ಸಮಗ್ರ ನ್ಯೂಸ್: ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಕರೆದೊಯ್ದಿದ್ದಾರೆ.
ಮೃತರ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ ಚಿಕ್ಕಡ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 105 (ಕೊಲೆಗೆ ಕಾರಣವಲ್ಲದ ನರಹತ್ಯೆಗೆ ಶಿಕ್ಷೆ) ಮತ್ತು 118 (1) ಆರ್ / ಡಬ್ಲ್ಯೂ 3 (5) (ಸ್ವಯಂಪ್ರೇರಿತವಾಗಿ ಗಾಯ ಅಥವಾ ತೀವ್ರ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ನ ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಕ್ಷಾಂಶ್ ಯಾದವ್ ತಿಳಿಸಿದ್ದಾರೆ.