ಸಮಗ್ರ ನ್ಯೂಸ್: ಸರ್ಕಾರಿ ಬಸ್‌ಗಳ ಟಿಕೆಟ್ ದರವನ್ನು ಹೆಚ್ಚಿಸುವ ಮೂಲಕ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಖಾತರಿ ಯೋಜನೆ ನಿಲ್ಲಿಸಲು ರಾಜ್ಯ ಸರ್ಕಾರ ಕಾರಣ ಹುಡುಕುತ್ತಿದೆ. ಗ್ಯಾರಂಟಿಯನ್ನು ಕೊನೆಗೊಳಿಸಲು ಅವರು ಇನ್ನೂ ಕಾರಣವನ್ನು ಹುಡುಕುತ್ತಿದ್ದಾರೆ.ಆದರೆ ಯಾವುದೇ ಕಾರಣಕ್ಕೂ 5 ಗ್ಯಾರಂಟಿಗಳನ್ನು ನಿಲ್ಲಿಸುವುದು ಬೇಡ ಎಂದು ಜನ ಹೇಳುತ್ತಿದ್ದಾರೆ.
ಸಾಕಷ್ಟು ಜನರಿಗೆ ಇದರಿಂದ ಅನುಕೂಲವಾಗಿದೆ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ನನ್ನ ವಿರೋಧವಿಲ್ಲ. ದಯವಿಟ್ಟು ನಿಲ್ಲಿಸಬೇಡಿ, ಮುಂದುವರೆಸಿ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.ಜನರಿಂದಲೇ ಕಿತ್ತುಕೊಂಡು ಅವರಿಗೆ ಕೊಡುವ ಕೆಲಸ ಮಾಡಬಾರದು. ಅತ್ತೆಯ ಆಸ್ತಿಯನ್ನು ಅಳಿಯ ದಾನ ಮಾಡಿದ ಎನ್ನುವ ಮಾತಿನಂತೆ ಜನರಿಂದ ಕಿತ್ತುಕೊಂಡು ಅವರಿಗೆ ಕೊಡುವುದಕ್ಕೆ ಇವರೇ ಬೇಕಾ? ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.