Ad Widget .

ಬಸ್ ಟಿಕೆಟ್ ದರ ಹೆಚ್ಚಳದ ನಡುವೆ ಬಸ್ ಪಾಸ್ ದರವೂ ಏರಿಕೆ| ಜ.9ರಿಂದಲೇ ಪರಿಷ್ಕೃತ ದರ ಜಾರಿ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಟಿಕೆಟ್​ ದರ ಏರಿಸುವ ಮೂಲಕ ಪ್ರಯಾಣಿಕರಿಗೆ ಶಾಕ್​ ರಾಜ್ಯ ಸರ್ಕಾರವು ಇದೀಗ ಮತ್ತೊಂದು ಸುತ್ತಿನ ಆಘಾತವನ್ನು ನೀಡಿದೆ. ಟಿಕೆಟ್​ ದರದ ಬೆನ್ನಲ್ಲೇ ದೈನಿಕ ಹಾಗೂ ಮಾಸಿಕ ಪಾಸ್​ಗಳ ದರವನ್ನು ಏರಿಸಿ ರಾಜ್ಯ ಸರ್ಕಾರ ಮತ್ತೊಂದು ಸುತ್ತಿನ ಶಾಕ್​ ನೀಡಿದೆ.

Ad Widget . Ad Widget .

ಅದರಂತೆ ಜನವರಿ 09ರಿಂದ ದೈನಿಕ ಹಾಗೂ ಮಾಸಿಕ ಪಾಸ್​ಗಳ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಈ ಸಂಬಂಧ ಹೊಸ ದರಪಟ್ಟಿಯನ್ನು ಪ್ರಕಟಣೆ ಮೂಲಕ ಹೊರಡಿಸಲಾಗಿದೆ. ಇದಲ್ಲದೆ ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್‌ಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದ್ದು, ಈ ದರವನ್ನು ಶೇ 15ರಷ್ಟು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

Ad Widget . Ad Widget .

ಪ್ರತಿ ಕಿಮೀ ದರದ ಮೇಲೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸಾರಿಗೆ, ಅಶ್ವಮೇಧ, ಪಲಕ್ಕಿ ಸೇರಿದಂತೆ 16 ಬಗೆಯ ಬಸ್‌ಗಳ ಬಾಡಿಗೆ ದರ ಏರಿಕೆಯಾಗಿದೆ. ಐರಾವತ, ಅಂಬಾರಿ ಸೇರಿದಂತೆ ಮತ್ತಿತರ ಎಸಿ ಬಸ್‌ಗಳಿಗೆ ಜಿಎಸ್‌ಟಿ ಸೇರಿದಂತೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನೂತನ ದರವು ಇಂದಿನಿಂದ ಅನ್ವಯವಾಗಲಿದೆ.

ಹೊಸ ದರಪಟ್ಟಿ ಹೀಗಿದೆ: ಬಿಎಂಟಿಸಿ ಡೈಲಿ ಪಾಸ್ – 70 ರೂ. (ಹಳೆಯ ದರ), 80 ರೂ. (ಹೊಸ ದರ)
ಬಿಎಂಟಿಸಿ ವಾರದ ಪಾಸ್ – 300 ರೂ. (ಹಳೆಯ ದರ), 350 ರೂ. (ಹೊಸ ದರ)
ಹಿರಿಯ ನಾಗರಿಕರ ಮಾಸಿಕ ಪಾಸ್ – 945 ರೂ. (ಹಳೆಯ ದರ), 1,080 ರೂ. (ಹೊಸ ದರ)
ಸಾಮಾನ್ಯ ಮಾಸಿಕ ಪಾಸ್ – 1,050 ರೂ. (ಹಳೆಯ ದರ), 1,200 ರೂ. (ಹೊಸ ದರ)
ನೈಸ್ ರೋಡ್ ಮಾಸಿಕ ಪಾಸ್ – 2,200 ರೂ. (ಹಳೆಯ ದರ), 2,350 ರೂ. (ಹೊಸ ದರ)

Leave a Comment

Your email address will not be published. Required fields are marked *