Ad Widget .

ಹವಾಮಾನ ವರದಿ| ವಾಯುಭಾರ ಕುಸಿತ; ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಒಂದು ಭಾಗದಲ್ಲಿ ಒಣ ಹವೆ ಜೊತೆಗೆ ತೀವ್ರ ಮಂಜು ಆವರಿಸಿದೆ. ನಿತ್ಯವು ಮೈಕೊರೆವ ಚಳಿ ಕಾಡುತ್ತಿದೆ. ಇತ್ತ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಮೇಲೆ ಹೊಸ ಹೊಸ ಹವಾಮಾನ ವೈಪರಿತ್ಯಗಳ ಪ್ರಭಾವ ಉಂಟಾಗುತ್ತಿದೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಧಾರಣದಿಂದ ವ್ಯಾಪಕ ಮಳೆ ಆರ್ಭಟಿಸುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Ad Widget . Ad Widget .

ಸದ್ಯ ಲಕ್ಷದ್ವೀಪ ಹಾಗೂ ಮಾಲ್ಡೀವ್ಸ್ ಭಾಗದ ಸಾಗದಲ್ಲಿ ಮತ್ತು ವಾಯುಭಾರ ಕುಸಿತುವಾಗಿರುವುದು ಕಂಡು ಬಂದಿದೆ. ಇದು ಸ್ಪಷ್ಟ ಚಂಡಮಾರುತ ಪರಿಚಲನೆಯಾಗಿದೆ. ಇದರಿಂದ ತಮಿಳುನಾಡು, ಚೆನ್ನೈ ಸೇರಿದಂತೆ ಕರ್ನಾಟಕದ ಬೆಂಗಳೂರು ಸೇರಿದಂತೆ ಒಂದಷ್ಟು ಜಿಲ್ಲೆಗಳಲ್ಲಿ ಮುಂದಿನ 5 ದಿನ ಮಳೆ ಸಾಧ್ಯತೆ ಇದೆ ಎಂದು IMD ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ.ಎನ್.ಪುವಿಯರಸನ್ ಅವರು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಫೆಂಗಾಲ್ ಚಂಡಮಾರುತ ಬೆನ್ನಲ್ಲೆ ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿತ್ತು. ಇದೀಗ ಮತ್ತೆ ಎರಡು ಕಡೆ ವೈಪರಿತ್ಯಗಳು ಸೃಷ್ಟಿಯಾಗಿವೆ. ಇದರ ತಕ್ಕ ಮಟ್ಟಿನ ಪ್ರಭಾವದಿಂದಾಗಿ ರಾಜ್ಯ ಹವಾಮಾನದಲ್ಲಿ ಬದಲಾವಣೆಗಳು ಆಗಿವೆ.

ಮುಂದಿನ ಕೆಲವು ದಿನಗಳ ಕಾಲ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಕೆಲವೆಡೆ ಆಗಾಗ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ ಮಬ್ಬು ವಾತಾವರಣ ಜೊತೆಗೆ ಆಗಾಗ ಬಿಸಿಲಿನ ದರ್ಶನವು ಆಗಬಹುದು ಎನ್ನಲಾಗಿದೆ.

ಮೈಕೊರೆವ ಚಳಿ, ಒಣ ಹವೆ:
ಕರ್ನಾಟಕ ಕರಾವಳಿ ಭಾಗದ ಜಿಲ್ಲೆಗಳೂ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಉಂಟಾಗುವ ನಿರೀಕ್ಷೆಗಳು ಇವೆ. ಹೀಗಾಗಿ ಇಲ್ಲಿ ದೈನಂದಿನವಾಗಿ ಬೆಳಗ್ಗೆ ಮತ್ತು ಸಂಜೆ ಇಲ್ಲವೇ ರಾತ್ರಿ ದಟ್ಟ ಮಂಜು ಆವರಿಸಲಿದ್ದು, ಮೈಕೊರೆವ ಚಳಿ ಕಂಡು ಬರುತ್ತಿದೆ. ಸದ್ಯಕ್ಕೆ ಈ ಎರಡು ಭಾಗದ ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ ಇಲ್ಲ.

Leave a Comment

Your email address will not be published. Required fields are marked *