December 2024

ಜಮ್ಮು-ಕಾಶ್ಮೀರ: ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ IED ಪತ್ತೆ, ತಪ್ಪಿದ ದೊಡ್ಡ ದುರಂತ!

ಸಮಗ್ರ ನ್ಯೂಸ್ : ಜಮ್ಮು-ಕಾಶ್ಮೀರದ ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಪ್ರಬಲವಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಕಾಲಿಕ ಪತ್ತೆಯೊಂದಿಗೆ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.ಬಾರಾಮುಲ್ಲಾ ಜಿಲ್ಲೆಯ ಪಟ್ಟನ್ ಪ್ರದೇಶದ ಪಲ್ಲಲ್ಲಾನ್ ಎಂಬಲ್ಲಿ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದ ವಸ್ತುವೊಂದನ್ನು ಗುರುತಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಶಂಕಾಸ್ಪದ ವಸ್ತು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಎಂಬುದ ದೃಢವಾಗಿದೆ. ಇದೀಗ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದ್ದು, ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.ಬಾಂಬ್ ನಿಷ್ಕ್ರಿಯ ದಳವು ನಿಯಂತ್ರಿತ […]

ಜಮ್ಮು-ಕಾಶ್ಮೀರ: ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ IED ಪತ್ತೆ, ತಪ್ಪಿದ ದೊಡ್ಡ ದುರಂತ! Read More »

ರಾಜ್ಯದ ಮಹಿಳೆಯರಿಗೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಅವರಿಂದ ಮತ್ತೊಂದು ಗುಡ್ ನ್ಯೂಸ್

ಸಮಗ್ರ ನ್ಯೂಸ್ : ಡಿ.09 ರಂದು ರಾಜ್ಯದ ಮಹಿಳೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಮತ್ತೊಂದು ಗುಡ್ ನ್ಯೂಸ್ ನೀಡಲಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಮೂಲಕ ಈಗಾಗಲೇ ಪ್ರತಿ ಕುಟುಂಬದ ಮಹಿಳೆಗೆ 2000 ರೂಪಾಯಿ ನೀಡಲಾಗುತ್ತಿದ್ದು, ಇದೀಗ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಸ್ವಾವಲಂಬನೆಗೆ ಮತ್ತೊಂದು ಹೆಜ್ಜೆ ಮುಂದಿಡುವ ಉದ್ದೇಶವನ್ನು ಹೊಂದಿದೆ. ಹಿರೇ ಬಾಗೇವಾಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ) ವತಿಯಿಂದ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಹಾಗೂ

ರಾಜ್ಯದ ಮಹಿಳೆಯರಿಗೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಅವರಿಂದ ಮತ್ತೊಂದು ಗುಡ್ ನ್ಯೂಸ್ Read More »

ಎಂಇಎಸ್ ಪುಂಡರನ್ನು ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್ : ಅಧಿವೇಶನದ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಮುಂದಾಗಿದ್ದ ನಾಡದ್ರೋಹಿ ಎಂಇಎಸ್ ಪುಂಡರನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಯೋಜನೆ ಮಾಡುತ್ತದೆ. ಈ ಬಾರಿಯು ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿದೆ.ಹಾಗಾಗಿ ಜಿಲ್ಲಾಡಳಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧ ಹೇರಿತು. ಆದರೆ ಜಿಲ್ಲಾಡಳಿತ ನಿಷೇದ ಹೇರಿದರು ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿ ಮಹಾಮೇಳಾವ್ ಆಚರಣೆಗೆ ಮುಂದಾಗಿದೆ ಈ ವೇಳೆ

ಎಂಇಎಸ್ ಪುಂಡರನ್ನು ವಶಕ್ಕೆ ಪಡೆದ ಪೊಲೀಸರು Read More »

ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಕೋತಿಗಳು ಮಾಡುವ ಅವಾಂತರ ಒಂದೆರಡಲ್ಲ! ಈ ಹಿಂದೆ ಕೋತಿಗಳು ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣಗಳು ಸಾಕಷ್ಟಿವೆ. ಇದೀಗ ಇವುಗಳಿಂದ ರೈಲು ಸಂಚಾರಕ್ಕೂ ಅಡ್ಡಿಯಾಗಿದೆಯಂತೆ. ಬಿಹಾರದ ಸಮಸ್ತಿಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಬಾಳೆಹಣ್ಣಿನ ವಿಚಾರವಾಗಿ ಎರಡು ಕೋತಿಗಳ ನಡುವೆ ಜಗಳ ನಡೆದ ನಂತರ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ಲಾಟ್‌ಫಾರ್ಮ್ ಸಂಖ್ಯೆ 4 ರ ಬಳಿ ಈ ಘಟನೆ ನಡೆದಿದ್ದು, ಅಲ್ಲಿ ಕೋತಿಗಳು ಬಾಳೆಹಣ್ಣಿಗಾಗಿ ಜಗಳವಾಡುತ್ತಿದ್ದವು. ಇದರಿಂದಾಗಿ ರೈಲು ಸಂಚಾರಕ್ಕೆ

ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ? Read More »

