December 2024

ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್ :ಮುಂಬೈನಲ್ಲಿ ಡಿ. 09 ರಂದು ರಾತ್ರಿ ಸಂಭವಿಸಿದ ದೊಡ್ಡ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 49 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಮುಂಬೈನ ನಾಗರಿಕ ಸಾರಿಗೆ ಸಂಸ್ಥೆ ಬೆಸ್ಟ್ ಬಸ್ ಪಾದಚಾರಿಗಳಿಗೆ ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದು ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಕುರ್ಲಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದ ನಂತರ ಬಸ್ ಚಾಲಕನನ್ನು ಬಂಧಿಸಲಾಗಿದೆ. ಬಸ್, […]

ಬ್ರೇಕ್ ಫೇಲ್ ಆಗಿ ಎದುರಿದ್ದ ವಾಹನಗಳು, ಜನರ ಮೇಲೆ ಹರಿದ ಬಸ್, 7 ಸಾವು, 49 ಮಂದಿಗೆ ಗಂಭೀರ ಗಾಯ Read More »

ಜಯ ಸಿಗದಿದ್ದರೂ ಫಲ ಸಿಕ್ಕಿದೆ: ನಿಖಿಲ್ ಕುಮಾರಸ್ವಾಮಿ

ಸಮಗ್ರ ನ್ಯೂಸ್ : ನಮಗೆ ಜಯ ಸಿಕ್ಕದೆ ಹೋದರೂ ಫಲ ಸಿಕ್ಕಿದೆ. ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.ದೆಹಲಿಯಲ್ಲಿ ಡಿ. 09 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸೋಲಿಗೆ ಕಾರಣ ಹುಡುಕುವುದಿಲ್ಲ. ರಾಜಕೀಯ ಜೀವನದಲ್ಲಿ ಅನಿರೀಕ್ಷಿತ ನಿರ್ಧಾರ ಮಾಡಿದೆ. ಎರಡು ಪಕ್ಷಗಳ ಕಾರ್ಯಕರ್ತರಿಗಾಗಿ ಸ್ಪರ್ಧೆ ಅನಿರ್ವಾಯವಾಗಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ಮೈತ್ರಿಗೆ ಕಪ್ಪುಚುಕ್ಕೆ ಬರದಂತೆ ಕುಮಾರಸ್ವಾಮಿ ನಿರ್ಧಾರ ಮಾಡಿದರು ಎಂದರು.ಉಪಚುನಾವಣೆಯಲ್ಲಿ ಇಂಥ

ಜಯ ಸಿಗದಿದ್ದರೂ ಫಲ ಸಿಕ್ಕಿದೆ: ನಿಖಿಲ್ ಕುಮಾರಸ್ವಾಮಿ Read More »

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನ ಹಿನ್ನೆಲೆ| ಡಿ.11ರ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಜೊತೆಗೆ ನಾಳೆ(ಡಿ. ೧೧) ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ. ಇಂದು ತಡರಾತ್ರಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ. ನಾಳೆ ಅವರ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನ ಹಿನ್ನೆಲೆ| ಡಿ.11ರ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ Read More »

ಕಾರ್ ರೇಸ್ ಚಾಂಪಿಯನ್ ಬಲ್ಲಾಳ್ ಸಾವು

ಸಮಗ್ರ ನ್ಯೂಸ್ :ಬೈಕ್‌ಗೆ ಗ್ಯಾಸ್ ಸಿಲಿಂಡರ್ ಸಾಗಾಟದ ಟಾಟಾ ಏಸ್ ವಾಹನ ಢಿಕ್ಕಿಯಾಗಿ ಬೈಕ್ ಚಲಾಯಿಸುತ್ತಿದ್ದ ಕಾರು ರೇಸ್ ಚಾಂಪಿಯನ್ ರಂಜಿತ್ ಬಲ್ಲಾಳ್ (59) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಡಿ. 09 ರಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದೆ. ರಂಜಿತ್ ಬಲ್ಲಾಳ್ ಮಂಗಳೂರು ಮೂಲದ ಕೆ.ಬಿ. ಯುವರಾಜ ಬಲ್ಲಾಳ್ ಅವರ ಪುತ್ರ. ಇವರು ಕುಟುಂಬಸ್ಥರೊಂದಿಗೆ 3 ದಿನಗಳ ಹಿಂದೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ರಂಜಿತ್

ಕಾರ್ ರೇಸ್ ಚಾಂಪಿಯನ್ ಬಲ್ಲಾಳ್ ಸಾವು Read More »

ಕರ್ನಾಟಕ ಸರ್ಕಾರದ ವಿರುದ್ಧ ಸಿಡಿದೆದ್ದ ಏಕನಾಥ್

ಸಮಗ್ರ ನ್ಯೂಸ್ : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮರಾಠಿ ಭಾಷಿಗರು ಸಮಾವೇಶ ಏರ್ಪಡಿಸಿದ್ದರು. ಈ ದೇಶದಲ್ಲಿ ಎಲ್ಲಿ ಬೇಕಾದರೂ ವಾಸ ಮಾಡಬಹುದು, ಎಲ್ಲಿ ಬೇಕಾದರೂ ಹೋಗಬಹುದು, ಸಮ್ಮೇಳನ ಆಯೋಜಿಸಬಹುದು.ಆದರೆ ಕರ್ನಾಟಕ ಸರ್ಕಾರ ದಬ್ಬಾಳಿಕೆಯ ಚಕ್ರವನ್ನು ಬೀಸಿ ಸಮ್ಮೇಳನವನ್ನು ಆಯೋಜಿಸಿದ್ದ ಮೇಯ‌ರ್, ಶಾಸಕರು ಸೇರಿದಂತೆ ಮರಾಠಿ ಏಕೀಕರಣ ಸಮಿತಿಯ 100ಕ್ಕೂ ಹೆಚ್ಚು ಮರಾಠಿ ಭಾಷಿಕ ಸಹೋದರ-ಸಹೋದರಿಯರನ್ನು ಬಂಧಿಸಿದೆ ಎಂದು ವಾಗ್ದಾಳಿ ನಡೆಸಿದರು. ದೇಶಕ್ಕಾಗಿ ಹೋರಾಡಿದ ವೀರ

ಕರ್ನಾಟಕ ಸರ್ಕಾರದ ವಿರುದ್ಧ ಸಿಡಿದೆದ್ದ ಏಕನಾಥ್ Read More »

ಮಾಜಿ ಸಿಎಂ ಎಸ್.ಎಂ ಕೃಷ್ಣ ವಿಧಿವಶ| ರಾಜ್ಯ ಸರ್ಕಾರದಿಂದ 3 ದಿನ ಶೋಕಾಚರಣೆ| ಡಿ.11ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಮಗ್ರ ನ್ಯೂಸ್: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಡಿಸೆಂಬರ್ 11 ರಂದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್ ಎಂ ಕೃಷ್ಣ ರವರು ದಿನಾಂಕ: 10.12.2024ರ ಮಂಗಳವಾರದಂದು ಪೂರ್ವಾಹ್ನ 02:30ಕ್ಕೆ ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವು ಸಂತಾಪದಿಂದ ಈ ಮೂಲಕ

ಮಾಜಿ ಸಿಎಂ ಎಸ್.ಎಂ ಕೃಷ್ಣ ವಿಧಿವಶ| ರಾಜ್ಯ ಸರ್ಕಾರದಿಂದ 3 ದಿನ ಶೋಕಾಚರಣೆ| ಡಿ.11ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ Read More »

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ

ಸಮಗ್ರ ನ್ಯೂಸ್: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್ ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಇಂದು (ಡಿಸೆಂಬರ್‌ 10 ) ಬೆಳಗಿನ ಜಾವ 2.30ರ ಸುಮಾರಿಗೆ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ Read More »

ರಾಯಚೂರಲ್ಲಿ ‘ಹಿಂದೂ’ ಯುವತಿಯರಿಗೆ ‘ಮರ್ಮಾಂಗ’ ತೋರಿಸಿ ವಿಕೃತಿ : ಆರೋಪಿಗೆ ಬಿತ್ತು ಧರ್ಮದೇಟು!

ಸಮಗ್ರ ನ್ಯೂಸ್ : ಕಾಲೇಜಿಗೆ ಹೋಗುತ್ತಿರುವ ಯುವತಿಯರಿಗೆ, ಮಹಿಳೆಯರಿಗೆ ವಿಕೃತ ಕಾಮಿಯೊಬ್ಬ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ರಾಯಚೂರು ನಗರದ ಸಾಯಿಬಾಬಾ ಹಿಂಭಾಗದಲ್ಲಿ ನಡೆದಿದೆ. ಆರೋಪಿಯನ್ನ ಅಕ್ಟ‌ರ್ ಎಂದು ಗುರುತಿಸಲಾಗಿದ್ದು, ಅಕ್ಟರ್ ರಾಯಚೂರು ನಗರದ ನಿಲ್ದಾಣದ ಬಳಿಯ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಾಲೇಜಿಗೆ ಹೋಗುವ ಹಿಂದೂ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದನು ಎನ್ನಲಾಗಿದೆ. ನಂತರ ಅವರ ಮುಂದೆ ನಿಂತು ಮರ್ಮಾಂಗ ತೋರಿಸುತ್ತಿದ್ದನು. ವಿಕೃತ ಕಾಮಿ ಹಿಂದು ಯುವತಿಯರಿಗೆ ಮಾತ್ರ ಮರ್ಮಾಂಗ ತೋರಿಸುತ್ತಿದ್ದನು.

