ಸಮಗ್ರ ನ್ಯೂಸ್: ಖ್ಯಾತ ಸುದ್ದಿ ನಿರೂಪಕಿ ಅವರದ್ದು ಎನ್ನಲಾಗುತ್ತಿರುವ ಆಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಖ್ಯಾತ ಪಾಕಿಸ್ತಾನಿ ಸುದ್ದಿ ನಿರೂಪಕಿ ಮೋನಾ ಆಲಂ ಅವರ ಹೆಸರಿನೊಂದಿಗೆ ಆಶ್ಲೀಲ ವಿಡಿಯೋವೊಂದು ಕಳೆದು ಎರಡು – ಮೂರು ದಿನಗಳಿಂದ ಹರಿದಾಡುತ್ತಿದೆ.
ಬೆಡ್‌ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಮಹಿಳೆಯೊಬ್ಬರ ವಿಡಿಯೋ ಹಾಗೂ ಫೋಟೋ ವೈರಲ್ ಆಗುತ್ತಿದೆ. ಇದು ಮೋನಾ ಆಲಂ ಅವರ ವಿಡಿಯೋವೆಂದು ಕೆಲವೊಂದಿಷ್ಟು ಜನ ಇದನ್ನು ವೈರಲ್ ಮಾಡುತ್ತಿದ್ದಾರೆ.
ಈ ಬಗ್ಗೆ ಮೋನಾ ಅವರು ಗರಂ ಆಗಿದ್ದು, ʼಎಕ್ಸ್ʼ ಖಾತೆಯಲ್ಲಿ ಪೊಲೀಸರಿಗೆ ದೂರು ನೀಡಿರುವ ಕಾಪಿಯ ಜತೆ ವಿಡಿಯೋದಲ್ಲಿರುವ ಮಹಿಳೆಯ ಫೋಟೋ ಹಾಕಿ ಸ್ಪಷ್ಟನೆ ನೀಡಿದ್ದಾರೆ.
ಈ ಮಹಿಳೆಯ ವಿಡಿಯೋ ಹಂಚಿಕೊಂಡು ಕೆಲವೊಂದಿಷ್ಟು ಜನ ಇದನ್ನು ನಾನು ಎಂದು ಹೇಳುತ್ತಿದ್ದಾರೆ. ಇಂತವರು ನನ್ನ ವ್ಯಕ್ತಿತ್ವ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಮೋನಾ ಅವರು ಪೊಲೀಸರಿಗೆ ದೂರು ನೀಡಿರುವ ಕಾಪಿಯ ಸಹಿತ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮೋನಾ ಪಾಕಿಸ್ತಾನಿ ಸುದ್ದಿ ವಾಹಿನಿ ʼಹಮ್ ನ್ಯೂಸ್ʼನಲ್ಲಿ ‘ಕ್ವೆಶ್ಚನ್ ಅವರ್ ವಿತ್ ಮೋನಾ ಆಲಂ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಈ ಹಿಂದೆ ಪಾಕಿಸ್ತಾನದ ಖ್ಯಾತ ಸೋಶಿಯಲ್ ಮೀಡಿಯಾ ತಾರೆಗಳಾದ ಇಮ್ಶಾ ರೆಹಮಾನ್, ಕನ್ವಾಲ್ ಅಫ್ತಾಬ್, ಮಿನಾಹಿಲ್ ಮಲಿಕ್, ಮಥಿರಾ ಮೊಹಮ್ಮದ್ ಅವರದ್ದು ಎನ್ನಲಾದ ಇದೇ ರೀತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು.