December 2024

ಲಾರಿ ಪಲ್ಟಿ: ರಸ್ತೆ ಬದಿಯಲ್ಲಿ ನಿಂತಿದ್ದ ಮೂವರು ಪಿಡಬ್ಲ್ಯೂಡಿ ಅಧಿಕಾರಿಗಳು ಸಾವು

ಸಮಗ್ರ ನ್ಯೂಸ್ : ಲಾರಿಯೊಂದು ರಸ್ತೆ ಬದಿ ನಿಂತಿದ್ದ ಲೋಕೋಪಯೋಗಿ ಇಲಾಖೆಯ ಮೂವರು ಅಧಿಕಾರಿಗಳ ಮೇಲೆ ಪಲ್ಟಿಯಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಮಲ್ಲಿಕಾರ್ಜುನ (29), ಶಿವರಾಜು (28), ಮೆಹಬೂಬ್ (30) ಎಂದು ಗುರುತಿಸಲಾಗಿದೆ.ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್‌ಗಳಾಗಿದ್ದ ಮಲ್ಲಿಕಾರ್ಜುನ, ಶಿವರಾಜು ಮತ್ತು ಕಂಪ್ಯೂಟರ್ ಆಪರೇಟರ್ ಆಗಿದ್ದ ಮೆಹಬೂಬ್ ಕೆನಲ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಈ ವೇಳೆ ಮೂವರು ರಸ್ತೆ ಬದಿಯಲ್ಲಿ ಮಾತನಾಡುತ್ತ ನಿಂತಿದ್ದರು. ಅದೇ ಮಾರ್ಗವಾಗಿ ಬಂದ […]

ಲಾರಿ ಪಲ್ಟಿ: ರಸ್ತೆ ಬದಿಯಲ್ಲಿ ನಿಂತಿದ್ದ ಮೂವರು ಪಿಡಬ್ಲ್ಯೂಡಿ ಅಧಿಕಾರಿಗಳು ಸಾವು Read More »

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್

ಸಮಗ್ರ ನ್ಯೂಸ್ : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ತಿಂಗಳ ಬಳಿಕ ಇಂದು ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡ ಪವಿತ್ರಾ ಗೌಡ ಮನೆಗೆ ಪ್ರಯಾಣ ಬೆಳೆಸಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಪ್ರಕರಣದಲ್ಲಿ ಹನ್ನೆರಡನೇ ಆರೋಪಿಯಾಗಿ ಶಿವಮೊಗ್ಗ ಜೈಲಿನಲ್ಲಿರುವ ಲಕ್ಷ್ಮಣ್ ಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜೈಲಿನ ಹೊರಗೆ ನಿಂತಿದ್ದ ಕಾರಿಗೆ ಓಡೋಡಿ ಬಂದು ಬಂದು ಹತ್ತಿದ ಲಕ್ಷ್ಮಣ್ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್ Read More »

ಮಾಸ್ಕೋದಲ್ಲಿ ‘ಬಾಂಬ್’ ಸ್ಫೋಟ : ರಷ್ಯಾದ ಪರಮಾಣು ‘ರಕ್ಷಣಾ ಪಡೆ’ ಮುಖ್ಯಸ್ಥ ಸಾವು.!

ಸಮಗ್ರ ನ್ಯೂಸ್:ಎಲೆಕ್ನಿಕ್ ಸ್ಕೂಟರ್ ನಲ್ಲಿ , ಅಡಗಿಸಿಟ್ಟಿದ್ದ ಬಾಂಬ್ ನಿಂದಾಗಿ ರಷ್ಯಾ ಒಕ್ಕೂಟದ ಸಶಸ್ತ್ರ ಪಡೆಗಳ ವಿಕಿರಣ, ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಇಗೊರ್ ಕಿರಿಲೋವ್ ಮತ್ತು ಅವರ ಸಹಾಯಕ ಸಾವನ್ನಪ್ಪಿದ್ದಾರೆ” ಎಂದು ತನಿಖಾ ಸಮಿತಿ ತಿಳಿಸಿದೆ. ರಷ್ಯಾದ ಪರಮಾಣು, ಜೈವಿಕ ಮತ್ತು ರಾಸಾಯನಿಕ ಸಂರಕ್ಷಣಾ ಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಅವರು ಕ್ರೆಮ್ಮಿನ್ನ ಆನ್ನೇಯಕ್ಕೆ 7 ಕಿ.ಮೀ (4.35 ಮೈಲಿ) ದೂರದಲ್ಲಿ ರಸ್ತೆಯನ್ನು ಪ್ರಾರಂಭಿಸುವ ರಿಯಾಜಾನ್ಸಿ ಪ್ರೊಸ್ಪೆಕ್ಟ್‌ಲ್ಲಿರುವ ಅಪಾರ್ಟೆಂಟ್ ಕಟ್ಟಡದ

