ಸಮಗ್ರ ನ್ಯೂಸ್: ಪ್ರಖ್ಯಾತ ವಾಗ್ಮಿ, ಹಾಸ್ಯ ಭಾಷಣದಿಂದಲೇ ಜನಪ್ರಿಯರಾಗಿದ್ದ ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ನಿಧನರಾಗಿದ್ದಾರೆ. ಬಹಳ ಕಾಲದಿಂದ ಅನಾರೋಗ್ಯದಲ್ಲಿದ್ದ ಜಯಪ್ರಕಾಶ್ ಬರಗೂರು ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 67 ವರ್ಷ ವಯಸ್ಸಾಗಿತ್ತು. ಜಯಪ್ರಕಾಶ್ ಬರಗೂರು ಅವರಿಗೆ ಕೆಲವು ವರ್ಷಗಳಿಂದ ಹೃದಯ ಸಮಸ್ಯೆ ಭಾದಿಸುತ್ತಿತ್ತು. ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಹಾಗೂ ಹಾಲಿ ಸಂಸದರಾಗಿರುವ ಡಾ.ಸಿಎನ್ ಮಂಜುನಾಥ್ ಇವರಿಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದರು. ಈ ಬಗ್ಗೆ ಸ್ವತಃ ಸುಧಾರ ಬರಗೂರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಆದರೆ, ಹೃದಯ ಸಮಸ್ಯೆಯ ಕಾರಣದಿಂದಾಗಿಯೇ ಸಾವು ಕಂಡಿದ್ದಾರೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಜಯಪ್ರಕಾಶ್ ಬರಗೂರು ವರು ಪತ್ನಿ, ಓರ್ವ ಪುತ್ರಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.