ಸಮಗ್ರ ನ್ಯೂಸ್: ಕೊಪ್ಪಳ ಪತ್ನಿಯ ಶೀಲ ಶಂಕಿಸಿ ಪತಿ ಆಕೆಯ ಕತ್ತು ಹಿಸುಕಿ ಕೊಂದ ಘಟನೆ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಜನತಾ ಕಾಲೋನಿಯಲ್ಲಿ ಜ.5 ರಂದು ನಡೆದಿದೆ.
ರೇಣುಕಾ(25) ಮೃತ ಗೃಹಿಣಿ. ಪತಿ ಅನಿಲ್ ಸಂಗಟಿ, ಪತ್ನಿಯನ್ನ ಕೊಂದ ಆರೋಪಿ. ಕಳೆದ ನಾಲ್ಕು ವರ್ಷಗಳ ಹಿಂದೆ ಭಾಗ್ಯನಗರದ ಅನಿಲ್ ಸಂಗಟಿ ಹಾಗೂ ಗದಗ ಜಿಲ್ಲೆಯ ತಿಮ್ಮಾಪುರದ ರೇಣುಕಾ ಮದುವೆಯಾಗಿದ್ದರು.ಮದುವೆ ಬಳಿಕ ಚೆನ್ನಾಗಿಯೇ ನೋಡಿಕೊಂಡ ಪತಿ ಆರು ತಿಂಗಳ ನಂತರ ನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡಲು ಶುರು ಮಾಡಿದ್ದಾನೆ. ಅಲ್ಲದೇ ಬೇರೆ ಯಾರೊಂದಿಗೆ ಸಂಬಂಧ ಬೆಳೆಸಿದ್ದಿ ಎಂದು ಶೀಲ ಶಂಕಿಸಿ ಪತ್ನಿಗೆ ಬೈಯುವುದು ಹೊಡೆಯುವುದು ಮಾಡಿದ್ದಾನೆ.
ದಿನನಿತ್ಯ ಗಂಡನಿಂದ ದೈಹಿಕ, ಮಾನಸಿಕ ಕಿರುಕುಳಕ್ಕೆ ಬೇಸತ್ತಿದ್ದ ಪತ್ನಿ ರೇಣುಕಾ ತಂದೆ-ತಾಯಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ರೇಣುಕಾ ಪೋಷಕರು ಬಂದು ಕರೆದುಕೊಂಡು ಹೋಗಿದ್ದಾರೆ. ಪತ್ನಿ ತವರು ಮನೆಗೆ ಹೋದ ಬಳಿಕ ಮತ್ತೆ ಕೂಡಿ ಬಾಳೋಣ ಅಂತಾ ಪುಸಲಾಯಿಸಿ ಪತ್ನಿಯನ್ನ ತವರು ಮನೆಯಿಂದ ಕೊಪ್ಪಳದ ಭಾಗ್ಯನಗರಕ್ಕೆ ಕರೆದುಕೊಂಡು ಬಂದಿದ್ದ ಆರೋಪಿ. ಗಂಡನ ಮನೆಗೆ ಬಂದ ಬಳಿಕ ರೇಣುಕಾ ತಂದೆ-ತಾಯಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದಾಳೆ. ಆದರೆ ರಾತ್ರಿ ಅನಿಲ್ ಸಂಗಟಿ ಮತ್ತೆ ಕುಡಿದು ಬಂದು ರಾಕ್ಷಸನಂತೆ ರೇಣುಕಾ ಮೇಲೆ ಎರಗಿ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿದ್ದಾನೆ.
ನಸುಕಿನ ಜಾವ 3 ಗಂಟೆ ಸುಮಾರಿಗೆ ತವರು ಮನೆಗೆ ಫೋನ್ ಮಾಡಿ ನಿಮ್ಮ ಮಗಳು ನೇಣುಹಾಕಿಕೊಂಡಿದ್ದಾಳೆ ಗಂಡನ ಕಡೆಯವರು ಫೋನ್ ಮಾಡಿ ತಿಳಿಸಿದ್ದಾರೆ.ಮೃತ ರೇಣುಕಾ ಪೋಷಕರು ಬಂದು ಮಗಳನ್ನ ನೋಡಿದಾಗ ಮನೆಯಲ್ಲಿ ಶವ ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಮಗಳು ನೇಣುಬಿಗಿದಿಲ್ಲ. ಗಂಡನ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕಿ ಎಸ್‌ಪಿ ಡಾ ಶ್ರೀರಾಮ ಎಲ್ ಅರೆಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.