ಕೋಲಾರದಲ್ಲಿ ಯುವಕನನ್ನು ಅಟ್ಟಾಡಿಸಿ ಕೊಂದ ಪ್ರಕರಣ; ನಾಲ್ವರು ಆರೋಪಿಗಳು

ಸಮಗ್ರ ನ್ಯೂಸ್ : ಪ್ರೇಯಸಿಯ ಮನೆಗೆ ಹೋಗಿ ಹಿಂದಿರುಗುವಾಗ ಯುವಕನನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ (28) ಎನ್ನುವ ಯುವಕ ಇದೀಗ ಸಾವನ್ನಪ್ಪಿದ ಘಟನೆ ಕೋಲಾರದ ನೂರ್ ನಗರದಲ್ಲಿ ಜ.4ರಂದು ಮಧ್ಯರಾತ್ರಿ ನಡೆದಿದೆ.

Ad Widget ... ..

ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಗಲ್ ಪೇಟೆ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಆಫ್ರೀದ್, ಜಮೀರ್, ನಜೀ‌ರ್ ಹಾಗೂ ಸಲ್ಮಾನ್ ಪಾಷ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಪ್ರಿಯತಮೆ ಮನೆಗೆ ತೆರಳಿದ್ದಾಗ ಅಟ್ಟಾಡಿಸಿ ಕೊಲೆ ಮಾಡಿದ್ದರು.ಪ್ರೇಯಸಿಯ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದು ಹತ್ಯೆ ಮಾಡಲಾಗಿದೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.ಉಸ್ಮಾನ್ ಕಳೆದೆ 5 ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ.

Ad Widget

ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್‌ಗೆ ಪ್ರೀತಿಯಾಗಿದೆ. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು ಎಂದು ತಿಳಿದು ಬಂದಿದೆ.ಕೊಲೆಯಾದ ಉಸ್ಮಾನ್ ಕಳೆದ ರಾತ್ರಿ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಅಲ್ಲದೇ ಆಕೆಯನ್ನು ಮದುವೆ ಮಾಡಿಕೊಡುವಂತೆ ಹೇಳಿದ್ದ. ಇದರಿಂದ ಆತ ವಾಪಸ್ ತೆರಳುತ್ತಿದ್ದಾಗ ಯುವತಿಯ ಕುಟುಂಬಸ್ಥರು ಹಾಗೂ ಸ್ಥಳೀಯರು, ಉಸ್ಮಾನ್‌ನನ್ನು ಏರಿಯಾದಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದರು.ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Comment

Your email address will not be published. Required fields are marked *