ಸಮಗ್ರ ನ್ಯೂಸ್: ಮನೆಯ ಹೊರಗಿನ ಅರ್ತ್ ತಂತಿಯಿಂದ ವಿದ್ಯುತ್ ಶಾಕ್ ತಗುಲಿ ಮೂರೂವರೆ ವರ್ಷದ ಮಗು ಸಾವಿಗೀಡಾದ ಘಟನೆ ಕಾಸರಗೋಡು ಜಿಲ್ಲೆಯ ಗಾಳಿಮುಖದಲ್ಲಿ ನಡೆದಿದೆ.
ಗಾಳಿಮುಖ ನಿವಾಸಿ ಶಿನ್ಸಾದ್ ಅವರ ಪುತ್ರ ಮುಹಮ್ಮದ್ ಶಿನ್ಸಾದ್ ಸಾವಿಗೀಡಾದ ಬಾಲಕ. ಡಿ.29 ರಂದು ಸಂಜೆ 4 ಗಂಟೆಗೆ ಮನೆಯ ಹೊರಗೆ ಆಟ ಆಡುತ್ತಿದ್ದಾಗ ಅರ್ತ್ ತಂತಿಯನ್ನು ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗುಲಿದೆ.
ವಿಷಯ ತಿಳಿದು ಮಗುವಿನ ಅಜ್ಜ ಮುಹಮ್ಮದ್ ಶಾಫಿ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮಗುವನ್ನು ರಕ್ಷಿಸಲು ಯತ್ನಿಸಿದ ವೇಳೆ ಅಸ್ವಸ್ಥಗೊಂಡ ಮುಹಮ್ಮದ್ ಶಾಫಿ ಅವರನ್ನು ಚೆರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಾಸರಗೋಡು ಸಮೀಪದ ಎರಿಂಞಿಪುಳ ಎಂಬಲ್ಲಿ ನದಿಗೆ ಬಿದ್ದ ಮೂವರು ಬಾಲಕರು ಮೃತಪಟ್ಟ ಘಟನೆ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಅಶ್ರಫ್-ಶಬಾನಾ ದಂಪತಿ ಪುತ್ರ ಮುಹಮ್ಮದ್ ಯಾಸಿನ್(13), ಮಂಜೇಶ್ವರದ ಸಿದ್ದೀಕ್-ರಂಲಾ ದಂಪತಿ ಪುತ್ರ ರಿಯಾಝ್ (10), ಮಜೀದ್-ಶಹೀನಾ ದಂಪತಿ ಪುತ್ರ ಅಬ್ದುಲ್ ಸಮದ್ (14) ಮೃತಪಟ್ಟವರು.
ಸಂಬಂಧಿಕರಾದ ಈ ಮಕ್ಕಳು ಈಜಾಡಲು ತೆರಳಿದ್ದ ವೇಳೆ ಸುಳಿಗೆ ಸಿಲುಕಿ ಮುಳುಗಿದ್ದಾರೆ.