ರಾಯಚೂರಲ್ಲಿ ‘ಹಿಂದೂ’ ಯುವತಿಯರಿಗೆ ‘ಮರ್ಮಾಂಗ’ ತೋರಿಸಿ ವಿಕೃತಿ : ಆರೋಪಿಗೆ ಬಿತ್ತು ಧರ್ಮದೇಟು! Read More »

ಮಹಾಮೇಳಾವ್ ಕಿತಾಪತಿ: ಎಂಇಎಸ್ ಮುಖಂಡರು ವಶಕ್ಕೆ

ಸಮಗ್ರ ನ್ಯೂಸ್ : ಚಳಿಗಾಲ ಅಧಿವೇಶನ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಮ್ಮಿಕೊಂಡಿದ್ದ ಮಹಾಮೇಳಾವ್ ಪ್ರತಿಭಟನೆ ನಡೆಸಲು ಬಂದಿದ್ದ ಎಂಇಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಡಿ.09ರಂದು ಪೊಲೀಸರು ವಶಕ್ಕೆ ಪಡೆದರು. ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಬಂದಿದ್ದ ಎಂಇಎಸ್ ಕಾರ್ಯಕರ್ತರು ಜೈ ಮಹಾರಾಷ್ಟ್ರ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಘೋಷಣೆ ಕೂಗಿದರು.ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದುಕೊಂಡರು. ಬೆಳಗಾವಿ ನಗರ ಸೇರಿದಂತೆ ವಿವಿಧ ಹಳ್ಳಿಗಳಿಂದ ಐದಾರು ಜನರ ಗುಂಪು ಕಟ್ಟಿಕೊಂಡು ಬರುತ್ತಿದ್ದ ಕಾರ್ಯಕರ್ತರನ್ನು

ಮಹಾಮೇಳಾವ್ ಕಿತಾಪತಿ: ಎಂಇಎಸ್ ಮುಖಂಡರು ವಶಕ್ಕೆ Read More »

ಮೆಕ್ಸಿಕೋದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವೊಲಾರಿಸ್ 3041 ವಿಮಾನ ಹೈಜಾಕ್ ಯತ್ನ

ಸಮಗ್ರ ನ್ಯೂಸ್ : ಮೆಕ್ಸಿಕೋದಲ್ಲಿ ಎಲ್ ಬಾಜಿಯೊದಿಂದ ಟಿಜುವಾನಾಗೆ ವೊಲಾರಿಸ್ 3401 ವಿಮಾನವು ಹಾರಾಟ ಮಾಡಿದ ಕೆಲ ಹೊತ್ತಿನ ನಂತರ ವಿಮಾನ ಹೈಜಾಕ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಹೈಜಾಕ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.ವಿಮಾನದಲ್ಲಿದ್ದ ಶಂಕಿತ ವ್ಯಕ್ತಿಯನ್ನು ಸಿಬ್ಬಂದಿ ಎದುರಿಸಿದ ಆಘಾತಕಾರಿ ಕ್ಷಣವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ. ಎಲ್ ಬಾಜಿಯೊದಿಂದ ಟಿಜುವಾನಾಗೆ ಮೆಕ್ಸಿಕನ್ ದೇಶೀಯ ವಿಮಾನವನ್ನು ಅಪಹರಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಗೆ ತಿರುಗಿಸಲು ವ್ಯಕ್ತಿಯೊಬ್ಬ ಯತ್ನಿಸಿದ.ಪ್ರಯಾಣಿಕರು ವೊಲಾರಿಸ್ 3401 ಅನ್ನು ಮಧ್ಯ

ಮೆಕ್ಸಿಕೋದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವೊಲಾರಿಸ್ 3041 ವಿಮಾನ ಹೈಜಾಕ್ ಯತ್ನ Read More »