ಜೆಟ್‌ ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಮೃತದೇಹಗಳು ಪತ್ತೆ

ಸಮಗ್ರ ನ್ಯೂಸ್ : ಫ್ಲೋರಿಡಾದ ಫೋರ್ಟ್ ಲಾಡರೇಲ್-ಹಾಲಿವುಡ್ ವಿಮಾನ ನಿಲ್ದಾಣದಲ್ಲಿ ಜ. 06 ರಂದು ರಾತ್ರಿ ಭೂಸ್ಪರ್ಷ ಮಾಡಿದ ಜೆಟ್‌ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದಾಗಿ ಏರ್‌ಲೈನ್ ಅಸೋಸಿಯೇಟೆಡ್ ಮಾಹಿತಿ ನೀಡಿದೆ.ನ್ಯೂಯಾಕ್‌ರ್ನ ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 3 ಗಂಟೆಗಳ ಪ್ರಯಾಣದ ಬಳಿಕ ಲಾಡರೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.

Ad Widget ... ..

ಮೃತವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.”ಮೃತ ವ್ಯಕ್ತಿಗಳ ಗುರುತುಗಳು ಮತ್ತು ಅವರು ವಿಮಾನವನ್ನು ಹೇಗೆ ಪ್ರವೇಶಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜೆಟ್ ಬ್ಲೂ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.”ಇದು ಹೃದಯವಿದ್ರಾವಕ ಪರಿಸ್ಥಿತಿಯಾಗಿದೆ, ಮತ್ತು ಇದು ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಎಂದು ಏರ್ಲೈನ್ಸ್ ಹೇಳಿದೆ.

Ad Widget

Leave a Comment

Your email address will not be published. Required fields are marked *