ಸಮಗ್ರ ನ್ಯೂಸ್ : ಕಾಲೇಜಿಗೆ ಹೋಗುತ್ತಿರುವ ಯುವತಿಯರಿಗೆ, ಮಹಿಳೆಯರಿಗೆ ವಿಕೃತ ಕಾಮಿಯೊಬ್ಬ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ರಾಯಚೂರು ನಗರದ ಸಾಯಿಬಾಬಾ ಹಿಂಭಾಗದಲ್ಲಿ ನಡೆದಿದೆ.
ಆರೋಪಿಯನ್ನ ಅಕ್ಟರ್ ಎಂದು ಗುರುತಿಸಲಾಗಿದ್ದು, ಅಕ್ಟರ್ ರಾಯಚೂರು ನಗರದ ನಿಲ್ದಾಣದ ಬಳಿಯ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಾಲೇಜಿಗೆ ಹೋಗುವ ಹಿಂದೂ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದನು ಎನ್ನಲಾಗಿದೆ.
ನಂತರ ಅವರ ಮುಂದೆ ನಿಂತು ಮರ್ಮಾಂಗ ತೋರಿಸುತ್ತಿದ್ದನು. ವಿಕೃತ ಕಾಮಿ ಹಿಂದು ಯುವತಿಯರಿಗೆ ಮಾತ್ರ ಮರ್ಮಾಂಗ ತೋರಿಸುತ್ತಿದ್ದನು. ಈತನ ವಿಕೃತ ಕೃತ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯ ಇದೇ ರೀತಿಯಾಗಿ ಮಾಡುತ್ತಿದ್ದ, ಅಕ್ಟರ್‌ನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಕೂಡಲೇ ಪೊಲೀಸರು ಕಾಮುಕ ಅಕ್ಟರ್‌ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.