ಸಮಗ್ರ ನ್ಯೂಸ್ : ಪತ್ರಕರ್ತ ಮುಕೇಶ್ ಚಂದ್ರಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಹೈದರಾಬಾದ್‌ನಲ್ಲಿ ಜ.5 ರಂದು ರಾತ್ರಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.ಬಂಧಿತ ಆರೋಪಿಯನ್ನು ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಎನ್ನಲಾಗಿದ್ದು ಈತ ಮುಕೇಶ್ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.ಅಲ್ಲದೆ ಘಟನೆ ಬೆಳಕಿಗೆ ಬಂದಾಗಿನಿಂದ ಸುರೇಶ್ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಪೊಲೀಸರ ಹೇಳಿಕೆ ಪ್ರಕಾರ, ಪತ್ರಕರ್ತ ಮುಕೇಶ್ ಹತ್ಯೆ ಬೆನ್ನಲ್ಲೇ ಗುತ್ತಿಗೆದಾರ ಸುರೇಶ್ ನಾಪತ್ತೆಯಾಗಿದ್ದ ಅಲ್ಲದೆ ಆತ ಹೈದರಾಬಾದ್‌ನಲ್ಲಿರುವ ತನ್ನ ಚಾಲಕನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.ಇತ್ತ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪೊಲೀಸರು 200 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಜೊತೆಗೆ ಸುಮಾರು 300 ಮೊಬೈಲ್ ಸಂಖ್ಯೆಗಳನ್ನು ಪತ್ತೆಹಚ್ಚಿದರು ಎನ್ನಲಾಗಿದೆ.ಚಂದ್ರಾಕರ್ ನನ್ನ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಅಲ್ಲದೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿರುವ ಚಂದ್ರಾಕರ್ ಅವರ ಪತ್ನಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಛತ್ತೀಸ್‌ಗಢದ ಬಸ್ತಾರ್ ನಲ್ಲಿ ಗುತ್ತಿಗೆದಾರರೊಬ್ಬರ ಒಡೆತನದ ಶೆಡ್‌ನಲ್ಲಿನ ಟ್ಯಾಂಕ್‌ನಲ್ಲಿ ಮುಕೇಶ್ ಚಂದ್ರಾಕರ್ ಅವರ ಮೃತದೇಹ ಪತ್ತೆಯಾಗಿತ್ತು. ಮುಕೇಶ್ ಅವರು ಖಾಸಗಿ ಸುದ್ದಿ ಸಂಸ್ಥೆಯಲ್ಲಿ ವರದಿಗಾರರೂ ಜೊತೆಗೆ ಸ್ವತಂತ್ರ ಪತ್ರಕರ್ತರಾಗಿಯೂ ಕರ್ತವ್ಯ ನಿರ್ವಹಿಸಿಯುತ್ತಿದ್ದರು. ಹಾಗೆ ಕಳೆದ ವಾರ ಛತ್ತೀಸ್ ಗಢದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸ್ಥಳೀಯ ಗುತ್ತಿಗೆದಾರನ ಕುರಿತು ವರದಿ ಮಾಡಲಾಗಿತ್ತು ಇದಾದ ಬಳಿಕ ಮುಕೇಶ್ ನಾಪತ್ತೆಯಾಗಿದ್ದರು ಈ ನಿಟ್ಟಿನಲ್ಲಿ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಇದಾದ ಬಳಿಕ ಗುತ್ತಿಗೆದಾರರೊಬ್ಬರ ಒಡೆತನದ ಶೆಡ್‌ನಲ್ಲಿನ ಟ್ಯಾಂಕ್‌ನಲ್ಲಿ ಮುಕೇಶ್ ಮೃತದೇಹ ಪತ್ತೆಯಾಗಿತ್ತು.