Ad Widget .

ದೆಹಲಿಯಲ್ಲಿ ಗೌಪ್ಯವಾಗಿ ಅಮಿತ್ ಶಾ ಭೇಟಿ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ರೆಬಲ್ಸ್ ಸೂಚಿಸಿದ ಹೆಸರು ಯಾವುದು ಗೊತ್ತಾ?

ಸಮಗ್ರ ನ್ಯೂಸ್ : ರಾಜ್ಯದಲ್ಲಿ ಬಿಜೆಪಿ ಬಣ ರಾಜಕೀಯ ಅಂತ್ಯವಾಗುವ ಯಾವುದೇ ಸೂಚನೆ ಕಾಣುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರದ್ದು ಒಂದು ಬಣವಾದರೆ, ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಮತ್ತೊಂದು ಬಣ ಆಯಕ್ಟಿವ್ ಆಗಿದೆ.ವಕ್ಸ್ ವಿರುದ್ಧದ ಹೋರಾಟವನ್ನು ಪ್ರತ್ಯೇಕವಾಗಿ ನಡೆಸುತ್ತಿರುವ ಯತ್ನಾಳ್ ನೇತೃತ್ವದ ಬಣ, ಜ. 06 ರಂದು ಜೆಪಿಸಿ ಅಧ್ಯಕ್ಷರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಿತ್ತು.

Ad Widget . Ad Widget .

ಈ ನಡುವೆ ಜ. 07 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರೆಬಲ್ಸ್ ಟೀಂ ಭೇಟಿ ಮಾಡಿದೆ ಎನ್ನಲಾಗಿದೆ. ಇತ್ತೀಚೆಗೆ ದೆಹಲಿಗೆ ತೆರಳಿದ್ದ ಬಿಜೆಪಿ ರೆಬಲ್ಸ್ ಟೀಂ ರಹಸ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಈ ಭೇಟಿ ವಿಚಾರವನ್ನು ಗೌಪ್ಯವಾಗಿಡುವಂತೆ ರೆಬಲ್ಸ್ಗಳಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಸುಮಾರು 45 ನಿಮಿಷಗಳ ಕಾಲ ಅಮಿತ್ ಶಾ ಜೊತೆ ಬಿಜೆಪಿ ರೆಬಲ್ಸ್ ಟೀಂ ಮಾತನಾಡಿದೆ ಎಂದು ತಿಳಿದು ಬಂದಿದೆ. ಯತ್ನಾಳ್ ಅನುಪಸ್ಥಿತಿಯಲ್ಲಿ ಅಮಿಯ್ ಶಾ ಜೊತೆ ರೆಬಲ್ಸ್ ಮಾತುಕತೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಅಲ್ಲದೆ ರಾಜ್ಯಾಧ್ಯಕ್ಷರ ಬದಲಾವಣೆಯ ಅವಶ್ಯಕತೆ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.ಅಲ್ಲದೆ ಒಬಿಸಿ ಕೋಟಾದಡಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಅಮಿತ್ ಶಾ ಮುಂದೆ ರೆಬಲ್ಸ್ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.ವಕ್ಸ್ ಹೋರಾಟದ ವರದಿ ಬಗ್ಗೆಯೂ ಅಮಿತ್ ಶಾ ಅವರಿಗೆ ಮಾಹಿತಿ ರೆಬಲ್ಸ್ ಮಾಹಿತಿ ನೀಡಿದ್ದು, ವಕ್ಸ್ ಹೋರಾಟಕ್ಕೆ ಬಿಜೆಪಿ ರೆಬಲ್ಸ್‌ಗಳಿಗೆ ಅಮೀತ್ ಶಾ ಶಹಬ್ಬಾಸ್ ಎಂದಿದ್ದಾರೆ. ಅಲ್ಲದೆ ತಾಲೂಕು ಹಂತದಲ್ಲಿ ವಕ್ಸ್‌ ಹೋರಾಟ ಕೊಂಡೊಯ್ಯುವಂತೆ ಅಮೀತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಭೇಟಿಗಾಗಿಯೇ ನಿನ್ನೆಯಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದ ಬಿಜೆಪಿ ರೆಬಲ್ಸ್, ಅಂದುಕೊಂಡಂತೆ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.ಇತ್ತ ರೆಬಲ್ಸ್ ದೆಹಲಿ ಭೇಟಿ ಬೆನ್ನಲ್ಲೇ ಆಯಕ್ಟಿವ್ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡಲು ಮುಂದಾಗಿದ್ದಾರೆ. ಪರಾಜಿತ ಅಭ್ಯರ್ಥಿಗಳೊಂದಿಗೆ ಬಿ ವೈ ವಿಜಯೇಂದ್ರ ಸಭೆ ನಡೆಸಲು ಪ್ಲಾನ್ ಮಾಡಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಗಾಗಿ ಬೆಂಗಳೂರಲ್ಲಿ ಜನವರಿ 10ರಂದು ಸಭೆ ನಡೆಸಲಿದ್ದಾರೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ಪೂರ್ವ ತಯಾರಿ ಸಭೆ ನಡೆಸಲಿದ್ದಾರೆ. ಚುನಾವಣಾ ತಯಾರಿ ನೆಪದಲ್ಲಿ ಕ್ಷೇತ್ರವಾರು ಮುಖಂಡರ ವಿಶ್ವಾಸಗಳಿಸಲು ವಿಜಯೇಂದ್ರ ಮುಂದಾಗಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *