ಸಮಗ್ರ ನ್ಯೂಸ್ : ಪ್ರಯಾಗರಾಜ್ ನಲ್ಲಿ ಜನವರಿ 13 ರಿಂದ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಭಾರತ ಮಾತ್ರವಲ್ಲದೆ ವಿಶ್ವದದ್ಯಂತ ಜನರು ಆಗಮಿಸುತ್ತಿದ್ದು, ಇದೀಗ ಕಾರ್ಯಕ್ರಮಕ್ಕೆ ಪರಿಸರ ಸ್ನೇಹಿ ಅನಾಜ್ ವಾಲೆ ಬಾಬಾ ಈಗಾಗಲೇ ಆಗಮಿಸಿದ್ದು, ವಿಶೇಷ ರೀತಿಯಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ.
ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಅನಾಜ್ ವಾಲೆ ಬಾಬಾ ಎಂದು ಕರೆಯಲ್ಪಡುವ ಈ ಯೋಗಿ ತನ್ನ ತಲೆಯ ಮೇಲೆ ನಿಜವಾದ ಬೆಳೆಗಳನ್ನು ಬೆಳೆಯುವ ಮೂಲಕ ಪರಿಸರ ಜಾಗೃತಿಯ ಜೀವಂತ ಸಂಕೇತವಾಗಿದ್ದಾರೆ.ಅನಾಜ್ ವಾಲೆ ಬಾಬಾ, ಅವರ ನಿಜವಾದ ಹೆಸರು ಅಮರ್ಜೀತ್, ಐದು ವರ್ಷಗಳಿಂದ ಗೋಧಿ, ರಾಗಿ, ಅವರೆ ಮತ್ತು ಅವರೆಕಾಳುಗಳನ್ನು ಬೆಳೆಸುತ್ತಾ ತನ್ನ ತಲೆಯನ್ನೆ ಗಾರ್ಡನ್ ಆಗಿ ಪರಿವರ್ತಿಸಿಕೊಂಡಿದ್ದಾರೆ.
ಅನಾಜ್ ವಾಲೆ ಬಾಬಾ, ತಮ್ಮ ತಲೆಯ ಮೇಲೆ ಗೋಧಿ, ರಾಗಿ, ಕಾಳು ಮತ್ತು ಅವರೆಕಾಳುಗಳಂತಹ ಬೆಳೆಗಳನ್ನು ಬೆಳೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮರಗಳನ್ನು ಕತ್ತರಿಸುವುದು ನಮ್ಮ ಪ್ರಪಂಚದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ ಹೀಗಾಗಿ ನಾನು ತಲೆಯ ಮೇಲೆ ಗಿಡ ನೆಟ್ಟಿದ್ದೇನೆ, ಜೊತೆಗೆ ಎಲ್ಲಿ ಹೋದರೂ ಕೂಡ ಹಸಿರನ್ನು ಬೆಳೆಸಿ, ಉಳಿಸಿ ಎಂದು ಜನರನ್ನು ಪ್ರೋತ್ಸಾಹಿಸುತ್ತೇನೆ ಎಂದರು.