Ad Widget .

ನೆಲಮಂಗಲ ಭೀಕರ ಆಕ್ಸಿಡೆಂಟ್, IAST ಕಂಪನಿ ಮಾಲೀಕ ಚಂದ್ರಮ್ ಇಡೀ ಕುಟುಂಬ ಸಾವು

ಸಮಗ್ರ ನ್ಯೂಸ್ : ವೋಲ್ಲೋ ಕಂಪನಿಯ ಬರೋಬ್ಬರಿ 1.01 ಕೋಟಿ ರೂಪಾಯಿ ಮೌಲ್ಯದ ವೋಲ್ಲೋ ಎಕ್ಸ್‌ಸಿ 90 ಬ್ರಾಂಡ್‌ನ ಕಾರು. ಆದರೆ, ವಿಧಿಯಾಟದ ಮುಂದೆ ಅದೆಷ್ಟೇ ಮೊತ್ತದ ಅದೆಷ್ಟೇ ಬ್ರಾಂಡ್‌ನ ಕಾರು ಖರೀದಿ ಮಾಡಿದ್ದರೂ ಲೆಕ್ಕಕ್ಕೆ ಬರೋದಿಲ್ಲ. ನೆಲಮಂಗಲದಲ್ಲಿ ತುಮಕೂರು-ಬೆಂಗಳೂರು ನಡುವೆ ಡಿ.21 ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯ ಮಾಲೀಕ ಹಾಗೂ ಸಿಇಒ ಚಂದ್ರಮ್ ಯೇಗಪ್ಪಗೋಳ ಹಾಗೂ ಅವರ ಇಡೀ ಕುಟುಂಬ ಸಾವು ಕಂಡಿದೆ.

Ad Widget .

ಈ ನಡುವೆ ಅವರು ಎರಡು ತಿಂಗಳ ಹಿಂದೆಷ್ಟೇ ಖರೀದಿ ಮಾಡಿದ್ದ ವೋಲ್ಲೋ ಕಾರಿನ ವಿಡಿಯೋ ವೈರಲ್ ಆಗಿದೆ.ಬೆಂಗಳೂರು ಮಾರ್ಟಿಯಲ್ ವೋಲ್ಲೋ ಕಾರ್ಸ್ ಶೋ ರೂಮ್‌ನಲ್ಲಿ ಅವರು ವೋಲ್ಲೋ ಎಕ್ಸ್‌ಇ 90 ಕಾರು ಖರೀದಿ ಮಾಡಿದ್ದರು. ಇದರ ವಿಡಿಯೋವನ್ನು ಮಾರ್ಟಿಯಲ್ ವೋಲ್ಲೋ ಕಾರ್ಸ್ ನವೆಂಬರ್ 5 ರಂದು ತನ್ನ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿತ್ತು. ‘ಮಾರ್ಷಲ್ ವೋಲ್ಲೋ ಕಾರ್ಸ್ ವೋಲ್ಲೋ XC90 ಜೊತೆ ಐಷಾರಾಮಿ ಹೊಂದಿದ್ದಕ್ಕಾಗಿ ಚಂದ್ರಮ್ ಯೇಗಪ್ಪಗೋಳ ಟಿ ಮತ್ತು ಕುಟುಂಬವನ್ನು ಅಭಿನಂದಿಸುತ್ತದೆ.

Ad Widget . Ad Widget .

ನಾವು ನಿಮ್ಮನ್ನು ವೋಲ್ಲೋ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಮತ್ತು ನಮ್ಮೊಂದಿಗೆ ನಿಮ್ಮ ಪ್ರಯಾಣದ ಉದ್ದಕ್ಕೂ ನಿಮ್ಮ ಪಕ್ಕದಲ್ಲಿ ನಿಲ್ಲುವ ಭರವಸೆ ನೀಡುತ್ತೇವೆ’ ಎಂದು ಕೆಲ ಸೆಕೆಂಡ್‌ ವಿಡಿಯೋವನ್ನು ಹಂಚಿಕೊಂಡಿದೆ.ಬಿಳಿ ಬಣ್ಣದ ವೋಲ್ಲೋ ಕಾರ್‌ಅನ್ನು ಖರೀದಿ ಮಾಡುವ ವೇಳೆ ಅವರ ಪತ್ನಿ ಹಾಗೂ ಪುಟಾಣಿ ಮಗು ಕೂಡ ಹಾಜರಿದ್ದರು. ಇನ್ನು ಶೋ ರೂಮ್ ಕೂಡ ಕೇಕ್ ಕತ್ತರಿಸಿ ಇವರನ್ನು ವೋಲ್ಲೋ ಫ್ಯಾಮಿಲಿಗೆ ಸ್ವಾಗತ ಮಾಡಿತ್ತು. ಚಂದ್ರಮ್ ಕೇಕ್ ಕತ್ತರಿಸಿ ಮೊದಲು ತಮ್ಮ ಮಗಳಿಗೆ ತಿನಿಸಿದ್ದರು. ಇನ್ನು ಮಗಳು ಕೂಡ ತಂದೆಗೆ ಕೇಕ್ ತಿನ್ನಿಸಿದ್ದರು. ಈ ವಿಡಿಯೋಗೆ ಸಾಕಷ್ಟು ಮಂದಿ ‘RIP’ ಎಂದು ಕಾಮೆಂಟ್ ಮಾಡಿದ್ದಾರೆ.