ಮಾಸ್ಕೋದಲ್ಲಿ ‘ಬಾಂಬ್’ ಸ್ಫೋಟ : ರಷ್ಯಾದ ಪರಮಾಣು ‘ರಕ್ಷಣಾ ಪಡೆ’ ಮುಖ್ಯಸ್ಥ ಸಾವು.! Read More »

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ

ಸಮಗ್ರ ನ್ಯೂಸ್: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಬಗ್ಗೆ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಪೊಲೀಸರು ಸ್ನೇಹಮಯಿ ಕೃಷ್ಣ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಡಿ. 17 ರಂದು ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಮುಡಾ ಹಗರಣದ ಪ್ರಮುಖ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿರುದ್ಧ ಕೆಲವೇ ದಿನಗಳ

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ Read More »

ಜೀವನಾಂಶ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಸಮಗ್ರ ನ್ಯೂಸ್ : ವಿವಾಹದ ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹವಾದ ಹಿನ್ನೆಲೆಯಲ್ಲಿ ಆಕೆಗೆ ನೀಡಲಾಗುತ್ತಿದ್ದ ಜೀವನಾಂಶ ರದ್ದುಗೊಳಿಸಿ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಎತ್ತಿ ಹಿಡಿದಿದೆ. ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್ ಮಂಗಳೂರಿನ ಅನಿತಾ ನಾಯಕ್ ಅವರನ್ನು 2018 ರಲ್ಲಿ ಮದುವೆಯಾಗಿದ್ದು, ಬಳಿಕ ದಾಂಪತ್ಯದಲ್ಲಿ ಸಮಸ್ಯೆ ತಲೆದೋರಿ ಡೈವೋರ್ಸ್ ಪಿಟಿಷನ್ ಸಲ್ಲಿಸಿದ್ದರು. ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಅನಿತಾ ಗೌಪ್ಯವಾಗಿ 2ನೇ ವಿವಾಹವಾಗಿದ್ದಾಳೆ

ಜೀವನಾಂಶ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ Read More »

ಜಾರ್ಜಿಯಾದಲ್ಲಿ ಭೀಕರ ಘಟನೆ: ರೆಸ್ಟೋರೆಂಟ್ ನಲ್ಲಿ 12 ಭಾರತೀಯರ ಶವ ಪತ್ತೆ

ಸಮಗ್ರ ನ್ಯೂಸ್ : ಜಾರ್ಜಿಯಾದ ಗುಡೌರಿ ಪರ್ವತದ ರೆಸಾರ್ಟ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ 12 ಭಾರತೀಯ ಪ್ರಜೆಗಳು ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಬನ್ ಮಾನಾಕ್ಸೆಡ್ ವಿಷಾನಿಲದಿಂದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸ್ಥಳೀಯ ಮಾಧ್ಯಮಗಳು, ಪೊಲೀಸರನ್ನು ಉಲ್ಲೇಖಿಸಿ, ಮೃತ ಎಲ್ಲರೂ ಕಾರ್ಬನ್ ಮಾನಾಕ್ಸೆಡ್ ವಿಷದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.ಮೃತ 12 ಮಂದಿ ಭಾರತೀಯ

ಜಾರ್ಜಿಯಾದಲ್ಲಿ ಭೀಕರ ಘಟನೆ: ರೆಸ್ಟೋರೆಂಟ್ ನಲ್ಲಿ 12 ಭಾರತೀಯರ ಶವ ಪತ್ತೆ Read More »

ನಿಮಗೆ ತಾಕತ್ ಇದ್ರೆ! ಮುಸ್ಲಿಂ ಸಮುದಾಯಕ್ಕೆ ಸವಾಲು ಹಾಕಿದ ಪುನೀತ್ ಕೆರೆಹಳ್ಳಿ!

