ಸಮಗ್ರ ನ್ಯೂಸ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ಕೆನಡಾ ನಡುವೆ ದೊಡ್ಡ ಗಲಾಟೆ ಶುರುವಾಗಿದೆ. ಈ ಹಿಂದೆ ಕೂಡ ಡೊನಾಲ್ಡ್ ಟ್ರಂಪ್ & ಕೆನಡಾ ರಾಜಕಾರಣಿಗಳ ನಡುವೆ ಕಿರಿಕ್ ನಡೆದಿತ್ತು. ಆದರೆ ಈ ಬಾರಿ ದೊಡ್ಡ ಗಲಾಟೆ ಶುರುವಾಗಿದೆ. ಅದ್ರಲ್ಲೂ ಒಬ್ಬರ ನೆಲವನ್ನು ಮತ್ತೊಬ್ಬರು ಆಕ್ರಮಣ ಮಾಡುವ ಮಟ್ಟಿಗೆ ಮಾತುಕತೆ ನಡೆದು ಹೋಗಿದೆ.
ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಕ್ರಿಯೆಗೆ ಇದೀಗ ಕೆನಡಾ ರಾಜಕಾರಣಿ ಪ್ರತಿಕ್ರಿಯೆ ನೀಡಿದ್ದಾರೆ.ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬರುವ ಮೊದಲೇ ಹವಾ ಎಬ್ಬಿಸಿದ್ದಾರೆ. ಅಕ್ಕಪಕ್ಕದ ದೇಶಗಳಿಗೆ ಡೊನಾಲ್ಡ್ ಟ್ರಂಪ್ ಬಗ್ಗೆ ಭಯ ಶುರುವಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆವೆಯೇ ಮತ್ತೊಂದು ಪ್ರಮುಖ ಘಟನೆ ನಡೆದಿದೆ. ಕೆನಡಾ ಎಂಬ ದೈತ್ಯ ದೇಶದ ಮೇಲೆ ಡೊನಾಲ್ಡ್ ಟ್ರಂಪ್ ಅವರ ಕಣ್ಣು ಬಿದ್ದಿದ್ದು, ಇದೇ ವಿಚಾರವಾಗಿ ಸಿಕ್ಕಾಪಟ್ಟೆ ಕಿರಿಕ್ ಕೂಡ ಶುರುವಾಗಿದೆ. ಅದರಲ್ಲೂ ಕೆನಡಾ ನೆಲವನ್ನು ಅಮೆರಿಕ ಜೊತೆಗೆ ವಿಲೀನ ಮಾಡಿ, ಕೆನಡಾ ದೇಶಕ್ಕೆ 51ನೇ ರಾಜ್ಯದ ಪಟ್ಟ ಕೊಡುತ್ತೇನೆ ಅಂತಾ ಹೇಳಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಕೆನಡಾ ಇದೀಗ ತಿರುಗೇಟು ನೀಡಿದೆ.
ಅಂದಹಾಗೆ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಹೇಳಿಕೆಗೆ ಇದೀಗ ಕೆನಡಾ ರಾಜಕಾರಣಿ ಒಬ್ಬರು ಪ್ರತಿಕ್ರಿಯೆ ನೀಡಿದ್ದು, ಕೆನಡಾ ನೆಲವನ್ನು ಖರೀದಿ ಮಾಡುವ ಬಗ್ಗೆ ಡೊನಾಲ್ಡ್ ಟ್ರಂಪ್ ಮಾತನಾಡಿದರೆ ನಾವು ಅಲಾಸ್ಕಾ ಖರೀದಿ ಬಗ್ಗೆ ಮಾತನಾಡಬೇಕಾಗುತ್ತೆ ಎಂದಿದ್ದಾರೆ. ಹೀಗಾಗಿ ಅಮೆರಿಕ & ಕೆನಡಾ ನಡುವೆ ಸಂಬಂಧ ಹಾಳಾಗಿ ಹೋಗ್ತಿದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ.ಇನ್ನೊಂದು ಕಡೆ ಈಗಾಗಲೇ ಕೆನಡಾ ವಿರುದ್ದ ತೆರಿಗೆ ವಾರ್ ನಡೆಸುವ ಮುನ್ಸೂಚನೆ ನೀಡಿ ತಲ್ಲಣ ಎಬ್ಬಿಸಿದ್ದಾರೆ ಡೊನಾಲ್ಡ್ ಟ್ರಂಪ್. ಕೆನಡಾ ಸರ್ಕಾರ & ಅಲ್ಲಿನ ರಾಜಕಾರಣಿಗಳು ಈ ರೀತಿ ಟ್ರಂಪ್ ಮಾತಿನ ವಿರುದ್ಧ ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡ್ತಿದ್ದು ಮತ್ತಷ್ಟು ಗಮನ ಸೆಳೆದಿದೆ. ಹಾಗೇ ಕೆನಡಾ & ಅಮೆರಿಕ ನಡುವೆ ಎಲ್ಲಿ ಯುದ್ದ ನಡೆಯುತ್ತೋ? ಅನ್ನೋ ಅನುಮಾನವು ಇದೀಗ ಮೂಡಿದೆ.