ಸಮಗ್ರ ನ್ಯೂಸ್: ತಿರುಪತಿಯಲ್ಲಿ ಟೋಕನ್ ವಿತರಣೆ ಕೇಂದ್ರದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಭಕ್ತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ತಿರುಪತಿ ನಗರದ ಬೈರಾಗಿಪಟ್ಟಡದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು. ಮಂದಿ ಪ್ರಾಣ ಕಳೆದುಕೊಂಡಿದ್ದು, 48 ಜನರು ಅಸ್ವಸ್ಥರಾಗಿದ್ದಾರೆ. ನಾರಾಯಣವನಂ ತಹಸೀಲ್ದಾರ್ ಅವರ ದೂರಿನಂತೆ ಪೂರ್ವ ಪಿಎಸ್‌ನಲ್ಲಿ ಬಿಎನ್ಎಎಸ್ ಕಲಂ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಿರುಮಲದಲ್ಲಿ ಕಾಲ್ತುಳಿತದ ಘಟನೆಯಿಂದ ಎಚ್ಚೆತ್ತಿರುವ ಟಿಟಿಡಿ ಶುಕ್ರವಾರ ವೈಕುಂಠ ಏಕಾದಶಿಗೆ ಬೃಹತ್ ವ್ಯವಸ್ಥೆ ಮಾಡಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಟಿಟಿಡಿ ಕ್ರಮ ಕೈಗೊಳ್ಳಲಿದೆ. ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ವಿಚಾರದಲ್ಲಿ ತಿರುಪತಿಯಲ್ಲಿರುವ ವಿಷ್ಣು ನಿವಾಸದ ಬಳಿ ಕಾಲ್ತುಳಿತ ಸಂಭವಿಸಿ ಹಲವಾರು ಭಕ್ತರು ಮೃತಪಟ್ಟಿರುವುದು ಆಘಾತಕ್ಕೀಡು ಮಾಡಿದೆ. ಭಕ್ತರು ಟೋಕನ್ ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಸಮಯದಲ್ಲಿ ನಡೆದ ಈ ದುರಂತ ಘಟನೆ ನನ್ನನ್ನು ತುಂಬಾ ನೋಯಿಸಿತು. ಕೆಲವು ಜನರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.