ಸಮಗ್ರ ನ್ಯೂಸ್ : ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರೋ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಮತ್ತೆ ತಮ್ಮ ಭಾಷಣ ಮೂಲಕ ಸದ್ದು ಮಾಡ್ತಿದ್ದಾರೆ.ತಾಕತ್ ಇದ್ರೆ ಕುರಾನ್ ನನ್ನ ಕನ್ನಡಕ್ಕೆ ಅನುವಾದ ಮಾಡಿ. ಆಜಾನ್ ಕೂಗುವುದನ್ನ ಕನ್ನಡದಲ್ಲಿ ಕೂಗಿ ಎಂದು ಮುಸ್ಲಿಂ ಸಮುದಾಯಕ್ಕೆ ಸವಾಲು ಹಾಕಿದ್ದಾರೆ. ಸಂಸ್ಕೃತ ಈ ನೆಲದ ಭಾಷೆ. ಭಗವದ್ಗೀತೆಯನ್ನ ಕನ್ನಡದಲ್ಲಿ ತರ್ಜುಮೆ ಮಾಡಿ ಪ್ರಕಟಿಸುತ್ತೇವೆ. ಕನ್ನಡದಲ್ಲಿ ಶ್ಲೋಕ ಹೇಳಿ ಸಾರುತ್ತೇವೆ. ಆದ್ರೆ ನಿಮಗೆ ಕುರಾನ್ ನನ್ನ ಕನ್ನಡದಲ್ಲಿ ಪ್ರಕಟಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.ಸಂಸ್ಕೃತ

ನಿಮಗೆ ತಾಕತ್ ಇದ್ರೆ! ಮುಸ್ಲಿಂ ಸಮುದಾಯಕ್ಕೆ ಸವಾಲು ಹಾಕಿದ ಪುನೀತ್ ಕೆರೆಹಳ್ಳಿ! Read More »

ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ

ಸಮಗ್ರ ನ್ಯೂಸ್: ವಿವಾದಿತ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಡಿಸಿದ್ದಾರೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ, ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳನ್ನು ನಡೆಸುವ ಬಗ್ಗೆ ಪ್ರಸ್ತಾಪಿಸುತ್ತದೆ. ಮಸೂದೆ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಮೋದಿ ನೇತೃತ್ವದ ಕೇಂದ್ರ ಸಂಪುಟ ಕೆಲ ದಿನಗಳ ಹಿಂದೆಯಷ್ಟೇ ಅಂಗೀಕರಿಸಿತ್ತು. ಮಸೂದೆ ಮಂಡನೆ ಹಿನ್ನೆಲೆ ಸಂಸತ್ತಿನಲ್ಲಿ ಮಸೂದೆ ಮೇಲೆ ಚರ್ಚೆ

ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ Read More »

ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ಅಪರಾದ ಹೇಗಾಗುತ್ತದೆ? ಕಡಬದ ಪ್ರಕರಣ ಕುರಿತು ರಾಜ್ಯ ಪೊಲೀಸರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ಸಮಗ್ರ ನ್ಯೂಸ್: ಮಸೀದಿಯೊಳಗೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ಈ ಕುರಿತು ಕರ್ನಾಟಕ ಪೊಲೀಸರ ನಿಲುವನ್ನು ಕೇಳಿದೆ. ಮಸೀದಿ ಆವರಣದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಕ್ಕಾಗಿ ಇಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೀದಿಯೊಳಗೆ ‘ಜೈ ಶ್ರೀರಾಮ್’ ಎಂದು ಕೂಗುವುದು ಹೇಗೆ ಅಪರಾಧವಾಗುತ್ತದೆ? ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್

ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ಅಪರಾದ ಹೇಗಾಗುತ್ತದೆ? ಕಡಬದ ಪ್ರಕರಣ ಕುರಿತು ರಾಜ್ಯ ಪೊಲೀಸರಿಗೆ ಸುಪ್ರೀಂಕೋರ್ಟ್ ಪ್ರಶ್ನೆ Read More »

ಹವಾಮಾನ ವರದಿ| ಚಳಿ‌ ಜೊತೆ ಡಿ.18ರಿಂದ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೈ ಕೊರೆವ ಚಳಿ ಆರಂಭವಾಗಿದೆ. ಮನೆಯಿಂದ ಹೊರಬರಲಾಗದಷ್ಟು ಚಳಿ ಆರಂಭವಾಗಿದ್ದು, ಇದರ ನಡುವೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗುವ ಸಾಧ್ಯತೆ ಇದ್ದು, ಡಿಸೆಂಬರ್ 18 ರಿಂದ ಮಳೆಯಾಗುವ ಲಕ್ಷಣಗಳಿವೆ. ಒಂದು ವೇಳೆ ಮತ್ತೆ ಮಳೆಯಾದರೆ ಚಳಿ ಪ್ರಮಾಣ ಕಡಿಮೆಯಾಗಲಿದೆ. ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಗದಗ, ಹಾವೇರಿ, ಧರವಾಡ, ಕೊಪ್ಪಳ, ರಾಯಚೂರು, ಬೆಂಗಳೂರು ನಗರ, ಬೆಂಗಳೂರು

ಹವಾಮಾನ ವರದಿ| ಚಳಿ‌ ಜೊತೆ ಡಿ.18ರಿಂದ ಮಳೆ‌ ಮುನ್ಸೂಚನೆ Read More »