ಸಮಗ್ರ ನ್ಯೂಸ್ : ಗಂಡ ಸೇರಿದಂತೆ 51 ಪುರುಷರಿಂದ ಕಳೆದ ಒಂದು ದಶಕದಿಂದ ನಿರಂತರವಾಗಿ ಅತ್ಯಾಚಾರಕ್ಕೆ ಒಳಾಗಿದ್ದ ಮಹಿಳೆಗೆ ಕೊನೆಗೂ ನ್ಯಾಯ ದೊರಕಿದ್ದು, ಮಾಜಿ ಪತಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ಇತರರಿಗೆ ಕಾರಗೃಹ ಶಿಕ್ಷೆ ನೀಡಿ ಡಿ.19 ರಂದು ಕೋರ್ಟ್ ಆದೇಶಿಸಿದೆ.ಹೌದು, ಈ ಘಟನೆ ನಡೆದಿರುವುದು ದೂರದ ಪ್ರಾನ್ಸ್‌ನಲ್ಲಿ.
ಜಿಸೆಲ್ ಪೆಲಿಕಾಟ್ (73) ಅತ್ಯಾಚಾರಕ್ಕೆ ಒಳಾಗಿದ್ದ ಮಹಿಳೆ. ಇವರ ಮಾಜಿ ಪತಿ ಡೊಮಿನಿಕ್ ಪೆಲಿಕಾಟ್ ಶಿಕ್ಷೆಗರ ಒಳಗಾದ ವ್ಯಕ್ತಿ. ಜಿಸೆಲ್ ಪೆಲಿಕಾಟ್ ಸುಮಾರು ಒಂದು ದಶಕದಿಂದ ಮಾದಕವಸ್ತು ಮತ್ತು ಅತ್ಯಾಚಾರಕ್ಕೊಳಾಗಿದ್ದಳು. ಅಲ್ಲದೆ, ಪತಿ ಉದ್ದೇಶ ಪೂರ್ವಕವಾಗಿ ಆಕೆಗೆ ಮಾದಕ ವಸ್ತುಗಳ ಸೇವನೆ ಮಾಡಿಸಿ ಪ್ರಜ್ಞಾಹೀನಾ ಸ್ಥಿತಿಗೆ ತಲುಪಿದ ಬಳಿಕ ಡಜನ್‌ಗಟ್ಟಲೇ ಪರುಷರಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳುತ್ತಿದ್ದ ಎಂದು ತಪ್ರೊಪ್ಪಿಕೊಂಡಿದ್ದಾನೆ.ಈ ಹಿನ್ನೆಲೆ ಪ್ರಸ್ತುತ 27ರಿಂದ 74 ವರ್ಷ ವಯಸ್ಸಿನ ಒಟ್ಟು 51 ಪುರುಷರಿಗೆ ನ್ಯಾಯಾಧೀಶ ರೋಜರ್ ಅರಾಟಾ ಮತ್ತು ನಾಲ್ವರು ನ್ಯಾಯಾದೀಶರ ಪೀಠ, 47 ಮಂದಿಯನ್ನು ಅತ್ಯಾಚಾರ, ಇಬ್ಬರು ಅತ್ಯಾಚಾರಕ್ಕೆ ಯತ್ನ ಮತ್ತು ಇಬ್ಬರು ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆದೇಶ ಬಂದಿದೆ.
ಈಗ ನಿಷೇಧಿತ ವೆಬ್‌ಸೈಟ್‌ಗಳಲ್ಲಿ ಡೊಮಿನಿಕ್ ಕೆಲ ಪುರುಷರ ಸಂಪರ್ಕ ಸಾಧಿಸಿದ ಈ ಕಾರ್ಯಕ್ಕೆ ನೇಮಿಸಿಕೊಂಡಿದ್ದಾನೆ. ಅಲ್ಲದೇ ಅವರಿಗೆ, ತನ್ನ ಮಗಳು ಮತ್ತು ಸೊಸೆಯರ ಅಸಭ್ಯ ಚಿತ್ರಗಳನ್ನು ಕ್ಲಿಕ್ ಮಾಡಿದ ಪೋಟೋಗಳನ್ನು ಅವರಿಗೆ ಪ್ರದರ್ಶನ ಮಾಡುತ್ತಿದ್ದನು. ಇದರ ಆರೋಪದಲ್ಲಿ ಡೊಮಿನಿಕ್ ತಪ್ಪಿತಸ್ಥನೆಂದು ನ್ಯಾಯಾಲಯವು ಹೇಳಿದೆ ಎಂದು ವರದಿಗಳು ಉಲ್ಲೇಖಿಸಿವೆ.ಕೆಲ ವರ್ಷಗಳಿಂದ ತನ್ನ ಮೇಲೆ ನಡೆದ ಅತ್ಯಾಚಾರವನ್ನು ಕೆಲ ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೊಂಡ ನಂತರ ಈ ಘಟನೆ ಹೊರ ಜಗತ್ತಿಗೆ ತಿಳಿಯಿತು. ಅಂದಿನಿಂದ ತಮ್ಮ ಪತಿಯ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿ ಹೋರಾಟ ಮಾಡಿದ್ದಾಳೆ ಜಿಸೆಲ್ ಪೆಲಿಕಾಟ್.