ಬಣ್ಣವೂ ನೆಲಕ್ಕೆ ಬಿದ್ದಿರುವುದನ್ನು ನೋಡಬಹುದಾಗಿದೆ. ಅದಾದ ಬಳಿಕ ವಿಡಿಯೋದಲ್ಲಿ ಪ್ಯಾಲೇಸ್ಟೇನ್ ಧ್ವಜವನ್ನು ನೋಡಬಹುದಾಗಿದೆ.ನೆತನ್ಯಾಹು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ವಿರುದ್ಧ ಯುದ್ಧ ಎಸಗಿದ ಆರೋಪಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನಕ್ಕೆ ವಾರಂಟ್ ಹೊರಡಿಸಿದ್ದಾರೆ.