ಸಮಗ್ರ ನ್ಯೂಸ್: ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಿಸಲಾಗಿದೆ. ಜ.31 ರವರೆಗೆ ರವರೆಗೆ HSRP ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆಧಿಕೃತ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸುಮಾರು 2 ಕೋಟಿ ಹಳೆ ವಾಹನಗಳಿದ್ದು, 55 ಲಕ್ಷ ವಾಹನ ಮಾತ್ರ HSRP ಅಳವಡಿಸಿಕೊಂಡಿವೆ. 2019ರ ಏ. 1ಕ್ಕೆ ಮೊದಲು ನೋಂದಣಿಯಾದ ವಾಹನಗಳಿಗೆ HSRP ಕಡ್ಡಾಯ ಮಾಡಲಾಗಿದೆ. ಬಹುತೇಕ ವಾಹನಗಳಿಗೆ ಇನ್ನೂ ಹೆಚ್.ಎಸ್.ಆರ್.ಪಿ. ಹಾಕಿಸದ ಹಿನ್ನಲೆಯಲ್ಲಿ ಮತ್ತೆ ಗಡುವು ವಿಸ್ತರಣೆ ಮಾಡಲಾಗಿದೆ.
HSRP ಅಳವಡಿಕೆಗೆ ಡಿ 31 ಕೊನೆ ದಿನವಾಗಿತ್ತು. ಇದೀಗ ಜ.31 ರವರೆಗೆ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ. ಎಚ್‌ಎಸ್‌ಆರ್ಪಿ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದು ಅರ್ಥವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸಿದೆ. ಎಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ವಾಹನ ಮಾಲೀಕರು ವಿಳಾಸ ಬದಲಾವಣೆ, ನಕಲಿ ಆರ್ಸಿ, ವಿಮೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.