ಇಷ್ಟು ಸಂಭ್ರಮದಲ್ಲಿ ಕಾರು ಖರೀದಿಸಿದ್ದ ನಿಮ್ಮ ಕುಟುಂಬದ ಸಾವು ಈ ರೀತಿ ಆಗಿದ್ದಕ್ಕೆ ಬೇಸರವಿದೆ ಎಂದು ಬರೆದಿದ್ದಾರೆ.ಚಂದ್ರಮ್ ಆಟೋ ಮೊಬೈಲ್ ಇಂಡಸ್ಟ್ರಿ ಗೆ ಸಾಫ್ಟ್‌ವೇರ್ ಪ್ರೊಗ್ರಾಮಿಂಗ್ ಮಾಡಿಕೊಡ್ತಿದ್ದ IAST ಕಂಪನಿಯ ಮಾಲೀಕರಾಗಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದ ಚಂದ್ರಮ್ ಇದರ ನಿಟ್ಟಿನಲ್ಲಿಯೇ ಓಡಾಟ ನಡೆಸುತ್ತಿದ್ದರು. ಹೊಸ ಆಫೀಸ್ ಕೆಲಸವು ಕೂಡ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡಿದ್ದ ಚಂದ್ರಮ್, ಕೆಲ ದಿನಗಳು ಬರೋದಿಲ್ಲ ಎಂದು ಹೇಳಿ ಹೋಗಿದ್ದರು. ಆದರೆ, ಈಗ ಬಾರದ ಲೋಕಕ್ಕೆ ಹೋಗಿದ್ದಾರೆ.

ಬೆಂಗಳೂರಿನ ಎಚ್‌ಎಸ್‌ಆ‌ರ್ ಲೇಔಟ್‌ನಲ್ಲಿ ಕಂಪನಿಯ ಪ್ರಧಾನ ಕಚೇರಿಯಿದ್ದು, 200 ಮಂದಿ ಕೆಲಸ ಮಾಡುತ್ತಿದ್ದಾರೆ. ಯುರೋಪ್, ಚೀನಾ ಸೇರಿದಂತೆ ವಿವಿಧ ದೇಶಗಳ ಕ್ರೈಂಟ್ಸ್‌ಗಳಿಗೆ ಸೇವೆ ನೀಡುತ್ತಿದ್ದರು.ಇಷ್ಟು ಸಂಭ್ರಮದಲ್ಲಿ ಕಾರು ಖರೀದಿಸಿದ್ದ ನಿಮ್ಮ ಕುಟುಂಬದ ಸಾವು ಈ ರೀತಿ ಆಗಿದ್ದಕ್ಕೆ ಬೇಸರವಿದೆ ಎಂದು ಬರೆದಿದ್ದಾರೆ.ಚಂದ್ರಮ್ ಆಟೋ ಮೊಬೈಲ್ ಇಂಡಸ್ಟ್ರಿ ಗೆ ಸಾಫ್ಟ್‌ವೇರ್ ಪ್ರೊಗ್ರಾಮಿಂಗ್ ಮಾಡಿಕೊಡ್ತಿದ್ದ IAST ಕಂಪನಿಯ ಮಾಲೀಕರಾಗಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದ ಚಂದ್ರಮ್ ಇದರ ನಿಟ್ಟಿನಲ್ಲಿಯೇ ಓಡಾಟ ನಡೆಸುತ್ತಿದ್ದರು. ಹೊಸ ಆಫೀಸ್ ಕೆಲಸವು ಕೂಡ ನಡೆಯುತ್ತಿತ್ತು.

ಶುಕ್ರವಾರ ರಾತ್ರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡಿದ್ದ ಚಂದ್ರಮ್, ಕೆಲ ದಿನಗಳು ಬರೋದಿಲ್ಲ ಎಂದು ಹೇಳಿ ಹೋಗಿದ್ದರು. ಆದರೆ, ಈಗ ಬಾರದ ಲೋಕಕ್ಕೆ ಹೋಗಿದ್ದಾರೆ.ಬೆಂಗಳೂರಿನ ಎಚ್‌ಎಸ್‌ಆ‌ರ್ ಲೇಔಟ್‌ನಲ್ಲಿ ಕಂಪನಿಯ ಪ್ರಧಾನ ಕಚೇರಿಯಿದ್ದು, 200 ಮಂದಿ ಕೆಲಸ ಮಾಡುತ್ತಿದ್ದಾರೆ. ಯುರೋಪ್, ಚೀನಾ ಸೇರಿದಂತೆ ವಿವಿಧ ದೇಶಗಳ ಕೈಂಟ್ಸ್ಗಳಿಗೆ ಸೇವೆ ಸಲ್ಲಿಸುತ್ತಿದ್ ರು.

Leave a Comment

Your email address will not be published. Required fields are marked *