December 2024

ಚಿತ್ರದುರ್ಗ | ಎತ್ತಿನಗಾಡಿಗಳಿಗೆ ಟಿಪ್ಪರ್ ಲಾರಿ ಡಿಕ್ಕಿ: ಚಾಲಕ, 4 ಎತ್ತು ಸಾವು

ಸಮಗ್ರ ನ್ಯೂಸ್: ಮೊಳಕಾಲ್ಮುರು ತಾಲ್ಲೂಕು ಭೈರಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 150ಎ ಯಲ್ಲಿ ಸಾಲಾಗಿ ಬರುತ್ತಿದ್ದ 3 ಎತ್ತಿನ ಗಾಡಿಗಳಿಗೆ ಗುರುವಾರ ಬೆಳಿಗ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ 4 ಎತ್ತುಗಳು ಕೂಡ ಮೃತಪಟ್ಟಿವೆ. ಅದೃಷ್ಟವಶಾತ್ ಎತ್ತಿನ ಗಾಡಿಗಳಲ್ಲಿದ್ದ ರೈತರು ಪಾರಾಗಿದ್ದಾರೆ. ಮೃತಚಾಲಕನ ಗುರುತು ಪತ್ತೆಯಾಗಿಲ್ಲ. ಭೈರಾಪುರ ಗ್ರಾಮದ ರೈತರು ಬೆಳಿಗ್ಗೆ ತಮ್ಮ ಜಮೀನುಗಳಿಗೆ ಹೊರಟಿದ್ದರು. ಟಿಪ್ಪರ್ ಲಾರಿ ಚಳ್ಳಕೆರೆಯಿಂದ ಬಳ್ಳಾರಿ ಕಡೆಗೆ ತೆರಳುತ್ತಿತ್ತು. ಬೆಳಿಗ್ಗೆ ದಟ್ಟ […]

ಚಿತ್ರದುರ್ಗ | ಎತ್ತಿನಗಾಡಿಗಳಿಗೆ ಟಿಪ್ಪರ್ ಲಾರಿ ಡಿಕ್ಕಿ: ಚಾಲಕ, 4 ಎತ್ತು ಸಾವು Read More »

ನಾಗನ ಸನ್ನಿಧಿಗೆ ನುಗ್ಗಿ ದಾಂಧಲೆ ನಡೆಸಿದ ಮುಸ್ಲಿಂ ಯುವಕ

ಸಮಗ್ರ ನ್ಯೂಸ್: ಯುವಕನೋರ್ವ ನಾಗನ ಕಟ್ಟೆಗೆ ಹಾನಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಡಿ.5ರಂದು ನಡೆದಿದೆ. ಮಹಮ್ಮದ್ ಸಲಾಂ ಎನ್ನುವಾತ ನಿನ್ನೆ (ಡಿಸೆಂಬರ್ 04) ರಾತ್ರಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ನಾಗನಕಟ್ಟೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ. ಬಳಿಕ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಮ್ಮದ್ ಸಲಾಂ ಈ ರೀತಿ ಮಾಡುವುದು ಮೊದಲಲ್ಲ. ಇಂಥಹ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ, ಸದ್ಯ

ನಾಗನ ಸನ್ನಿಧಿಗೆ ನುಗ್ಗಿ ದಾಂಧಲೆ ನಡೆಸಿದ ಮುಸ್ಲಿಂ ಯುವಕ Read More »

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಬಳಿ ಸಹಾಯಹಸ್ತ‌ ಚಾಚಿದ ಬಿಜೆಪಿ ‌ಕಟ್ಟಾಳು| ಅಷ್ಟಕ್ಕೂ ಆ‌ ವೃದ್ಧೆಗೆ ಆಗಿದ್ದೇನು? ಸಂಘಪರಿವಾರದಲ್ಲಿ ‘ಸಕ್ಕರೆ ಇದ್ದಾಗ ಮಾತ್ರ ಇರುವೆ ಸೇರುವುದೇ?’

ಸಮಗ್ರ ನ್ಯೂಸ್: ಜನಸಂಘದಲ್ಲಿ ಕೆಲಸ ಮಾಡಿ, ಆ ಬಳಿಕ ಹಿಂದೂ ಸಂಘಟನೆ ಹಾಗೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ ವೃದ್ದ ಮಹಿಳೆಯೋರ್ವರು ತಾನು ಬೀದಿಗೆ ಬಿದ್ದಿದ್ದೇನೆ ನನಗೆ ಯಾರೂ ಇಲ್ಲ, ಆಶ್ರಮದಲ್ಲಿ ಪಿಜಿಯಲ್ಲಿದ್ದೇನೆ, ನನಗೆ ಏನಾದರೂ ಸಹಾಯ ಮಾಡಿ, ಎಂದು ಪುತ್ತೂರು ನಿವಾಸಿ ಭಾರತಿ ಪಿ ಎಸ್ ಕಾಮತ್‌ರವರು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದಾರೆ. ಭಾರತಿ ಪಿ ಎಸ್ ರವರು ತನ್ನ ಸಹೋದರ ಪ್ರತಾಪ್ ಎಂಬವರ ಜೊತೆ ಸೇರಿ ಹಿಂದೂ ಸಂಘಟನೆಗಳಲ್ಲಿ ಕೆಲಸ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಬಳಿ ಸಹಾಯಹಸ್ತ‌ ಚಾಚಿದ ಬಿಜೆಪಿ ‌ಕಟ್ಟಾಳು| ಅಷ್ಟಕ್ಕೂ ಆ‌ ವೃದ್ಧೆಗೆ ಆಗಿದ್ದೇನು? ಸಂಘಪರಿವಾರದಲ್ಲಿ ‘ಸಕ್ಕರೆ ಇದ್ದಾಗ ಮಾತ್ರ ಇರುವೆ ಸೇರುವುದೇ?’ Read More »

ಪದಗ್ರಹಣದ ಬೆನ್ನಲ್ಲೇ ದೊಡ್ಡ ನಿರ್ಧಾರ ತೆಗೆದುಕೊಂಡ ಫಡ್ನವಿಸ್ ಸರ್ಕಾರ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫಡ್ನವಿಸ್, ‘ಲಾಡ್ಲಿ ಬೆಹನಾ ಯೋಜನೆ’ಯನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ.ರಾಜ್ಯದ ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿ ಇದರ ಮೊತ್ತವನ್ನು 1500 ರೂ. ನಿಂದ 2100 ರೂ.ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಮಹಾರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಅಲ್ಲದೇ ಇನ್ನು ಮುಂದೆ ಕೂಡ ಮಹಾರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಮಹಾರಾಷ್ಟ್ರದ ಒಳಿತಿಗಾಗಿ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾವು ನಮ್ಮ

ಪದಗ್ರಹಣದ ಬೆನ್ನಲ್ಲೇ ದೊಡ್ಡ ನಿರ್ಧಾರ ತೆಗೆದುಕೊಂಡ ಫಡ್ನವಿಸ್ ಸರ್ಕಾರ Read More »

ರಾಜ್ಯದ ಜನತೆಗೆ ಬಿಲ್ ಶಾಕ್ ನೀಡಲು ಸಿದ್ದತೆ ಮಾಡಿಕೊಂಡ ಎಸ್ಕಾಂ| ಕೆಇಆರ್ ಸಿ‌‌ ಗೆ ದರ ಏರಿಕೆ ಮಾಡಲು ಪ್ರಸ್ತಾಪ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಬೆಲೆ ಏರಿಕೆಗೆ ತತ್ತರಿಸಿರುವ ಜನ ಸಾಮಾನ್ಯರಿಗೆ ಈಗ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಲು ಎಸ್ಕಾಂಗಳು ಮುಂದಾಗಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ವಿದ್ಯುತ್ ದರ ಏರಿಕೆ ಮಾಡಲು ಒಪ್ಪಿಗೆ ಸೂಚಿಸುವಂತೆ ಪ್ರಸ್ತಾಪ ಸಲ್ಲಿಸಿವೆ. ಕೆಇಆರ್‌ಸಿಗೆ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕಾಂನಂತಹ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರವನ್ನು ಹೆಚ್ಚಿಸುವಂತೆ ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ವಿದ್ಯುತ್ ಖರೀದಿಗೆ ತಗಲುವ ವೆಚ್ಚ

ರಾಜ್ಯದ ಜನತೆಗೆ ಬಿಲ್ ಶಾಕ್ ನೀಡಲು ಸಿದ್ದತೆ ಮಾಡಿಕೊಂಡ ಎಸ್ಕಾಂ| ಕೆಇಆರ್ ಸಿ‌‌ ಗೆ ದರ ಏರಿಕೆ ಮಾಡಲು ಪ್ರಸ್ತಾಪ Read More »

ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್ ಪ್ರಮಾಣ | ಗಣ್ಯರ ದಂಡು; ಮಿಂಚಿದ ಪತ್ನಿ ಅಮೃತಾ

ಸಮಗ್ರ ನ್ಯೂಸ್: ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿ ಯ ದೇವೇಂದ್ರ ಫಡ್ನವೀಸ್ ಅವರು ಡಿ.5 ರಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಹಾಗೂ ಎನ್‌ ಡಿ ಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು. ಉದ್ಯಮಿ ಮುಖೇಶ್ ಅಂಬಾನಿ, ಅಂಬಾನಿ ಸೊಸೆ ರಾಧಿಕಾ ಮತ್ತು ಪುತ್ರ ಅನಂತ್ ಅಂಬಾನಿ, ಕುಮಾರಮಂಗಲಂ ಬಿರ್ಲಾ ಹಾಜರಿದ್ದರು. ಬಾಲಿವುಡ್ ತಾರೆಯರಾದ ಶಾರುಕ್ ಖಾನ್,

ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್ ಪ್ರಮಾಣ | ಗಣ್ಯರ ದಂಡು; ಮಿಂಚಿದ ಪತ್ನಿ ಅಮೃತಾ Read More »

ಕುಕ್ಕೆಸುಬ್ರಹ್ಮಣ್ಯ: ಚಂಪಾಷಷ್ಟಿ ಹಿನ್ನೆಲೆ| ಎರಡು ದಿನ ಮದ್ಯ ಮಾರಾಟ ಬಂದ್ ಮಾಡಿ ದ.ಕ ಡಿಸಿ ಆದೇಶ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಹಿನ್ನೆಲೆಯಲ್ಲಿ ಡಿ. 6 ಮತ್ತು 7 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವವು ನಡೆಯುತ್ತಿದ್ದು, ಡಿಸೆಂಬರ್ 6ರಂದು ಪಂಚಮಿ ರಥೋತ್ಸವ ಹಾಗೂ ಡಿಸೆಂಬರ್ 7ರಂದು ಚಂಪಾಷಷ್ಠಿ ಮಹಾರಥೋತ್ಸವವು ನಡೆಯಲಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್

ಕುಕ್ಕೆಸುಬ್ರಹ್ಮಣ್ಯ: ಚಂಪಾಷಷ್ಟಿ ಹಿನ್ನೆಲೆ| ಎರಡು ದಿನ ಮದ್ಯ ಮಾರಾಟ ಬಂದ್ ಮಾಡಿ ದ.ಕ ಡಿಸಿ ಆದೇಶ Read More »

16 ವರ್ಷದವನನ್ನು ಪ್ರೀತಿಸಿ ಮದುವೆಯಾದ ಶಿಕ್ಷಕಿ; ಅಪರೂಪದ ಪ್ರಕರಣದ ಬಗ್ಗೆ ಅಧಿಕಾರಿಗಳು ಹೇಳಿದ್ದಿಷ್ಟು

ಸಮಗ್ರ ನ್ಯೂಸ್ : ನಮಗೆ ಮಾರ್ಗದರ್ಶನ ನೀಡಿ ಉತ್ತಮ ದಾರಿಯೆಡೆಗೆ ಕೊಂಡೊಯ್ಯಬೇಕಾಗಿರುವ ಶಿಕ್ಷಕರೇ ಹಾದಿ ತಪ್ಪಿದರೆ ಹೇಗಿರುತ್ತಿದೆ ಎಂಬುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿಯಾಗಿದೆ. ಉತ್ತರಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಉತ್ತರಪ್ರದೇಶದ ಮೀರತ್‌ನಲ್ಲಿ 25 ವರ್ಷದ ಶಿಕ್ಷಕಿಯೊಬ್ಬರು 16 ವರ್ಷದ ವಿದ್ಯಾರ್ಥಿಯನ್ನು ಅಪಹರಿಸಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.ಈ ಬಗ್ಗೆ ಮಾತನಾಡಿರುವ ಮೀರತ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಡಹ್ರಾಡೂನ್

16 ವರ್ಷದವನನ್ನು ಪ್ರೀತಿಸಿ ಮದುವೆಯಾದ ಶಿಕ್ಷಕಿ; ಅಪರೂಪದ ಪ್ರಕರಣದ ಬಗ್ಗೆ ಅಧಿಕಾರಿಗಳು ಹೇಳಿದ್ದಿಷ್ಟು Read More »

ಮಹಾರಾಷ್ಟ್ರದಲ್ಲಿ ಇಂದು ‘ಸಾರ್ವಜನಿಕ ರಜೆ’ ಘೋಷಿಸಿ ಸರ್ಕಾರ ಆದೇಶ

ಸಮಗ್ರ ನ್ಯೂಸ್:ಡಾ ಘೋಷಿಸಿದೆ. .ಬಿ.ಆ‌ರ್.ಅಂಬೇಡ್ಕರ್ ಅವರ ಗೌರವಾರ್ಥ ಮಹಾರಾಷ್ಟ್ರ ಸರ್ಕಾರ ಡಿಸೆಂಬರ್ 6 ರಂದು ಮಹಾಪರಿನಿರ್ವಾಣ ದಿನದ ಅಂಗವಾಗಿ ಸಾರ್ವಜನಿಕ ರಜಾದಿನವನ್ನು 1996 ರ ಸಾಮಾನ್ಯ ಆಡಳಿತ ಇಲಾಖೆಯ ಸುತ್ತೋಲೆಯ ಪ್ರಕಾರ ಮುಂಬೈನ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಿಗೆ ರಜೆ ಅನ್ವಯಿಸುತ್ತದೆ. ಮುಂಬೈ ಸಾಂಪ್ರದಾಯಿಕವಾಗಿ 2007 ರಿಂದ ಅನಂತ್ ಚತುರ್ದಶಿ ಮತ್ತು ಗೋಪಾಲ್ಕಲಾ (ದಹಿ ಹಂಡಿ) ರಂದು ಸ್ಥಳೀಯ ರಜಾದಿನಗಳನ್ನು ಆಚರಿಸುತ್ತದೆ. ಇದು 2024 ರಲ್ಲಿ ಈ ಪ್ರದೇಶದ ಮೂರನೇ ಸ್ಥಳೀಯ ರಜಾದಿನವಾಗಿದೆ.ಅಧಿಕೃತ ಅಧಿಸೂಚನೆಯ

ಮಹಾರಾಷ್ಟ್ರದಲ್ಲಿ ಇಂದು ‘ಸಾರ್ವಜನಿಕ ರಜೆ’ ಘೋಷಿಸಿ ಸರ್ಕಾರ ಆದೇಶ Read More »

ಬೆಳ್ತಂಗಡಿ: ನವವಿವಾಹಿತ ಮಂಗಳೂರಿನಲ್ಲಿ ಆತ್ಮಹತ್ಯೆ

ಸಮಗ್ರ‌ ನ್ಯೂಸ್: ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾಗಿದ್ದ ಬೆಳ್ತಂಗಡಿ ಯ ನವ ವಿವಾಹಿತ ಇದೀಗ ನಿಗೂಢ ಕಾರಣಕ್ಕೆ ಮಂಗಳೂರು ನಗರದಲ್ಲಿ ಇಹಲೋಕ ತ್ಯಜಿಸಿದ ದಾರುಣ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಪರಾರಿ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರ ಪುತ್ರ ಪ್ರದೀಪ್ (32) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾರೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಪ್ರದೀಪ್ ಬುಧವಾರ ಮಂಗಳೂರಿನ ಬಾಡಿಗೆ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಜೀವಾಂತ್ಯ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಹೋಟೆಲೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದ ಪ್ರದೀಪ್ ಮೂರು ತಿಂಗಳ

ಬೆಳ್ತಂಗಡಿ: ನವವಿವಾಹಿತ ಮಂಗಳೂರಿನಲ್ಲಿ ಆತ್ಮಹತ್ಯೆ Read More »