ಸಮಗ್ರ ನ್ಯೂಸ್ : ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರಿಂದ ಟ್ರಾಫಿಕ್ ಜಾಮ್ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೋರ್ವರು ತರಾಟೆಗೆ ತೆಗೆದುಕೊಂಡ ವಿಚಾರ ಇದೀಗ ಭಾರೀ ಸದ್ದು, ಸಂಚಲನ ಹಾಗೂ ಮಹಿಳೆಯ ದಿಟ್ಟ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ನೀತಾ ಅಂಬಾನಿ ಅವರು ಬೆಂಗಳೂರಿಗೆ ಶಾಪಿಂಗ್ ಗೆಂದು ಬಂದಿದ್ದರು. ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. ಆಗ ನಗರದ ಪ್ರಮುಖ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಶಾಪಿಂಗ್ ಮಾಡಿದ್ದರು. ಹೀಗೆ ಕಾರನ್ನು ರಸ್ತೆಯಲ್ಲೇ ಬೇಕಾಬಿಟ್ಟಿ ನಿಲ್ಲಿಸಿದ್ದಕ್ಕೆ ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ಮಹಿಳೆಯೋರ್ವರು ನೀತಾ ಅಂಬಾನಿಯವರ ಬಾಡಿಗಾರ್ಡ್ ಸಿಬ್ಬಂದಿ ಮೇಲೆ ಸಿಟ್ಟಾಗಿ ಕ್ಲಾಸ್ ತೆಗೆದುಕೊಂಡಿದ್ದರು.
ಹೀಗೆ ಬೇಕಾಬಿಟ್ಟಿ ಕಾರು ಪಾರ್ಕ್ ಮಾಡೋಕೆ ಬುದ್ದಿ ಇಲ್ವಾ ಅಂತೆಲ್ಲಾ ಜಾಡಿಸಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶ್ರೀಮಂತರಾದರೇನು? ಯಾರಾದರೇನು ? ನೀವು ಮಾಡಿದ್ದು ತಪ್ಪು ಎಂದು ಬಾಡಿಗಾರ್ಡ್‌ನನ್ನು ತರಾಟೆಗೆ ಮಹಿಳೆ ತೆಗೆದುಕೊಂಡಿರುವ ವರದಿಯಾಗಿದೆ. ಬೆಂಗಳೂರಿನ ಮಹಿಳೆಯ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ನೀತಾ ಅಂಬಾನಿಯೂ ಮುಜುಗರ ಅನುಭವಿಸಿದ್ದಾರೆಂದು ಹೇಳಲಾಗುತ್ತಿದೆ.