Ad Widget .

Health Tips: ಪಾಲಕ್ ಸೊಪ್ಪು ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳು

ಇಲ್ಲಿದೆ ಸಂಪೂರ್ಣ ಮಾಹಿತಿ

Ad Widget . Ad Widget .

ಸಮಗ್ರ ನ್ಯೂಸ್ : ಚಳಿಗಾಲದಲ್ಲಿ ಸಾಮಾನ್ಯವಾಗಿ ಬಹುತೇಕ ಜನರು ಹೆಚ್ಚಾಗಿ ಪಾಲಕ್ ಸೊಪ್ಪು ತಿನ್ನುತ್ತಾರೆ.ಪಾಲಕ್ ಖಾದ್ಯಗಳು ಬಾಯಿಗೂ ರುಚಿಗೆ, ಆರೋಗ್ಯಕ್ಕೂ ಹಿತ. ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ನಮಗೆ ಗೊತ್ತಿಲ್ಲದೆಯೇ ಆರೋಗ್ಯಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಕಾರಿಯಾದರೂ ಕೆಲವು ಸಮಸ್ಯೆ ಇರುವವರಿಗೆ ಪಾಲಕ್‌ ಸೊಪ್ಪು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.

Ad Widget . Ad Widget .

ಆಹಾರದ ಅಲರ್ಜಿ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಪಾಲಕ್‌ ಸೊಪ್ಪು ಸೇವಿಸುವುದನ್ನು ತಪ್ಪಿಸಬೇಕು. ಇದು ಆರೋಗ್ಯದ ಮೇಲೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ.ಪಾಲಕ್ ಸೊಪ್ಪಿನಲ್ಲಿರುವ ಪ್ಯೂರಿನ್ ಎಂಬ ಅಂಶವು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಿದ್ದರೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಈಗಾಗಲೇ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಅಥವಾ ಕೀಲು ನೋವಿನಿಂದ ಬಳಲುತ್ತಿರುವವರು ಪಾಲಕ್‌ ಸೊಪ್ಪನ್ನು ಸೇವಿಸುವುದನ್ನು ತಪ್ಪಿಸಬೇಕು.

ನೀವು ಈಗಾಗಲೇ ಆಸ್ಪಿರಿನ್‌ನಂತಹ ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ತಪ್ಪಾಗಿಯೂ ಸಹ ಪಾಲಕ್ ಸೊಪ್ಪನ್ನು ಸೇವಿಸಬೇಡಿ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಕೆ ರಕ್ತ ತೆಳುವಾಗಿಸುವ ಔಷಧಿಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇದು ದೇಹಾರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ.ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಪಾಲಕ್‌ ಸೊಪ್ಪನ್ನು ಸೇವಿಸುವುದನ್ನು ತಪ್ಪಿಸಬೇಕು. ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಾಲಿಕ್ ಆಸಿಡ್ ಇರುವುದರಿಂದ ಕಿಡ್ನಿ ಸ್ಟೋನ್ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಪಾಲಕ್‌ ಸೊಪ್ಪು ತಿಂದರೆ ಕೆಲವರಿಗೆ ಅಲರ್ಜಿ ಆಗಬಹುದು. ಬೇಯಿಸಿದ ಅಥವಾ ಹಸಿ ಪಾಲಕ್ ಎಲೆಗಳನ್ನು ತಿನ್ನುವುದು ಅಲರ್ಜಿಯನ್ನು ಉಂಟುಮಾಡಬಹುದು. ಕೆಲವೊಮ್ಮೆ ಪಾಲಕ್ ಅಲರ್ಜಿಗಳು ಓರಲ್ ಅಲರ್ಜಿ ಸಿಂಡೋಮ್ ಅನ್ನು ಹೋಲಬಹುದು.ಇನ್ನು ಪಾಲಕ್ ಮತ್ತು ಕೇಲ್‌ನಂತಹ ಹಸಿರು ತರಕಾರಿಗಳು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ, ಆದರೆ ಅವುಗಳಲ್ಲಿ ಇರುವ ಆಕ್ಸಲೇಟ್‌ಗಳು ಕ್ಯಾಲ್ಸಿಯಂನೊಂದಿಗೆ ಬಂಧಿಸುತ್ತದೆ ಮತ್ತು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.

Leave a Comment

Your email address will not be published. Required fields are marked *