ದಾಂಪತ್ಯ ಜೀವನಕ್ಕೆ ಕಾಲಿಟ್ಟ‌ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್

ಸಮಗ್ರ ನ್ಯೂಸ್: ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಂದು (ಜನವರಿ 2) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಮಾನ್ ಮಲಿಕ್ ಅವರು ಪ್ರಿಯತಮೆ ಆಶ್ನಾ ಶ್ರಾಫ್ ಜೊತೆ ಮದುವೆಆಗಿದ್ದಾರೆ. ಮದುವೆಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ad Widget ... ..

ಅರ್ಮಾನ್ ಮಲಿಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟೀವ್ ಆಗಿರುತ್ತಾರೆ. ತಮ್ಮ ಫ್ಯಾನ್ಸ್ ಜೊತೆ ಅವರು ಸಂಪರ್ಕದಲ್ಲಿ ಇರುತ್ತಾರೆ. ಆದರೆ ವೈಯಕ್ತಿಕ ಜೀವನದ ವಿಚಾರಗಳನ್ನು ಸಾಧ್ಯವಾದಷ್ಟು ಗೌಪ್ಯವಾಗಿ ಇಡುತ್ತಾರೆ. ಈಗ ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರ ಮದುವೆ ನಡೆದಿದೆ. ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅರ್ಮಾನ್ ಮಲಿಕ್ ಅವರು ಶುಭ ಸುದ್ದಿ ನೀಡಿದ್ದಾರೆ.

Ad Widget

ಹಲವು ವರ್ಷಗಳಿಂದ ಅರ್ಮಾನ್ ಮಲಿಕ್ ಹಾಗೂ ಆಶ್ನಾ ಶ್ರಾಫ್ ಪ್ರೀತಿಸುತ್ತಿದ್ದರು. ಈಗ ಅವರು ಸತಿ-ಪತಿ ಆಗಿದ್ದಾರೆ. ಮದುವೆ ಫೋಟೋಗಳನ್ನು ಹಂಚಿಕೊಂಡು ‘ನೀನೇ ನನ್ನ ಮನೆ’ ಎಂದು ಅರ್ಮಾನ್ ಮಲಿಕ್ ಅವರು ಕ್ಯಾಪ್ಷನ್ ನೀಡಿದ್ದಾರೆ. 2023ರಲ್ಲಿ ಅರ್ಮಾನ್ ಮಲಿಕ್ ಮತ್ತು ಆಶ್ನಾ ಶ್ರಾಫ್ ನಿಶ್ಚಿತಾರ್ಥ ಆಗಿತ್ತು. ಫ್ಯಾಷನ್​ ಜಗತ್ತಿನಲ್ಲಿ ಆಶ್ನಾ ಶ್ರಾಫ್ ಸಕ್ರಿಯರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅರ್ಮಾನ್ ಮಲಿಕ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹಿಂದಿ, ಕನ್ನಡ, ತೆಲುಗು, ಪಂಜಾಬಿ, ತಮಿಳು, ಮರಾಠಿ ಮಂತಾದ ಭಾಷೆಯ ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಅರ್ಮಾನ್ ಮಲಿಕ್ ಹಾಡಿನ ಗೀತೆಗಳು ಸೂಪರ್​ ಹಿಟ್ ಆಗಿವೆ.

Leave a Comment

Your email address will not be published. Required fields are marked *