December 2024

ನಿವೃತ್ತ ನೌಕರನ ಮನೆಗೆ ಬೆಂಕಿ; ಅಗ್ನಿ ನಂದಿಸಲು ಸ್ಥಳಕ್ಕೆ ಬಂದ ಅಗ್ನಿಶಾಮಕದಳಕ್ಕೆ ಕಾದಿತ್ತು ಬಿಗ್ ಶಾಕ್!

ಸಮಗ್ರ ನ್ಯೂಸ್ : ಗ್ವಾಲಿಯರ್ ನಗರದಲ್ಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರು, ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಮನೆ ಡೋರ್ ಮುರಿದು ಬೆಂಕಿ ನಂದಿಸಲು ಮುಂದಾದವರಿಗೆ ಶಾಕ ಕಾದಿತ್ತು.ಗ್ವಾಲಿಯರ್‌ನ ಶಿಂಧೆ ಕಿ ಕಂಟೋನ್ಮಂಟ್‌ನಲ್ಲಿರುವ ಕಾರ್ನಾಕ್ ಆಸ್ಪತ್ರೆ ಬಳಿ ಇರುವ ಕೇದಾ‌ರ್ ರಜಪೂತ್ ಎಂಬ ನಿವೃತ್ತ ಸರ್ಕಾರಿ ನೌಕರನ ಮನೆ ಇದ್ದು, ಮೊನ್ನೆ ಮನೆಯಲ್ಲಿ ಬೆಳಂಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಜನರು ಸಹ ನೆರವು ನೀಡಿದ್ದರು. ಆದರೆ […]

ನಿವೃತ್ತ ನೌಕರನ ಮನೆಗೆ ಬೆಂಕಿ; ಅಗ್ನಿ ನಂದಿಸಲು ಸ್ಥಳಕ್ಕೆ ಬಂದ ಅಗ್ನಿಶಾಮಕದಳಕ್ಕೆ ಕಾದಿತ್ತು ಬಿಗ್ ಶಾಕ್! Read More »

ಹಾವೇರಿಯಲ್ಲಿ ಬಾಲಕನ ಅಪಹರಣ ಯತ್ನ; ಸಮಯಪ್ರಜ್ಞೆ ಬಾಲಕ ಬಚಾವ್‌!

ಸಮಗ್ರ ನ್ಯೂಸ್: ಆಟವಾಡುತ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ಹಾವೇರಿ ನಗರದ ಪುರದ ಓಣಿಯಲ್ಲಿ ಡಿ.1ರಂದು ನಡೆದಿದ್ದು, ಅದೃಷ್ಟವಶಾತ್ ಬಾಲಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಮೊಹ್ಮದ್ ಅಯಾನ್(12) ಅಪಹರಣಕ್ಕೊಳಗಾಗಿದ್ದ ಬಾಲಕ.ಹಾವೇರಿ ನಗರದ ಪುರದ ಓಣಿ ನಿವಾಸಿ ಮೊಹಮ್ಮದ್ ಅಯಾನ್ ಇಂದು ಸಂಜೆ ಸುಮಾರು 7 ಗಂಟೆಗೆ ಎಂದಿನಂತೆ ಹೊರಗಡೆ ಬಂದಿದ್ದ.ಈ ವೇಳೆ ಮಾರುತಿ ಇಕೋ ವ್ಯಾನ್ ನಲ್ಲಿ ಮಾಸ್ಕ್ ಧರಿಸಿದ್ದ ಅಪಹರಿಸಲು ಬಂದ ನಾಲ್ವರು ಆಗುಂತಕರು. ಬಾಲಕನ್ನು ಹಿಡಿದು ವ್ಯಾನ್‌ಗೆ ತಳ್ಳಿದ್ದಾರೆ. ಪುರದ ಓಣಿಯಿಂದ

ಹಾವೇರಿಯಲ್ಲಿ ಬಾಲಕನ ಅಪಹರಣ ಯತ್ನ; ಸಮಯಪ್ರಜ್ಞೆ ಬಾಲಕ ಬಚಾವ್‌! Read More »

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ| ಕೊಲೆ ಶಂಕೆ; ದೂರು ದಾಖಲು

ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್‌ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ . ಈ ಬಗ್ಗೆ ವಿನಯ ಅವರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್‌ನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ. ಸಂದೀಪ್‌ ಆ ದಿನ ಮನೆಗೆ ಬಾರದೇ ಇದ್ದಾಗ

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ| ಕೊಲೆ ಶಂಕೆ; ದೂರು ದಾಖಲು Read More »

ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ನವೀನ್ ನಾರಾಯಣ್ ಬೆಳಗಾವ್ಕರ್ (13) ಎನ್ನುವ ಬಾಲಕ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾರಾಯಣ್ ಬೆಳಗಾಂವ್ಕರ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಬಲೂನ್ ಊದುವಾಗ ಒಮ್ಮೆಲೇ ಗಂಟಲಲ್ಲಿ ಸಿಲುಕಿ ದುರಂತ ಸಂಭವಿಸಿದೆ. ಉಸಿರು ತೆಗೆದುಕೊತ್ತಿರುವಾಗಲೇ ಗಂಟಲಲ್ಲಿ ಬಲೂನ್ ಸಿಲುಕಿದೆ. ಉಸಿರುಗಟ್ಟಿ ನಾರಾಯಣ್

ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವು Read More »

ಹಾಸನ: ಭೀಕರ ಅಪಘಾತಕ್ಕೆ ನೂತನ ಐಪಿಎಸ್ ಅಧಿಕಾರಿ ಬಲಿ| ಕರ್ತವ್ಯಕ್ಕೆ ವರದಿ ಮಾಡಲು ಬಂದ ಮೊದಲ ದಿನವೇ ನಡೆಯಿತು ದುರಂತ

ಸಮಗ್ರ ನ್ಯೂಸ್: ಡ್ಯೂಟಿ ರಿಪೋರ್ಟ್​ ಮಾಡಲು ಬಂದ ದಿನವೇ ಐಪಿಎಸ್​ ಅಧಿಕಾರಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ಮೃತರನ್ನು ಹರ್ಷಭರ್ದನ್​ (27) ಎಂದು ಗುರುತಿಸಲಾಗಿದ್ದು, ಇವರು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಹಾಸನನದ ಕಿತ್ತಾನೆ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರ್ಷಭರ್ದನ್ (IPS Officer)​ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೈಸೂರಿನ ಪೊಲೀಸ್ ಅಕಾಡಮೆಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದ್ದು, ಐಪಿಎಸ್​ ವೃತ್ತಿಜೀವನ

ಹಾಸನ: ಭೀಕರ ಅಪಘಾತಕ್ಕೆ ನೂತನ ಐಪಿಎಸ್ ಅಧಿಕಾರಿ ಬಲಿ| ಕರ್ತವ್ಯಕ್ಕೆ ವರದಿ ಮಾಡಲು ಬಂದ ಮೊದಲ ದಿನವೇ ನಡೆಯಿತು ದುರಂತ Read More »

ಭಾರೀ ಮಳೆ ಹಿನ್ನೆಲೆ| ರಾಜ್ಯದ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಮೇಲೂ ಉಂಟಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಶೀತ ಗಾಳಿ ವಾತಾವರಣ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಜಡಿ ಮಳೆ, ವಿಪರೀತ ಚಳಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಆಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ. ಸೋಮವಾರದ ರಜೆಯನ್ನು ಮತ್ತೊಂದು

ಭಾರೀ ಮಳೆ ಹಿನ್ನೆಲೆ| ರಾಜ್ಯದ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಿಸಿದ ಸರ್ಕಾರ!

ಸಮಗ್ರ ನ್ಯೂಸ್: ಹೆಚ್ಎಸ್ಆರ್ ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಕರ್ನಾಟಕ ಸರ್ಕಾರ ಇದೀಗ ಮತ್ತೆ ಗಡುವು ವಿಸ್ತರಣೆ ಮಾಡಿದೆ. ಹೌದು.. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ‌ಸರ್ಕಾರ ನಾಲ್ಕು ಬಾರಿ ಬಾರಿ ಗಡುವು ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಡಿಸೆಂಬರ್ 31ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಿಸಿದೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 30 ಕೊನೆ ದಿನಾಂಕವಾಗಿತ್ತು. ಆದರೆ ಇದೀಗ ಡಿಸೆಂಬರ್ 31 ರವರೆಗೆ ಗಡುವು ನೀಡಿದೆ. ರಾಜ್ಯ

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಿಸಿದ ಸರ್ಕಾರ! Read More »

‘ಬ್ರಹ್ಮಗಂಟು’ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ

ಸಮಗ್ರ ನ್ಯೂಸ್: ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕನ್ನಡ ಕಿರುತೆರೆಯ ಖ್ಯಾತ ನಟಿಯಾಗಿದ್ದ ಶೋಭಿತಾ, ಬ್ರಹ್ಮಗಂಟು ಧಾರವಾಹಿಯಿಂದ ಜನಪ್ರಿಯತೆ ಪಡೆದಿದ್ದರು. ಮದುವೆ ಬಳಿಕ ಹೈದರಾಬಾದ್ ನಲ್ಲಿ ವಾಸವಾಗಿದ್ದ ಶೋಭಿತಾ, ಇದೀಗ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಡರಾತ್ರಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ನಟಿಯ ದುಡುಕಿನ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿರುವ ಪೋಷಕರು ಹೈದರಾಬಾದ್ ಗೆ ದೌಡಾಯಿಸಿದ್ದಾರೆ. ಹಿಟ್ಲರ್ ಕಲ್ಯಾಣ, ನಿನ್ನಿಂದಲೇ ಸೇರಿದಂತೆ

‘ಬ್ರಹ್ಮಗಂಟು’ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ Read More »