Ad Widget .

ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಹೆಚ್ಚಿದ ಬೇಡಿಕೆ/ ಶೀಘ್ರದಲ್ಲೇ ಇತರ ಜಿಲ್ಲೆಗಳಿಗೂ ವಿಸ್ತರಣೆ

ಸಮಗ್ರ ನ್ಯೂಸ್‌: ಕೆಎಂಎಫ್ ಪರಿಚಯಿಸಿದ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೇವಲ ಮೂರು ದಿನದಲ್ಲಿ ಬರೋಬ್ಬರಿ 2250 ಮೆಟ್ರಿಕ್ ಟನ್ ಹಿಟ್ಟು ಮಾರಾಟವಾಗಿದೆ. ಸದ್ಯ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ದೋಸೆ ಹಿಟ್ಟಿನ ಮಾರಾಟಕ್ಕೆ ಸಖತ್ ಬೇಡಿಕೆ ಸೃಷ್ಟಿಯಾದ್ದು, ಶೀಘ್ರದಲ್ಲೇ ಇತರ ಜಿಲ್ಲೆಗಳಿಗೂ ದೋಸೆ ಹಿಟ್ಟಿನ ವ್ಯಾಪಾರ ವಿಸ್ತರಿಸಲು ಕೆಎಂಎಫ್ ಸಜ್ಜಾಗುತ್ತಿದೆ.

Ad Widget . Ad Widget .

ರಾಜಧಾನಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದ್ದಂತೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶೀಘ್ರದಲ್ಲೇ ದೋಸೆ-ಇಡ್ಲಿ ಹಿಟ್ಟಿನ ಮಾರಾಟ ಮಾಡಲು ನಿರ್ಧಾರ ಮಾಡಿದೆ. ಇತ್ತ ನಂದಿನಿ ಪರಿಚಯಿಸಿರುವ ದೋಸೆ ಹಿಟ್ಟಿನಲ್ಲಿ ವೇ ಪ್ರೋಟೀನ್ ಕೂಡ ಇರುವುದರಿಂದ ಸದ್ಯ ಜಿಮ್, ಡಯಟ್ ಬಗ್ಗೆ ಗಮನಹರಿಸುವವರು ಕೂಡ ನಂದಿನಿ ಹಿಟ್ಟಿನ ಮೊರೆಹೋಗುತ್ತಿದ್ದಾರೆ. ಮುಂದಿನ ಒಂದು ವಾರದೊಳಗಾಗಿ ಇತರೆ ಜಿಲ್ಲೆಗಳಲ್ಲೂ ದೋಸೆ, ಇಡ್ಲಿ ಹಿಟ್ಟು ಮಾರಾಟ ಆರಂಭಿಸುವುದಾಗಿ ಕೆಎಂಎಫ್ ಸುಳಿವು ನೀಡಿದೆ.

Ad Widget . Ad Widget .

ಸದ್ಯ ಬೆಂಗಳೂರಲ್ಲಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂಗೆ 80 ರೂಪಾಯಿ ದರ ನಿಗದಿಪಡಿಸಿರುವ ಕೆಎಂಎಫ್. ಇದೇ ಪ್ರಥಮಬಾರಿಗೆ ದೋಸೆ ಹಿಟ್ಟಿಗೆ ಶೇಕಡ 5 ರಷ್ಟು ವೇ ಪ್ರೊಟೀನ್ ಸೇರಿಸಿ ಜನರಿಗೆ ನೀಡುತ್ತಿದೆ. ಇದರಿಂದಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ.

Leave a Comment

Your email address will not be published. Required fields are marked *