Ad Widget .

ಮಹಿಳಾ ಸಹೋದ್ಯೋಗಿಗೆ ಗುಂಡಿಕ್ಕಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್ ಟೇಬಲ್

ಸಮಗ್ರ ನ್ಯೂಸ್ : ಮಹಿಳಾ ಸಹೋದ್ಯೋಗಿಗೆ ಗುಂಡಿಕ್ಕಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಕಾನ್ಸ್ ಟೇಬಲ್ ಓರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಚಿತ್ತೋರ್ ಗಢದಲ್ಲಿ ನಡೆದಿದೆ.

Ad Widget . Ad Widget .

ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರನ್ನೂ ಚಿತ್ತೋರ್ ಗಢ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬೇಗುನ್ ಪೊಲೀಸ್ ಠಾಣೆಯ ಸಮೀಪದಲ್ಲಿ ನಡೆದಿದೆ. ಇಬ್ಬರೂ ಕಾನ್ಸ್ ಟೇಬಲ್ ಗಳು ಪ್ರೊಬೆಷನರಿ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಒಂದೇ ಕಟ್ಟಡದಲ್ಲಿ ಬೇರೆ ಬೇರೆ ರೂಂಗಳಲ್ಲಿ ವಾಸವಾಗಿದ್ದರು.ಕಾನ್ಸ್ ಟೇಬಲ್ ಸಿಯಾರಾಮ್, ಮಹಿಳಾ ಸಹೋದ್ಯೋಗಿ ಪೂನಂ ಮೇಲೆ ಗುಂಡು ಹಾರಿಸಿದ್ದಾರೆ.

Ad Widget . Ad Widget .

ಎಂದಿನಂತೆ ತನ್ನ ಡ್ಯೂಟಿ ಮುಗಿಸಿ ರೂಮಿಗೆ ತೆರಳಿದ್ದ ಸಿಯಾರಾಮ್, ಪೂನಂ ಬರುವುದನ್ನೇ ಕಾಯುತ್ತಿದ್ದ. ಆಕೆ ಬರುತ್ತಿದ್ದಂತೆ ಬಂದೂಕಿನಿಂದ ಆಕೆ ಎದೆಗೆ ಗುಂಡುಹಾರಿಸಿದ್ದಾನೆ. ಬಳಿಕ ಅದೇ ಬಂದೂಕಿನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಅಕ್ಕಪಕ್ಕದ ಜನರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Leave a Comment

Your email address will not be published. Required fields are marked *