ಸಾಣೂರಿನ ಯುವತಿ ನಾಪತ್ತೆ

ಸಮಗ್ರ ನ್ಯೂಸ್:ಸಾಣೂರು ಗ್ರಾಮದ ಕುಜುಮಾರು ಗುಡ್ಡೆ ರಾಜೀವ ನಗರ ನಿವಾಸಿ ಅಮಿತಾ (19) ಅವರು ನ. 26ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಕಳ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಗೆ ಹೋದವರು ಇರುವರೆಗೂ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ

ಸಾಣೂರಿನ ಯುವತಿ ನಾಪತ್ತೆ Read More »

ಜೈಲಿಗೆ ಹಾಕಿದ್ರೂ ಸರಿ ನಮಗೆ ಭಾರತವೇ ಬೇಕು ಎಂದ ಬಾಂಗ್ಲಾದೇಶ ಹಿಂದೂಗಳು

ಸಮಗ್ರ ನ್ಯೂಸ್ : ನಮ್ಮನ್ನು ಜೈಲಿಗೆ ಹಾಕಿದರೂ ಸರಿ, ನಾವು ಭಾರತ ಬಿಟ್ಟು ಹೋಗಲ್ಲ. ಹೀಗಂತ ತ್ರಿಪುರಾದಲ್ಲಿ ಬಂಧಿತರಾದ ಬಾಂಗ್ಲಾದೇಶ ಹಿಂದೂಗಳು ಹೇಳಿಕೆ ನೀಡಿದ್ದಾರೆ.ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ನಂತರ ನಿರಂತರವಾಗಿ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಲೇ ಇದೆ. ಇತ್ತೀಚೆಗಂತೂ ಹಿಂದೂಗಳ ಮೇಲೆ ಇನ್ನಿಲ್ಲದಂತೆ ಹಿಂಸಾಚಾರ, ಕೊಲೆ, ಅತ್ಯಾಚಾರ ನಡೆಯುತ್ತಲೇ ಇದೆ. ಅಲ್ಪ ಸಂಖ್ಯಾತ ಹಿಂದೂಗಳಿಗೆ ಅಲ್ಲಿನ ಸರ್ಕಾರ ಯಾವುದೇ ರಕ್ಷಣೆ ನೀಡುತ್ತಿಲ್ಲ.ಹೀಗಾಗಿ ಬಾಂಗ್ಲಾದೇಶದಿಂದ ಕೆಲವು ಹಿಂದೂಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳುತ್ತಿದ್ದಾರೆ. ಇದೇ ರೀತಿ

ಜೈಲಿಗೆ ಹಾಕಿದ್ರೂ ಸರಿ ನಮಗೆ ಭಾರತವೇ ಬೇಕು ಎಂದ ಬಾಂಗ್ಲಾದೇಶ ಹಿಂದೂಗಳು Read More »

ವಿಮಾನ ಅಪಘಾತದಲ್ಲಿ ಸಿರಿಯಾ ಅಧ್ಯಕ್ಷ ಅಸ್ಸಾದ್ ಸಾವು? ರಾಡಾರ್ ನಿಂದ ಸಿರಿಯನ್ ಏರ್ ಫೈಟ್ ಕಣ್ಮರೆಯಾಗುತ್ತಿದ್ದಂತೆ ಸಾವಿನ ಶಂಕೆ

ಸಮಗ್ರ ನ್ಯೂಸ್: ಸಿರಿಯನ್ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಸಾವಿನ ಬಗ್ಗೆ ಊಹಾಪೋಹ ಶುರುವಾಗಿದೆ. ವಿಮಾನವು ಡಮಾಸ್ಕಸ್‌ನಿಂದ ತಪ್ಪಿಸಿಕೊಳ್ಳುವಾಗ ಪತನಗೊಂಡಿರಬಹುದು ಅಥವಾ ಹೊಡೆದುರುಳಿಸಲ್ಪಟ್ಟಿರಬಹುದು ಎಂದು ಹೇಳಲಾಗಿದೆ. ಆನ್‌ಲೈನ್ ಟ್ರ್ಯಾಕರ್ ನಿಂದ ಮುಕ್ತ-ಮೂಲ ಡೇಟಾವು ಸಿರಿಯನ್ ಏರ್ ವಿಮಾನವು ಡಮಾಸ್ಕಸ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿರುವುದನ್ನು ತೋರಿಸುತ್ತದೆ ಬಂಡುಕೋರರು ರಾಜಧಾನಿಯ ನಿಯಂತ್ರಣಕ್ಕೆ ಪಡೆದು ಹಕ್ಕು ಸಾಧಿಸಿದರು. ನಂತರ ಇಲ್ಯುಶಿನ್ Il-76T ಎಂಬ ವಿಮಾನವು ಆರಂಭದಲ್ಲಿ ಸಿರಿಯಾದ ಕರಾವಳಿ ಪ್ರದೇಶದ ಕಡೆಗೆ ಹೋಗುತ್ತಿತ್ತು. ಆದಾಗ್ಯೂ, ಅದು ಹಠಾತ್ತನೆ ಮಾರ್ಗವನ್ನು

