ಸಮಗ್ರ ನ್ಯೂಸ್: ಸಂಸತ್ ನಲ್ಲಿ ಡಾ. ಅಂಬೇಡ್ಕರ್ ಕುರಿತ ಹೇಳಿಕೆಯಿಂದ ಭುಗಿಲೆದ್ದಿರುವ ಆಕ್ರೋಶ ಇವತ್ತು ಮತ್ತೊಂದು ಹಂತಕ್ಕೆ ಹೋಗಿದೆ. ಸಂಸತ್ ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದ್ದು ಪ್ರತಿಭಟನೆಯ ಮಧ್ಯೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದಾರೆ.
ಸಂಸತ್ತಿನಲ್ಲಿ ಉದ್ವಿಗ್ನತೆ ಭುಗಿಲೆದ್ದಿದ್ದು, ರಾಹುಲ್ ಗಾಂಧಿ ಸಂಸದರನ್ನು ತಳ್ಳಿದರು ಎಂದು ಆರೋಪಿಸಲಾಗಿದೆ. ಗದ್ದಲ ಗಲಾಟೆ ಉಂಟಾಗಿ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ತಲೆಗೆ ಗಾಯವಾಗಿದೆ. ಇದಕ್ಕೆ ನೇರವಾಗಿ ರಾಹುಲ್ ಗಾಂಧಿ ಕಾರಣ ಎನ್ನಲಾಗಿದೆ.
ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಧಿಡೀರ್ ಕೆಳಗೆ ಬಿದ್ದಿದ್ದು, ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ದರಿಂದಲೇ ನನಗೆ ಗಾಯವಾಗಿದೆ ಎಂದಿದ್ದಾರೆ.
ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ಸಂಸದರೊಬ್ಬರನ್ನು ತಳ್ಳಿದರು, ನಂತರ ಅವರು ನನ್ನ ಮೇಲೆ ಬಿದ್ದರು ಎಂದು ಸಾರಂಗಿ ಹೇಳಿದ್ದಾರೆ. ಈ ಘಟನೆ ನಾನು ಬೀಳಲು ಕಾರಣವಾಯಿತು . ಬಿಜೆಪಿ ಸಂಸದರು ನಿರಂತರವಾಗಿ ನಮ್ಮನ್ನ ತಡೆಯುತ್ತಿದ್ದರು. ಪ್ರವೇಶದ್ವಾರದ ಬಳಿ ನಿಂತಿದ್ದಾಗ ನೂಕು ನುಗ್ಗಲು ಉಂಟಾಯಿತು ಎಂದು ರಾಹುಲ್ ಗಾಂಧಿ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.