Ad Widget .

ರೈತರ ಭೂಮಿ.. ದೇವಸ್ಥಾನದ ಜಾಗವನ್ನು ವಕ್ಸ್‌ ಬೋರ್ಡ್ ಹಿಂಪಡೆಯಲ್ಲ : ಸಿಎಂ ಸಿದ್ದರಾಮಯ್ಯ !

ಸಮಗ್ರ ನ್ಯೂಸ್ : ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಪಕ್ಷ ಬಿಜೆಪಿ ನಾಯಕರು ವಕ್ಸ್ ಬೋರ್ಡ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸರ್ಕಾರದ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಉತ್ತರ ನೀಡಲು ಮುಂದಾದಾಗ ಸದನದಲ್ಲಿ ಗದ್ದಲ ಸೃಷ್ಟಿಯಾಯ್ತು.

Ad Widget . Ad Widget .

ಈ ವೇಳೆ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಕ್ಸ್ ಬೋರ್ಡ್ ನಿಂದ ದೇವಸ್ಥಾನಕ್ಕೆ ನೋಟಿಸ್ ಕೊಟ್ಟಿದ್ದರೆ ಆ ರೀತಿಯ ನೋಟೀಸ್ ಗಳನ್ನು ವಾಪಸ್ಸು ತಗೊಳ್ತವೆ ಮತ್ತು ಒಂದುವೇಳೆ ದೇವಸ್ಥಾನ ವಕ್ಸ್ ಆಸ್ತಿಯಲ್ಲಿದ್ರು ಕೂಡ ಆ ಆಸ್ತಿಯನ್ನು ಹಿಂತೆಗೆದುಕೊಳ್ಳಲ್ಲ ಎಂದಿದ್ದಾರೆ.

Ad Widget . Ad Widget .

ಕೇವಲ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಕೂಡ ಈ ರೀತಿ ನೋಟಿಸ್‌ ನೀಡಲಾಗಿದೆ. ಈ ಹಿಂದೆ ಸ್ವತಃ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ವಕ್ಸ್ ಆಸ್ತಿ ಕಬಳಿಕೆ ಮಾಡಿದ್ರೆ ಸರಿಪಡಿಸುವ ಭರವಸೆಯನ್ನು ನೀಡಿತ್ತು ಎಂದು ತಿವಿದಿದ್ದಾರೆ. ಇದರ ಜೊತೆಗೆ ರೈತರಿಗೆ ತೊಂದರೆ ಆಗುವಂತೆ ಒಕ್ಕಲೆಬ್ಬಿಸುವ ಯಾವುದೇ ಕೆಲಸ ಮಾಡಲ್ಲ. ಯಾವ ಜಾಗ ರೈತರ ಹಾಗೂ ದೇವಸ್ಥಾನದ ಆಸ್ತಿಯಾಗಿರುವುದಿಲ್ಲ ಆ ಸ್ಥಳಗಳ ಮೇಲೆ ವಕ್ಸ್ ಹಕ್ಕು ಸಾಧಿಸಲಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *