December 2024

ಲಂಚ ಪಡೆಯಲು ಫೋನ್‌ಪೇ ಬಳಕೆ -ತಗಲಾಕ್ಕೊಂಡ ಪಿಡಿಓ!

ಸಮಗ್ರ ನ್ಯೂಸ್: ಲಂಚ ಅನ್ನೋದು ಸಮಾಜದಲ್ಲಿ ವಿಷಜಂತುಗಳ ರೀತಿ ದಿನೇ ದಿನೇ ಹೆಚ್ಚಿದೆ. ಕಾಸು ಕೊಡದಿದ್ರೆ ಸರ್ಕಾರಿ ಫೈಲ್ ಗಳು ಟೇಬಲ್ ನಿಂದ ಮುಂದಿಕ್ಕೆ ಸಾಗೋದೇ ಇಲ್ಲ. ಡೈರೆಕ್ಟ್ ಆಗಿ ಹಣ ಸ್ವೀಕರಿಸೋದಕ್ಕೆ ಹೆದರುವ ಅಧಿಕಾರಿಗಳು ಈಗ ಡಿಜಿಟಲ್ ಮಾರ್ಗದ ಮೊರೆ ಹೋಗಿದ್ದಾರೆ. ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಲಂಚ ಪಡೆಯುವವರ ಸಂಖ್ಯೆ ಹೆಚ್ಚಿದ್ದು, ಕಲಬುರಗಿಯಲ್ಲಿ PDO ಅಧಿಕಾರಿಯೊಬ್ಬರು ತಗ್ಲಾಕೊಂಡಿದ್ದಾರೆ.ಕವಲಗಾ ಗ್ರಾಮ ಪಂಚಾಯ್ತಿಯ ಪಿಡಿಓ ಪ್ರೀತಿ ರಾಜ್ ಲೋಕಾಯುಕ್ತರ ಕೈಲಿ ಸಿಕ್ಕಿಹಾಕಿಕೊಂಡಿದ್ದು, ಪಂಪ್‌ ಆಪರೇಟರ್ […]

ಲಂಚ ಪಡೆಯಲು ಫೋನ್‌ಪೇ ಬಳಕೆ -ತಗಲಾಕ್ಕೊಂಡ ಪಿಡಿಓ! Read More »

ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

ಸಮಗ್ರ ನ್ಯೂಸ್: ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಪರಿಸರ ಪ್ರೇಮಿ ‘ತುಳಸಿಗೌಡ’ (86) ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತುಳಸಿಗೌಡ’ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರಾದ ತುಳಸಿ ಗೌಡ ಅವರು ಹಾಲಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ಅವರ ಕೆಲಸವನ್ನು ಕೊಂಡಾಡಿ ಭಾರತ ಸರ್ಕಾರವು 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ Read More »

ಕೊಕ್ಕಡ: ಖಾಸಗಿ ಬಸ್ ನಡಿಗೆ ಬಿದ್ದು ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯರಸ್ತೆಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎನ್ನುವಲ್ಲಿ ಬಸ್ಸಿನಡಿಗೆ ಬೈಕ್‌ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಡಿ. 15ರ ಸಂಜೆ ಸಂಭವಿಸಿದೆ. ಮೂಡುಬೈಲು ನಿವಾಸಿ ಮಾಧವ ಆಚಾರ್ಯ (46) ಮೃತ ಬೈಕ್‌ ಸವಾರ. ಖಾಸಗಿ ಬಸ್ಸಿನಲ್ಲಿ ಆಂಧ್ರಪ್ರದೇಶ ಮೂಲದ ಅಯ್ಯಪ್ಪ ಮಾಲಾಧಾರಿಗಳು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಬಸ್‌, ಕೊಕ್ಕಡದಿಂದ ಮೂಡುಬೈಲಿನ ತನ್ನ ಮನೆಗೆ ಹೋಗುತ್ತಿದ್ದ ಮಾಧವ ಆಚಾರ್ಯ ಅವರ ಬೈಕಿಗೆ ಕಾಪಿನಬಾಗಿಲು ಸಪ್ತಗಿರಿ ಕಾಂಪ್ಲೆಕ್ಸ್‌ ಸಮೀಪ ಮುಖಾಮುಖಿ ಢಿಕ್ಕಿ ಆಗಿದೆ.

ಕೊಕ್ಕಡ: ಖಾಸಗಿ ಬಸ್ ನಡಿಗೆ ಬಿದ್ದು ಬೈಕ್ ಸವಾರ ಸಾವು Read More »

ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಮಲಿಯಕ್ಕಲ್

ಸಮಗ್ರ ನ್ಯೂಸ್: ತೆಲುಗು ಬಿಗ್‌ಬಾಸ್‌ ಸೀಸನ್‌ 8ರ ವಿನ್ನರ್‌ ಆಗಿ‌ ನಿಖಿಲ್ ಮಲಿಯಕ್ಕಲ್ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ನಿಖಿಲ್ ಅವರನ್ನು ವಿನ್ನರ್‌ ಎಂದು ಘೋಷಿಸಲಾಗಿದೆ. ಶೋ ನಡೆಸಿಕೊಟ್ಟ ನಟ ಅಕ್ಕಿನೇನಿ ನಾಗಾರ್ಜುನ್‌ ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟ ರಾಮ್‌ ಚರಣ್‌ ಅವರ ಸಮ್ಮುಖದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ. ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಅವರು ಬಿಗ್‌ಬಾಸ್‌ ವಿಜೇತರನ್ನು ಘೋಷಿಸಿದರು. ಉಗುರು ಕಚ್ಚುವ ಸ್ಪರ್ಧೆಯಲ್ಲಿ ಸಹ ಫೈನಲಿಸ್ಟ್ ಗೌತಮ್ ಕೃಷ್ಣ ವಿರುದ್ಧ

ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಮಲಿಯಕ್ಕಲ್ Read More »

ಜಾಕೀರ್ ಹುಸೇನ್ ನಿಧನರಾಗಿಲ್ಲ| ಕುಟುಂಬಸ್ಥರಿಂದ ಸ್ಪಷ್ಟನೆ

ಸಮಗ್ರ ನ್ಯೂಸ್: ಗಂಭೀರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ನಿನ್ನೆ ನಿಧನರಾಗಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರನ್ನ ಸ್ಯಾನ್ ಅವರ ಸಹೋದರಿ ಖುರ್ಷಿದ್ ಔಲಿಯ ಸ್ಪಷ್ಟನೆ ನೀಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. ವಿಶ್ವಪ್ರಸಿದ್ಧ ತಬಲಾ ವಾದಕ ಝಾಕಿರ್ ಹುಸೈನ್ ರವಿವಾರ ನಿಧನರಾಗಿದ್ದಾರೆ ಎಂಬ ವರದಿ ಬೆನ್ನಲ್ಲೇ ಝಾಕಿರ್ ಅವರ ಸಹೋದರಿ ಖುರ್ಶಿದ್‌ ಔಲಿಯಾ ಸ್ಪಷ್ಟನೆ ನೀಡಿದ್ದು,

ಜಾಕೀರ್ ಹುಸೇನ್ ನಿಧನರಾಗಿಲ್ಲ| ಕುಟುಂಬಸ್ಥರಿಂದ ಸ್ಪಷ್ಟನೆ Read More »

ಪದ್ಮವಿಭೂಷಣ ಉಸ್ತಾದ್ ಜಾಕೀರ್ ಹುಸೇನ್ ಇನ್ನಿಲ್ಲ

ಸಮಗ್ರ ನ್ಯೂಸ್: ಖ್ಯಾತ ತಬಲಾ ವಾದಕ, ಪದ್ಮವಿಭೂಷಣ ಉಸ್ತಾದ್ ಜಾಕೀರ್ ಹುಸೇನ್ ಅವರು ವಿಧಿವಶರಾಗಿದ್ದಾರೆ.73 ವಯಸ್ಸಿನ ಜಾಕಿರ್ ಅವರನ್ನು ಇತ್ತಿಚಿಗಷ್ಟೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಧ್ಯ ಜಾಕೀರ್ ಹುಸೇನ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ, ಜಾಕೀರ್ ಹುಸೇನ್ ಅವರ ಹೆಸರನ್ನು ಸಂಗೀತ ಜಗತ್ತಿನಲ್ಲಿ ಗೌರವದಿಂದ ತೆಗೆದುಕೊಳ್ಳಲಾಗುತ್ತದೆ. 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ ಉಸ್ತಾದ್ ಜಾಕಿರ್ ಹುಸೇನ್

ಪದ್ಮವಿಭೂಷಣ ಉಸ್ತಾದ್ ಜಾಕೀರ್ ಹುಸೇನ್ ಇನ್ನಿಲ್ಲ Read More »

ಹವಾಮಾನ ವರದಿ| ವಾಯುಭಾರ ಕುಸಿತ; ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಒಂದು ಭಾಗದಲ್ಲಿ ಒಣ ಹವೆ ಜೊತೆಗೆ ತೀವ್ರ ಮಂಜು ಆವರಿಸಿದೆ. ನಿತ್ಯವು ಮೈಕೊರೆವ ಚಳಿ ಕಾಡುತ್ತಿದೆ. ಇತ್ತ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಮೇಲೆ ಹೊಸ ಹೊಸ ಹವಾಮಾನ ವೈಪರಿತ್ಯಗಳ ಪ್ರಭಾವ ಉಂಟಾಗುತ್ತಿದೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಧಾರಣದಿಂದ ವ್ಯಾಪಕ ಮಳೆ ಆರ್ಭಟಿಸುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಲಕ್ಷದ್ವೀಪ ಹಾಗೂ ಮಾಲ್ಡೀವ್ಸ್ ಭಾಗದ ಸಾಗದಲ್ಲಿ ಮತ್ತು ವಾಯುಭಾರ ಕುಸಿತುವಾಗಿರುವುದು ಕಂಡು

ಹವಾಮಾನ ವರದಿ| ವಾಯುಭಾರ ಕುಸಿತ; ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ‌ ಮುನ್ಸೂಚನೆ Read More »

ತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

ಸಮಗ್ರ ನ್ಯೂಸ್: ತೆಂಕು ತಿಟ್ಟು ಯಕ್ಷಗಾನದ ಯಕ್ಷಗಾನದ ಮೊದಲ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರು ಶನಿವಾರ(ಡಿ.14) ಸಂಜೆ ನಿಧನರಾದರು. ಅವರು ಪತಿ, ಖ್ಯಾತ ಹಿಮ್ಮೇಳ ವಾದಕ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಪುತ್ರ ಪತ್ರಕರ್ತ, ಹವ್ಯಾಸಿ ಕಲಾವಿದ ಅವಿನಾಶ ಬೈಪಾಡಿತ್ತಾಯ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಲೀಲಾವತಿ ಬೈಪಾಡಿತ್ತಾಯರು ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. ಸಾಮಾಜಿಕ ಪ್ರೋತ್ಸಾಹವಾಗಲೀ, ಮಾಧ್ಯಮಗಳ ಪ್ರಚಾರವಾಗಲೀ ಇಲ್ಲದ ಕಾಲದಲ್ಲೇ ಅವರು ಬೆಳೆದ ಬಗೆ ಅದ್ಭುತ. ಲೀಲಾವತಿ ಬೈಪಾಡಿತ್ತಾಯರ

ತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ Read More »

ಮಂಡ್ಯದಲ್ಲಿ ಘೋರ ದುರಂತ : ನೇಣು ಬಿಗಿದುಕೊಂಡು ಎಂಜಿನಿಯ‌ರ್ ಆತ್ಮಹತ್ಯೆ!

ಸಮಗ್ರ ನ್ಯೂಸ್ : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಪೋಲೀಸ್ ಠಾಣಾ ವ್ಯಾಪ್ತಿಯ ಕುರುಬರದೊಡ್ಡಿ ಗ್ರಾಮದಲ್ಲಿ ಜ್ಞಾನೇಷ್ (30) ಎಂಬ ಎಂಜಿನಿಯರ್ ಹೆಬ್ಬೆರಳು ಏತ ನೀರಾವರಿ ಬಳಿ ನೀರಿನ ಟ್ಯಾಂಕ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜ್ಞಾನೇಷ್ ಶಿಂಷಾ ಏತ ನೀರಾವರಿ ಯೋಜನೆಯ ಬಾಪೂಜಿ ಕನ್ಸೆಕ್ಷನ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ನಿವಾಸಿ ಎಂದು ತಿಳಿದು ಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ

ಮಂಡ್ಯದಲ್ಲಿ ಘೋರ ದುರಂತ : ನೇಣು ಬಿಗಿದುಕೊಂಡು ಎಂಜಿನಿಯ‌ರ್ ಆತ್ಮಹತ್ಯೆ! Read More »

ಮೊದಲ ಭಾಷಣದಲ್ಲೇ ಮೋದಿಗೆ ಚುಚ್ಚಿದ ಪ್ರಿಯಾಂಕ ವಾದ್ರಾ

ಸಮಗ್ರ ನ್ಯೂಸ್ : ಲೋಕಸಭೆ ಸಂಸದೆಯಾಗಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮೊದಲ ಭಾಷಣದಲ್ಲೇ ಮೋದಿ ಸರ್ಕಾರಕ್ಕೆ ಚುಚ್ಚಿದ್ದಾರೆ. ಇತ್ತೀಚೆಗೆ ವಯನಾಡಿನಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಿಯಾಂಕ ವಾದ್ರಾ ಇಂದು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಅವರಿಗೆ ಮೊದಲ ಬಾರಿಗೆ ಮಾತನಾಡುವ ಅವಕಾಶ ಸಿಕ್ಕಾಗ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ನಮ್ಮ ಸಂವಿಧಾನ ಎನ್ನುವುದು ಜನರ ರಕ್ಷಣೆಗಾಗಿ ಇದೆ. ಇದು ಜನರ ಏಕತೆ, ಸುರಕ್ಷತೆ ಮತ್ತು

ಮೊದಲ ಭಾಷಣದಲ್ಲೇ ಮೋದಿಗೆ ಚುಚ್ಚಿದ ಪ್ರಿಯಾಂಕ ವಾದ್ರಾ Read More »