Ad Widget .

ಸಿಟಿ ರವಿ ಬಂಧನ: ರಕ್ತ ಸೋರುತ್ತಿದ್ದರೂ ರಾತ್ರಿಯೆಲ್ಲ ಕಾರಿನಲ್ಲೇ ಊರೂರು ಸುತ್ತಾಡಿಸಿದ ಪೊಲೀಸರು!

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಬಂಧನದ ಬಳಿಕ ಬೆಂಗಳೂರಿಗೆ ಕರೆದೊಯ್ಯಲು ಪೊಲೀಸರು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾತ್ರಿ ಪೂರ್ತಿ ಅವರನ್ನು ಜಿಲ್ಲೆ ಜಿಲ್ಲೆಗಳ ವಿವಿಧೆಡೆ ಸುತ್ತಾಡಿಸಲಾಗಿದೆ. ತಲೆಗೆ ಗಾಯವಾಗಿದ್ದರೂ ಕಾರಿನಲ್ಲೇ ಒಯ್ಯಲಾಗಿದೆ ಎಂಬ ಆರೋಪವೂ ಇದೆ.

Ad Widget . Ad Widget .

ಬೆಳಗಾವಿ, ಡಿ.20 ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಬಂಧನವಾಗಿದ್ದು, ಬೆಂಗಳೂರಿಗೆ ಕರೆ ತರಬೇಕಿದೆ. ಆದರೆ ಬೆಳಗಾವಿಯಲ್ಲಿ ಗುರುವಾರ ತಡರಾತ್ರಿ ವರೆಗೂ ಹೈಡ್ರಾಮವೇ ನಡೆದಿದೆ. ಪರಿಣಾಮವಾಗಿ ರಾತ್ರಿ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಸಿಟಿ ರವಿ ಅವರನ್ನು ಪೊಲೀಸರು ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದಾರೆ.ಏತನ್ಮಧ್ಯೆ, ತಲೆಯಲ್ಲಿ ರಕ್ತ ಸೋರುತ್ತಿದ್ದರೂ ಮಾನವೀಯತೆ ಮರೆತು ಕಾರಿನಲ್ಲೇ ಕರೆದುಕೊಂಡು ಸುತ್ತಾಟ ಮಾಡಿರುವ ಆರೋಪವೂ ಪೊಲೀಸರ ವಿರುದ್ಧ ಕೇಳಿಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *