ಸಮಗ್ರ ನ್ಯೂಸ್ : ಇಲ್ಲಿನ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.ಮೃತನನ್ನು ಹೃತಿಕ್ ವರ್ಮಾ ಎಂದು ಗುರುತಿಸಲಾಗಿದೆ. ಮಹಿಳೆಯೊಂದಿಗೆ ಸಿಕ್ಕಿಬಿದ್ದ ಪರಿಣಾಮ ಆಕೆಯ ಪತಿಯೇ ಹೃತಿಕ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ರಾಕೇಶ್ ಪವೇರಿಯಾ ಪ್ರಕಾರ, ಆರೋಪಿಗಳು ಹೃತಿಕ್ ನನ್ನು ಅತ್ಯಂತ ಅಮಾನುಷವಾಗಿ ಥಳಿಸಿದ್ದಾರೆ. ಹೃತಿಕ್‌ನ ಉಗುರುಗಳನ್ನು ಹೊರತೆಗೆದು ಅವನನ್ನು ಕೆಟ್ಟದಾಗಿ ಹಿಂಸಿಸಿದ್ದಾನೆ. ಆತನ ದೇಹದ ಎಲ್ಲಾ ಭಾಗಗಳಲ್ಲಿ ಗಂಭೀರ ಗಾಯದ ಗುರುತುಗಳಿದ್ದವು. ಆತನ ಸ್ಥಿತಿ ನೋಡಿದರೆ ಒಬ್ಬರಿಗಿಂತ ಹೆಚ್ಚು ಮಂದಿಯೇ ಹೊಡೆದು ಕೊಂದಿದ್ದಾರೆ ಅನ್ನಿಸುತ್ತಿದೆ. ಹೃತಿಕ್ ಅವರ ನೆರೆಹೊರೆಯವರು ಹೇಳುವಂತೆ ಅವನು ತನ್ನ ಹೆತ್ತವರಿಗೆ ಒಬ್ಬನೇ ಮಗನಾಗಿದ್ದು, ದೆಹಲಿಯಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದನು.
ವರದಿಗಳ ಪ್ರಕಾರ, ಹೃತಿಕ್ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು.ಹೃತಿಕ್ ಮತ್ತು ಮಹಿಳೆ ಪರಸ್ಪರ ಸಮಯ ಕಳೆಯುತ್ತಿದ್ದಾಗ ಮಹಿಳೆಯ ಪತಿ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು.ತನ್ನ ಪತ್ನಿ ಬೇರೊಬ್ಬನ ಜೊತೆ ಇರುವುದನ್ನು ಕಂಡು ಕೋಪಗೊಂಡಿದ್ದಾನೆ.ತನ್ನ ಪತ್ನಿಗೂ ಥಳಿಸಿ ಹೃತಿಕ್‌ಗೆ ಥಳಿಸಿದ್ದರಿಂದ ಆತ ಸಾವನ್ನಪ್ಪಿದ್ದ.ಇತ್ತ ಈ ವಿಚಾರ ಹೃತಿಕ್ ಮನೆಯವರಿಗೆ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಹೃತಿಕ್ ನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಹೃತಿಕ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.ಸದ್ಯ ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.