ವಿಮಾನ ಅಪಘಾತದಲ್ಲಿ ಸಿರಿಯಾ ಅಧ್ಯಕ್ಷ ಅಸ್ಸಾದ್ ಸಾವು? ರಾಡಾರ್ ನಿಂದ ಸಿರಿಯನ್ ಏರ್ ಫೈಟ್ ಕಣ್ಮರೆಯಾಗುತ್ತಿದ್ದಂತೆ ಸಾವಿನ ಶಂಕೆ Read More »

ಮಾಣಿ: ಜೋಕಾಲಿಯಲ್ಲಿ ಸಿಲುಕಿ ಶಾಲಾ ಬಾಲಕಿ ದಾರುಣ ಸಾವು

ಸಮಗ್ರ ನ್ಯೂಸ್: ಜೋಕಾಲಿಯಲ್ಲಿ ಸಿಲುಕಿ ಪುಟ್ಟ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕು ಮಾಣಿ ಸಮೀಪದ ಪೆರಾಜೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ (8) ಜೋಕಾಲಿಗೆ ಬಲಿಯಾದ ಬಾಲಕಿ. ಈಕೆ ಶೇರಾ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ದುರಂತ ಸಂಭವಿಸಿದೆ. 2 ವರ್ಷದ ಹಿಂದೆ ಇಲ್ಲಿಗೆ ತುಸು ದೂರದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅನಂತಾಡಿ ಎಂಬಲ್ಲಿ 6ನೇ ತರಗತಿಯ

ಮಾಣಿ: ಜೋಕಾಲಿಯಲ್ಲಿ ಸಿಲುಕಿ ಶಾಲಾ ಬಾಲಕಿ ದಾರುಣ ಸಾವು Read More »

ಮಡಿಕೇರಿ: ಹಾಸ್ಟೆಲ್ ಗೆ‌ ಮರಳಿದ್ದ ವಿದ್ಯಾರ್ಥಿ ನಿಗೂಢ ನಾಪತ್ತೆ

ಸಮಗ್ರ ನ್ಯೂಸ್: ಹಬ್ಬಕ್ಕೆಂದು ಊರಿಗೆ ಬಂದು ರಜೆ ಮುಗಿಸಿ ಮರಳಿ ಹೋದ ಮಗ ಒಂದು ತಿಂಗಳು ಕಳೆದರೂ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಗೋಳಾಡುತ್ತಿರುವ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪದಿಂದ ವರದಿಯಾಗಿದೆ. ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಯನ್ನು ಸೇರಿಸಲಾಗಿತ್ತು. ದೀಕ್ಷಿತ್ (17) ನಾಪತ್ತೆಯಾದ ಬಾಲಕ. ಆದರೆ, ಕಳೆದ ದೀಪಾವಳಿ ರಜೆಗೆಂದು ಕಾಲೇಜಿನಿಂದ ಆಗಮಿಸಿದ್ದ. ಮಗ ತಾಯಿಯೊಂದಿಗೆ ದೀಪಾವಳಿ ಹಬ್ಬ ಖುಷಿ ಖುಷಿಯಿಂದಲೇ ಆಚರಿಸಿ ಸಂಭ್ರಮಿಸಿದ್ದ. ದೀಪಾವಳಿ ರಜೆ ಮುಗಿಯುತ್ತಿದ್ದಂತೆಯೇ ಎಂದಿನಂತೆ ಕಾಲೇಜಿನ ಹಾಸ್ಟೆಲ್‌ಗೆ ತೆರಳಲು ಮಗ ಅಣಿಯಾಗಿದ್ದ

ಮಡಿಕೇರಿ: ಹಾಸ್ಟೆಲ್ ಗೆ‌ ಮರಳಿದ್ದ ವಿದ್ಯಾರ್ಥಿ ನಿಗೂಢ ನಾಪತ್ತೆ Read More »

ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಚಂಪಾಷಷ್ಠಿ ರಥೋತ್ಸವದಲ್ಲಿ ಅಮೆರಿಕಾದ ಡೊನಾಲ್ಡ್ ಟ್ರಂಪ್ ಅವರ ಬಿಸಿನೆಸ್ ಪಾರ್ಟ್ನರ್ ಶಶಿಭೂಷಣ್ ಭಾಗವಹಿಸಿದ್ದಾರೆ. ಅವರು ಅಮೆರಿಕಾದಲ್ಲಿ 3000 ಕೋಟಿ ರೂಪಾಯಿ ವೆಚ್ಚದಲ್ಲಿ 500 ಎಕರೆ ಜಾಗದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ನಿರ್ಮಿಸುವ ಯೋಜನೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಮಂಗಳೂರು, ಡಿ.7ರಂದು ಚಂಪಾಷಷ್ಠಿ ಹಿನ್ನೆಲೆಯಲ್ಲಿ ಶನಿವಾರ (ಡಿಸೆಂಬರ್ 07) ಕುಕ್ಕೆ ಸುಬ್ರಮಣ್ಯದಲ್ಲಿ ರಥೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯಕ್ಕೆ ಅಮೆರಿಕಾದ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರ

ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್ Read More »