December 2024

ಬಿಜೆಪಿ ನಾಯಕ ಅಣ್ಣಾಮಲೈ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್ : 1998ರ ಫೆಬ್ರವರಿಯಲ್ಲಿ ಕೊಯಮತ್ತೂರಿನಲ್ಲಿ ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ, ನಿಷೇಧಿತ ಅಲ್ ಉಮ್ಮಾ ಸಂಘಟನೆಯ ಮುಖ್ಯಸ್ಥ ಎಸ್.ಎ.ಬಾಷಾ ಅಂತ್ಯಕ್ರಿಯೆಗೆ ಪೊಲೀಸರು ಅನುಮತಿ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಕೊಯಮತ್ತೂರು ಗಾಂಧಿಪುರಂ ಬಸ್ ನಿಲ್ದಾಣದ ಬಳಿ ಬಿಜೆಪಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಣ್ಣಾಮಲೈ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.1998ರ ಫೆಬ್ರವರಿಯಲ್ಲಿ ಕೊಯಮತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಎಸ್.ಎ.ಬಾಷಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 30 ವರ್ಷಗಳ ಕಾಲ ಜೈಲುವಾಸ […]

ಬಿಜೆಪಿ ನಾಯಕ ಅಣ್ಣಾಮಲೈ ಪೊಲೀಸ್ ವಶಕ್ಕೆ Read More »

‘ಇದನ್ನು ಒಪ್ಪಲಾಗದು’: ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ- ಮೋಹನ್ ಭಾಗವತ್

ಸಮಗ್ರ ನ್ಯೂಸ್ : ಇತ್ತೀಚಿನ ದಿನಗಳಲ್ಲಿ, ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವಂತೆ ಅತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹತ್ವದ ಹೇಳಿಕೆ ನೀಡಿದ್ದು ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ.ಈ ಹೊಸ ವಿವಾದಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ವಾಸ್ತವವಾಗಿ, ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಂತರ್ಗತ ಸಮಾಜವನ್ನು ಪ್ರತಿಪಾದಿಸಿದರು. ದೇಶ ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದರು. ರಾಮಕೃಷ್ಣ

‘ಇದನ್ನು ಒಪ್ಪಲಾಗದು’: ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ- ಮೋಹನ್ ಭಾಗವತ್ Read More »

ಮಾಜಿ ಕ್ರಿಕಿಟಿಗ ಬಂಧನಕ್ಕೆ ಅರೆಸ್ಟ್ ವಾರಂಟ್ ಜಾರಿ

ಸಮಗ್ರ ನ್ಯೂಸ್: ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ವಾರೆಂಟ್ ಜಾರಿ ಮಾಡಲಾಗಿದೆ. ರಾಬಿನ್ ಉತ್ತಪ್ಪ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಫಿಎಫ್ ಹಣ ಪಾವತಿಸದೇ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಬಿನ್ ಉತ್ತಪ್ಪ ಒಡೆತನದ ಕಂಪೆನಿಯು ಸಂಬಳದಲ್ಲಿ ಪಿಎಫ್ ಹಣ

ಮಾಜಿ ಕ್ರಿಕಿಟಿಗ ಬಂಧನಕ್ಕೆ ಅರೆಸ್ಟ್ ವಾರಂಟ್ ಜಾರಿ Read More »

ಬಂಧಿತ ಸಿ.ಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ

ಸಮಗ್ರ ನ್ಯೂಸ್: ಬೆಳಗಾವಿ ಪೋಲೀಸರ ವಶದಲ್ಲಿದ್ದ ಮಾಜಿ ಸಚಿವ ಎಂಎಲ್ಸಿ ಸಿ.ಟಿ. ರವಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತು ಬದ್ದ ಬಿಡುಗಡೆಗೆ ಮಧ್ಯಂತರ ಆದೇಶ ನೀಡಿದೆ. ಆರೋಪಿ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇನ್ನೊಂದು ಕಡೆ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಹ

ಬಂಧಿತ ಸಿ.ಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ Read More »

ಗಂಡ ಸೇರಿ 51 ಪುರುಷರಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆ! ಕೊನೆಗೂ ಎಲ್ಲರಿಗೂ ಶಿಕ್ಷೆ ವಿಧಿಸಿದ ಕೋರ್ಟ್

ಸಮಗ್ರ ನ್ಯೂಸ್ : ಗಂಡ ಸೇರಿದಂತೆ 51 ಪುರುಷರಿಂದ ಕಳೆದ ಒಂದು ದಶಕದಿಂದ ನಿರಂತರವಾಗಿ ಅತ್ಯಾಚಾರಕ್ಕೆ ಒಳಾಗಿದ್ದ ಮಹಿಳೆಗೆ ಕೊನೆಗೂ ನ್ಯಾಯ ದೊರಕಿದ್ದು, ಮಾಜಿ ಪತಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ಇತರರಿಗೆ ಕಾರಗೃಹ ಶಿಕ್ಷೆ ನೀಡಿ ಡಿ.19 ರಂದು ಕೋರ್ಟ್ ಆದೇಶಿಸಿದೆ.ಹೌದು, ಈ ಘಟನೆ ನಡೆದಿರುವುದು ದೂರದ ಪ್ರಾನ್ಸ್‌ನಲ್ಲಿ. ಜಿಸೆಲ್ ಪೆಲಿಕಾಟ್ (73) ಅತ್ಯಾಚಾರಕ್ಕೆ ಒಳಾಗಿದ್ದ ಮಹಿಳೆ. ಇವರ ಮಾಜಿ ಪತಿ ಡೊಮಿನಿಕ್ ಪೆಲಿಕಾಟ್ ಶಿಕ್ಷೆಗರ ಒಳಗಾದ ವ್ಯಕ್ತಿ. ಜಿಸೆಲ್ ಪೆಲಿಕಾಟ್ ಸುಮಾರು ಒಂದು

ಗಂಡ ಸೇರಿ 51 ಪುರುಷರಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆ! ಕೊನೆಗೂ ಎಲ್ಲರಿಗೂ ಶಿಕ್ಷೆ ವಿಧಿಸಿದ ಕೋರ್ಟ್ Read More »

ಬಸ್ ಒಳಗೆ ಲೈಂಗಿಕ ಕಿರುಕುಳ ಆರೋಪ:ವ್ಯಕ್ತಿಗೆ 25 ಬಾರಿ ಕಪಾಳ ಮೋಕ್ಷ ಮಾಡಿದ ಮಹಿಳೆ

ಸಮಗ್ರ ನ್ಯೂಸ್ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಕನಿಷ್ಠ 25 ಬಾರಿ ಕಪಾಳಮೋಕ್ಷ ಮಾಡಿದ ಘಟನೆ ಪುಣೆಯಲ್ಲಿ ಇಂದು ನಡೆದಿದೆ ವರದಿಗಳ ಪ್ರಕಾರ, ಶಿರಡಿಯ ಕ್ರೀಡಾ ಶಿಕ್ಷಕಿ ಪ್ರಿಯಾ ಲಸ್ಪರೆ ತನ್ನ ಪತಿ ಮತ್ತು ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು.ಪ್ರಯಾಣದ ಸಮಯದಲ್ಲಿ, ಭಾರಿ ಅಮಲಿನಲ್ಲಿದ್ದ ವ್ಯಕ್ತಿ ಅವಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದನು ಎಂದು ಆರೋಪಿಸಲಾಗಿದೆ. ಅಂತಹ ನಡವಳಿಕೆಯನ್ನು ಸಹಿಸಲು ನಿರಾಕರಿಸಿದ ಪ್ರಿಯಾ, ಆ ವ್ಯಕ್ತಿಯ ಕಾಲರ್ ಅನ್ನು ಹಿಡಿದು ಆಕ್ರಮಣಕಾರಿಯಾಗಿ ಎದುರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡರು.ನಂತರ

ಬಸ್ ಒಳಗೆ ಲೈಂಗಿಕ ಕಿರುಕುಳ ಆರೋಪ:ವ್ಯಕ್ತಿಗೆ 25 ಬಾರಿ ಕಪಾಳ ಮೋಕ್ಷ ಮಾಡಿದ ಮಹಿಳೆ Read More »

ಜನರಲ್ ಬಿಪಿನ್ ರಾವತ್ ಸಾವಿನ ರಹಸ್ಯ ಬಯಲು; ಹೆಲಿಕಾಪ್ಟರ್ ದುರಂತಕ್ಕೆ ಕಾರಣವಾಯ್ತಾ ಆ ಒಂದು ಸಂಗತಿ?

ಸಮಗ್ರ ನ್ಯೂಸ್ : ದೇಶದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಅವರು ಮೃತಪಟ್ಟು ಮೂರು ವರ್ಷಗಳು ಕಳೆದಿದೆ. 2021ರ ಡಿ.8 ರಂದು ಹೆಲಿಕಾಪ್ಟರ್ ಪತನಗೊಂಡು ಅವರ ಪತ್ನಿ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದರು.ನಂತರ ಅಪಘಾತದ ಹಿಂದಿನ ಕಾರಣವನ್ನು ತನಿಖೆ ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು. ಇದೀಗ ಸಮಿತಿಯ ವರದಿ ಬಂದಿದ್ದು, ಅಪಘಾತದ ಹಿಂದಿನ ಕಾರಣ “ಮಾನವ ದೋಷ” ಎಂದು ಹೇಳಿದೆ.ಹವಾಮಾನದಲ್ಲಿ ಏರುಪೇರಾದ್ದರಿಂದ ಪೈಲಟ್‌ನ ದಿಗ್ಧಮೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು 2022ರಲ್ಲಿ ಭಾರತೀಯ ವಾಯುಪಡೆ ಹೇಳಿತ್ತು.

ಜನರಲ್ ಬಿಪಿನ್ ರಾವತ್ ಸಾವಿನ ರಹಸ್ಯ ಬಯಲು; ಹೆಲಿಕಾಪ್ಟರ್ ದುರಂತಕ್ಕೆ ಕಾರಣವಾಯ್ತಾ ಆ ಒಂದು ಸಂಗತಿ? Read More »

ಮಾರುವೇಷದಲ್ಲಿ ಬಂದ ಅಧಿಕಾರಿಗಳಿಗೆ ಸ್ಥಳೀಯರಿಂದ ಹಲ್ಲೆ

ಸಮಗ್ರ ನ್ಯೂಸ್: ತಿಮಿಂಗಿಲದ ವಾಂತಿ ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳ ತಂಡವೊಂದು ಡಿ. 18 ರಂದು ಕೋಡಿ ಕಡಲ ತೀರದ ಸಮೀಪದ ಎಂಕೋಡಿಯ ಸೌಹಾರ್ದ ಭವನಕ್ಕೆ ಮಾರುವೇಷದಲ್ಲಿ ಬಂದು ದಾಳಿ ನಡೆಸಿದೆ. ಇವರನ್ನು ನಕಲಿ ಅಧಿಕಾರಿಗಳೆಂದು ಭಾವಿಸಿದ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನದ ಸುಮಾರಿಗೆ ಅರಣ್ಯ ಸಂಚಾರಿ ದಳದವರು 3 ಕಾರಿನಲ್ಲಿ ಕಾರ್ಯಾಚರಣೆ ನಡೆಸಲು ಬಂದಿದ್ದರು. ಈ ವೇಳೆ ನಾಲ್ವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ಇವರು ಮಾರುವೇಷದಲ್ಲಿ ಇದ್ದುದರಿಂದ

ಮಾರುವೇಷದಲ್ಲಿ ಬಂದ ಅಧಿಕಾರಿಗಳಿಗೆ ಸ್ಥಳೀಯರಿಂದ ಹಲ್ಲೆ Read More »

ಶಾಕಿಂಗ್ ನ್ಯೂಸ್ ಕೊಟ್ಟ ಗಗನಯಾತ್ರಿ ಸುನಿತಾ ವಿಲಿಯಮ್ಸ್.!

ಸಮಗ್ರ ನ್ಯೂಸ್: అంತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಬಾಹ್ಯಾಕಾಶ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ & ಬುಚ್ ವಿಲೋರ್ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ. ಸುನಿತಾ ವಿಲಿಯಮ್ಸ್ & ಬುಚ್ ವಿಲ್ನೋರ್ ಫೆಬ್ರವರಿಯಲ್ಲಿ ಹಿಂತಿರುಗುವುದಿಲ್ಲ ಅಂತ ನಾಸಾ ತಿಳಿಸಿದೆ.ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್ಎಸ್) ಹಿಂದಿರುಗುವುದು ತಡವಾಗಲಿದೆ. ಅಲ್ಲಿ ಇಬ್ಬರು ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ ಅಂತ ನಾಸಾ ಮಾಹಿತಿ ನೀಡಿದೆ. ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್‌ ಗಗನನೌಕೆಯಲ್ಲಿ ಸುನಿತಾ, ಬುಚ್ ಇಬ್ಬರೂ ಜೂನ್ 5ರಂದು ಬಾಹ್ಯಾಕಾಶ

ಶಾಕಿಂಗ್ ನ್ಯೂಸ್ ಕೊಟ್ಟ ಗಗನಯಾತ್ರಿ ಸುನಿತಾ ವಿಲಿಯಮ್ಸ್.! Read More »

ಪ್ರವೀಣ್ ‌ನೆಟ್ಟಾರು ಕೊಲೆ ಪ್ರಕರಣ| ವಿದೇಶದಲ್ಲಿ ತಲೆಮರೆಸಿಕೊಂಡಿದ್ದ 6ನೇ ಆರೋಪಿ ಬಂಧನ

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 6ನೇ ಆರೋಪಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್ (55) ಎಂಬಾತನನ್ನು ಎನ್ಐಎ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಶರೀಫ್ ನನ್ನು ನವದೆಹಲಿ ವಿಮಾನದಲ್ಲಿ ಎನ್.ಐ.ಎ ಅಧಿಕಾರಿಗಳು ಬಂಧಿಸಿದ್ದಾರೆ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ಎನ್.ಐ.ಎ ತಂಡ ಬಂಧಿಸಿದೆ. ಈತನ ಪತ್ತೆಗಾಗಿ ಎನ್.ಐ.ಎ ಅಧಿಕಾರಿಗಳು 5 ಲಕ್ಷ ರಿವಾರ್ಡ್ ಘೋಷಿಸಿದ್ದರು. ಶರೀಫ್ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್.ಐ.ಎ ಅಧಿಕಾರಿಗಳು ಶರೀಫ್

ಪ್ರವೀಣ್ ‌ನೆಟ್ಟಾರು ಕೊಲೆ ಪ್ರಕರಣ| ವಿದೇಶದಲ್ಲಿ ತಲೆಮರೆಸಿಕೊಂಡಿದ್ದ 6ನೇ ಆರೋಪಿ ಬಂಧನ Read More »